ಉಕ್ರೇನನ ೨ ನಗರಗಳಲ್ಲಿ ಯುದ್ಧ ವಿರಾಮವನ್ನು ಘೋಷಿಸಿದ ರಷ್ಯಾ !

ನಾಗರಿಕರು ಕ್ಷೇಮವಾಗಿ ಸ್ಥಳಾಂತರಗೊಳಿಸಲು ಅನುಮತಿ

ಮಾಸ್ಕೋ (ರಷ್ಯಾ) – ರಷ್ಯಾವು ಯುದ್ಧದ ೧೦ನೇಯ ದಿನದಂದು ಉಕ್ರೇನನಲ್ಲಿ ಮಾರಿಯುಪೊಲ ಹಾಗೂ ವೊಲನೋವಾಖಾ ಎಂಬ ೨ ನಗರಗಳಲ್ಲಿ ಯುದ್ಧವಿರಾಮವನ್ನು ಘೋಷಿಸಿದೆ. ರಷ್ಯಾವು ನಾಗರಿಕರನ್ನು ಉಕ್ರೇನ್‌ನಿಂದ ಹೊರಗೆ ಹೋಗಲಿ, ಎಂಬುದಕ್ಕಾಗಿ ಮಾನವಿಯತೆಯ ದೃಷ್ಟಿಯಿಂದ ಮಾರ್ಚ ೫ರಂದು ಬೆಳಿಗ್ಗೆ ೬ ಘಂಟೆಯಿಂದ ಯುದ್ಧವಿರಾಮವನ್ನು ಘೋಷಿಸಿದೆ. ರಷ್ಯಾದ ಸೈನ್ಯವು ಸುತ್ತುಗಟ್ಟಿರುವ ಮಾರಿಯುಪೊಲ ನಗರದ ನಿವಾಸಿಗಳು ಸ್ಥಳಾಂತರವಾಗಲು ಅನುಮತಿ ನೀಡಲಾಗಿದೆ.

ರಷ್ಯಾವು ವಿಶ್ವಸಂಸ್ಥೆಯಲ್ಲಿ, ಉಕ್ರೇನ-ರಷ್ಯಾದ ಗಡಿಯಲ್ಲಿ ರಷ್ಯಾವು ಬಸ್ ಅನ್ನು ಒದಗಿಸಿದೆ. ಈ ಮೂಲಕ ಉಕ್ರೇನನ ಖಾರಕೀವ ಹಾಗೂ ಸುಮೀ ನಗರಗಳಲ್ಲಿ ಸಿಲುಕಿಕೊಂಡಿರುವ ವಿದೇಶಿಯರು (ಅದರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಮಾವೇಶವಿದೆ) ಉಕ್ರೇನನಿಂದ ಹೊರಗೆ ತೆಗೆಯಲಾಗುವುದು.