ರಶಿಯಾದ ಮೇಲೆ ಹೇರಿರುವ ನಿರ್ಬಂಧ ಯುದ್ಧದ ಘೋಷಣೆಯಂತಿದೆ

ಪುತಿನ್ ಪಾಶ್ಚಿಮಾತ್ಯ ದೇಶಗಳಿಗೆ ಉದ್ದೇಶಿಸಿ ನೀಡಿದ ಹೇಳಿಕೆ

ಮಾಸ್ಕೊ (ರಶಿಯಾ) – ಪಾಶ್ಚಿಮಾತ್ಯ ದೇಶಗಳಿಂದ ಅವರ ದೇಶದ ಮೇಲೆ ಹೇರಲಾಗಿರುವ ನಿರ್ಬಂಧವು ಯುದ್ಧದ ಘೋಷಣೆಯಂತಿದೆ ಎಂದು ರಶಿಯಾ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ‘ಉಕ್ರೇನ್ ವಾಯುಮಾರ್ಗವನ್ನು ನಿಷೇಧಿತ ಪ್ರದೇಶವೆಂದು (ನೊ ಫ್ಲಾಯ್ ಝೋನ್) ಘೋಷಿಸುವ ಯಾವುದೇ ಪ್ರಯತ್ನವನ್ನು ಮಾಡಿದರೆ ಯುರೋಪ ಮತ್ತು ಜಗತ್ತು ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಲಿದೆ’, ಎಂದು ಪುತಿನ್ ಎಚ್ಚರಿಕೆಯನ್ನು ನೀಡಿದ್ದಾರೆ. ನಾಟೋ ‘ನೊ ಫ್ಲೈ ಝೋನ’ ಘೋಷಿಸುವಂತೆ ಉಕ್ರೇನ್ ಮಾಡಿದ್ದ ಮನವಿಯನ್ನು ನಿರಾಕರಿಸಿದೆ; ಏಕೆಂದರೆ ‘ಹೀಗೆ ಮಾಡಿದರೆ ಅದರಿಂದ ರಶಿಯಾಕ್ಕೆ ದೊಡ್ಡ ಯುದ್ಧ ಮಾಡಲು ಉತ್ತೇಜಿಸಿದಂತೆ ಆಗುವುದು’, ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರವೆಂದು ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮಧ್ಯವರ್ತಿ ಬ್ಯಾಂಕ್‌ಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದೆ. ಕಂಪನಿಗಳಿಗೆ ರಷ್ಯಾದಲ್ಲಿ ಉದ್ಯಮ ನಡೆಸಲು ನಿರಾಕರಿಸಿವೆ.

ನಮಗೆ ರಷ್ಯನ್ ತಯಾರಿಕೆಯ ಯುದ್ಧ ವಿಮಾನಗಳನ್ನು ನೀಡಿರಿ ! – ಉಕ್ರೇನ್ ರಾಷ್ಟ್ರಾಧ್ಯಕ್ಷರಿಂದ ಪಾಶ್ಚಿಮಾತ್ಯ ದೇಶಗಳಿಗೆ ಮನವಿ

ಕೀವ್ (ಉಕ್ರೇನ್) – ಉಕ್ರೇನ್ ರಾಷ್ಟ್ರಾಧ್ಯಕ್ಷರಾದ ವ್ಲೊದಿಮಿರ್ ಝೆಲೆನಸ್ಕಿ ಇವರು ಪಾಶ್ಚಿಮಾತ್ಯ ದೇಶಗಳಲ್ಲಿ ಅವರಿಗೆ ರಷ್ಯನ್ ತಯಾರಿಕೆಯ ಯುದ್ಧ ವಿಮಾನಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ‘ಗಾಳಿಯಲ್ಲಿ ಹೋರಾಡಲು ವಿಮಾನ ಸಿಗದಿದ್ದರೆ, ಭೂಮಿಯ ಮೇಲೆ ರಕ್ತಪಾತ ಹೆಚ್ಚಾಗಲಿದೆ,’ ಎಂದು ಝೆಲೆನಸ್ಕಿ ಹೇಳಿದ್ದಾರೆ.

