ರಷ್ಯಾ ಯುಕ್ರೇನ್ ಮೇಲೆ ದಾಳಿ ಮಾಡಿದರೆ ರಷ್ಯಾದ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದು ! – ಅಮೆರಿಕ

ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ‘ತಬಲಿಗೀ ಜಮಾತ’ ಸಂಘಟನೆಯ ಮೇಲೆ ನಿರ್ಬಂಧ !

‘ತಬಲಿಗೀ ಜಮಾತ’ ಎಂಬ ಸುನ್ನಿ ಮುಸಲ್ಮಾನರ ಧಾರ್ಮಿಕ ಸಂಘಟನೆಯ ಮೇಲೆ ನಿರ್ಬಂಧ ಹೇರುವ ಬಗ್ಗೆ ಸೌದಿ ಅರೇಬಿಯಾದ ಇಸ್ಲಾಮಿ ವ್ಯವಹಾರಗಳ ಮಂತ್ರಿಗಳಾದ ಡಾ. ಅಬ್ದುಲ ಲತೀಫ ಅಲ್-ಅಲಶೇಕರವರು ಸಾಮಾಜಿಕ ಮಾಧ್ಯಮಗಳ ಮೂಲಕ ಘೋಷಿಸಿದ್ದಾರೆ.

೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ !

ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಲೋಕಾರಿ ಗ್ರಾಮದ ಮಂದಿರದಿಂದ ೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ.

ಇಸ್ರೇಲ್‌ನ ಮಾಜಿ ಪ್ರಧಾನಮಂತ್ರಿ ಬೆಂಜಮಿನ ನೇತನ್ಯಾಹು ಇವರಿಗೆ ಶ್ರೀಮದ್ ಭಗವದ್ಗೀತೆಯನ್ನು ಉಡುಗೊರೆ ನೀಡಿದ ನಟಿ ಉರ್ವಶಿ ರೌತೆಲಾ

ಭಾರದ ನಟಿ ಉರ್ವಶಿ ರೌತೆಲಾ ಇವರು ಸದ್ಯ ಇಸ್ರೇಲ್‌ದ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಇಸ್ರೇಲ್‌ನ ಮಾಜಿ ಪ್ರಧಾನಮಂತ್ರಿ ಬೆಂಜಾಮಿನ ನೆತನ್ಯಾಹು ಇವರನ್ನು ಭೇಟಿಯಾಗಿ ಅವರಿಗೆ ಶ್ರೀಮದ್ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು.

ಪಾಕಿಸ್ತಾನದ ಲಾಲ ಮಸೀದಿಯಲ್ಲಿ ಹೆಣ್ಣು ಮಕ್ಕಳಿಗೆ ಧರ್ಮನಿಂದನೆ ಆರೋಪಿಯ ಶಿರಚ್ಛೇದ ಮಾಡುವ ತರಬೇತಿ ಸಿಗುತ್ತಿದೆ!

ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಧರ್ಮನಿಂದನೆಯ ಆರೋಪದ ಮೇರೆಗೆ ಶ್ರೀಲಂಕಾದ ನಾಗರಿಕ ಪ್ರಿಯಾಂಥಾ ಕುಮಾರ ಇವರನ್ನು ಮತಾಂಧರ ಗುಂಪು ಕೈಕಾಲು ಮುರಿದು ಜೀವಂತವಾಗಿ ಸುಟ್ಟಿದ್ದರು.

ಅಮೇರಿಕದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡರೂ ೧೪ ಜನರಿಗೆ ‘ಓಮಿಕ್ರಾನ್ ಸೋಂಕು !

ಅಮೇರಿಕದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೆಯ ಎರಡೂ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡ ಬಳಿಕವೂ ಕೆಲವರಿಗೆ ಕೊರೊನಾದ ಹೊಸ ರೂಪಾಂತರಿತ ‘ಓಮಿಕ್ರಾನ್ ಸೋಂಕು ತಗುಲಿದೆ.

‘ಭಾರತೀಯ ಸೈನಿಕರ ಕೈಗಳಿಗೆ ರಕ್ತ ಬಳಿಯುತ್ತಿದ್ದಾರೆ!’(ಅಂತೆ)

ಭಾರತದ ಮೂರೂ ಸೈನ್ಯ ದಳಗಳ ಮುಖ್ಯಸ್ಥ ಬಿಪಿನ್ ರಾವತ್ ಇವರ ಮತ್ತು ಚೀನಾದ ಪ್ರಖರ ವಿರೋಧಿಯಾಗಿದ್ದ ತೈವಾನಿನ ಸೇನಾದಳದ ಮುಖ್ಯಸ್ಥ ಇವರ ಅಪಘಾತದಲ್ಲಿ ಸಾಮ್ಯತೆಯಿದೆ, ಎಂದು ಭಾರತದ ಸಂರಕ್ಷಣಾ ತಜ್ಞ ಬ್ರಹ್ಮ ಚೇಲಾನಿ ಇವರು ದಾವೆ ಮಾಡಿದ ನಂತರ ಚೀನಾದ ಸರಕಾರಿ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಟೀಕೆ ಮಾಡಿತ್ತು.

‘ಭಾರತದಲ್ಲಿ ರಾ. ಸ್ವ. ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ !’ (ಅಂತೆ)

ಭಾರತದಲ್ಲಿ ಏನು ನಡೆಯುತ್ತಿದೆ, ಎಂಬುದು ಕೇವಲ ನಮ್ಮ ಅಥವಾ ವಿಶೇಷವಾಗಿ ಕಾಶ್ಮೀರದಷ್ಟೇ ಆಗಿಲ್ಲ. ಬದಲಾಗಿ ಇದು ಎಲ್ಲಾ ಭಾರತೀಯರ ದುರ್ದೈವವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಭಾರತದಲ್ಲಿರುವ ಶೇಕಡಾ ೫೦ ರಿಂದ ೬೦ ಕೋಟಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುತ್ತಿದೆ.

ಚೀನಾದ ತೀವ್ರ ವಿರೋಧಿಗಳಾದ ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತಗಳಲ್ಲಿನ ಸಾಮ್ಯತೆಗಳು

ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ರಕ್ಷಣಾ ತಜ್ಞರು ಹಾಗೂ ಪ್ರಸಾರ ಮಾಧ್ಯಮದವರು ಇವೆರಡನ್ನು ತುಲನೆ ಮಾಡುತ್ತಿದ್ದಾರೆ.

‘ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಭಾರತೀಯ ಸೈನ್ಯದ ಅಶಿಸ್ತೇ ಕಾರಣ ! (ವಂತೆ)

ಇಂತಹ ಸುಳ್ಳು ಆರೋಪಗಳನ್ನು ಮಾಡಿ ಭಾರತೀಯ ಸೈನ್ಯ ಮತ್ತು ಭಾರತೀಯ ನಾಗರೀಕರ ಮಾನಸಿಕವಾಗಿ ತಗ್ಗಿಸುವ ಚೀನಾದ ಈ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಚೀನಾವು ಗಮನದಲ್ಲಿಡಬೇಕು !