ಯುದ್ಧಕ್ಕೆ ರಷ್ಯಾವು ಹೊಣೆಗಾರವನ್ನಾಗಿಸಬೇಕು ! – ಜೀ ಸೆವೆನ್ ರಾಷ್ಟ್ರಗಳು

ಬ್ರುಸ್ಲೆಸ್ – ಅಮೇರಿಕಾ, ಬ್ರಿಟನ್, ಪ್ರಾನ್ಸ, ಜರ್ಮನಿ, ಇಟಲಿ, ಜಪಾನ್ ಹಾಗೂ ಕೆನಡಾ ಈ ೭ ರಾಷ್ಟ್ರಗಳ ಗುಂಪಿರುವ ಜೀ ಸೆವೆನ್ ಸಂಘಟನೆಗಳ ವಿದೇಶಾಂಗ ಮಂತ್ರಿಗಳು ರಷ್ಯಾ ಹಾಗೂ ಉಕ್ರೇನ್‌ನ ಯುದ್ಧದ ಬಗ್ಗೆ, ಉಕ್ರೇನ್ನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಸೈನಿಕರ ಆಕ್ರಮಣಕ್ಕೆ ಯಾರು ಕಾರಣಕರ್ತರಾಗಿದ್ದಾರೆ, ಅವರನ್ನು ಹೊಣೆಗಾರರೆಂದು ನಿರ್ಧರಿಸಬೇಕು. ಈ ಆಕ್ರಮಣದಲ್ಲಿ ಕ್ಲಸ್ಟರ ಬಾಂಬ್‌ನಂತಹ ನಿರ್ಬಂಧವನ್ನು ತಂದಿರುವಂತಹ ಶಸ್ತ್ರಾಸ್ತ್ರಗಳ ಉಪಯೋಗ ಮಾಡಲಾಗಿರುವುದರಿಂದ ಇದು ಅಪರಾಧಕ್ಕಾಗಿ ಸೂಕ್ತ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ ಎಂದು ಹೇಳಿದೆ.

೧. ಜಿ ಸೆವೆನ್ ತೆಗೆದುಕೊಂಡ ಸಭೆಯ ನಂತರ, ರಷ್ಯಾದ ಆಕ್ರಮಣವು ಚಿಂತೆಯ ವಿಷಯವಾಗಿದೆ. ಶಾಂತಿ ಹಾಗೂ ಸುರಕ್ಷೆ ಇವೆರಡು ವಿಷಯಗಳಿಗೆ ಆದ್ಯತೆ ಇದೆ. ಆದ್ದರಿಂದಲೇ ನಾವು ಈ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರರೆಂಂದು ನಿರ್ಧರಿಸುವ ಬಗ್ಗೆ ಚರ್ಚೆಯನ್ನು ಮಾಡಿದೆವು.

೨. ೨೦೧೪ರಲ್ಲಿ ರಷ್ಯಾವು ಉಕ್ರೆನ್‌ನಲ್ಲಿಯ ಕ್ರಿಮಿಯಾ ಪ್ರಾಂತದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡ ನಂತರ ಈ ರಾಷ್ಟ್ರಗಳ ಗುಂಪಿನಿಂದ ರಷ್ಯಾವನ್ನು ತೆಗೆದುಹಾಕಲಾಗಿತ್ತು. ಆನಂತರವೂ ರಷ್ಯಾವು ಕ್ರಿಮಿಯಾದ ಮೇಲಿನ ಹಕ್ಕನ್ನು ಬಿಡಲಿಲ್ಲ.