ರಷ್ಯಾ ಮೂರನೇಯ ಅಣು ಸ್ಥಾವರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ – ಉಕ್ರೇನ್

ರಷ್ಯನ್ ಸೈನ್ಯವು ಇಲ್ಲಿಯವರೆಗೆ ೨ ಉಕ್ರೇನಿಯನ್ ಅಣುಸ್ಥಾವರ ತನ್ನ ವಶದಲ್ಲಿ ತೆಗೆದುಕೊಂಡಿದೆ ಮತ್ತು ಮೂರನೇಯ ಸ್ಥಾವರದ ದಿಕ್ಕಿನಲ್ಲಿ ಮುಂದುವರಿಯುತ್ತಿದೆಯೆಂದು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆನ್‌ಸ್ಕಿ ಇವರು ಹೇಳಿದ್ದಾರೆ.

ಝೆಲೆನ್‌ಸ್ಕಿ ಅವರಿಂದ ಜೊ ಬಾಯಡೆನರೊಂದಿಗೆ ಚರ್ಚೆ

ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆನ್ಸಕಿ ಇವರು ಅಮೇರಿಕಾದ ಅಧ್ಯಕ್ಷ ಜೊ ಬಾಯಡೆನ ಇವರೊಂದಿಗೆ ಸುರಕ್ಷೆ, ಆರ್ಥಿಕ ಬೆಂಬಲ ಮತ್ತು ರಷ್ಯಾ ವಿರುದ್ಧ ನಿರ್ಬಂಧವನ್ನು ಮುಂದುವರಿಸುವ ಕುರಿತು ಚರ್ಚಿಸಿದರು.

ಉಕ್ರೇನ್‌ನ ಝಿಟೊಮಿರನ ಮೆಟ್ರೊ ಸ್ಟೇಶನ ಹತ್ತಿರ ಕ್ಷಿಪಣಿ ಮೂಲಕ ದಾಳಿ

ಉಕ್ರೇನ್ ರಾಜ್ಯ ತುರ್ತು ಪರಿಸ್ಥಿತಿಯ ಸೇವೆಯನುಸಾರ, ಝಿಟೊಮಿರನ ಕೊರೊಸ್ಟೆನ ಮೆಟ್ರೊ ಸ್ಟೇಶನ ಹತ್ತಿರ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ ಒಬ್ಬ ಮೃತಪಟ್ಟಿದ್ದು ಮತ್ತಿಬ್ಬರು ಗಾಯಗೊಂಡಿದ್ದಾರೆ.

ರಷ್ಯಾ ಮನೋರೋಗಿಗಳ ಆಸ್ಪತ್ರೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ

ರಷ್ಯನ್ ಸೈನ್ಯವು ಉಕ್ರೇನ್‌ನ ಬೊರೊಡಂಕಾ ನಗರದ ಮನೋರೋಗಿಗಳ ಆಸ್ಪತ್ರೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಆ ಆಸ್ಪತ್ರೆಯಲ್ಲಿ ೬೭೦ ರೋಗಿಗಳು ಇರುವ ಮಾಹಿತಿಯಿದೆ. ಪ್ರಾದೇಶಿಕ ಗವರ್ನರ ಒಲೆಕ್ಸಿ ಇವರು ಮಾತನಾಡುತ್ತಾ, “ಈ ಜನರನ್ನು ಹೇಗೆ ಹೊರಗೆ ತೆಗೆಯುವುದು, ಅವರಿಗೆ ಹೇಗೆ ಸಹಾಯ ಮಾಡುವುದೆಂದು ನಮಗೆ ತಿಳಿಯುತ್ತಿಲ್ಲ. ಅವರಿಗೆ ನಿರಂತರವಾಗಿ ನೀರು ಮತ್ತು ಔಷಧಿಗಳ ಅವಶ್ಯಕತೆ ಇರುತ್ತದೆ. ಅವರಲ್ಲಿ ಬಹಳಷ್ಟು ಜನರು ಅನೇಕ ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ” ಎಂದು ಹೇಳಿದ್ದಾರೆ.