ವಾರ್ಸಾ(ಪೊಲಂಡ) – ಪೊಲಂಡ ಉಕ್ರೇನ್‌ಗೆ ರಷ್ಯಾದ ವಿರುದ್ಧ ಹೋರಾಡಲು ಯುದ್ಧ ವಿಮಾನಗಳನ್ನು ನೀಡುವುದಾಗಿ ಘೋಷಿಸಿತ್ತು; ಆದರೆ ‘ಯಾವ ದೇಶ ಈ ಯುದ್ಧದಲ್ಲಿ ಉಕ್ರೇನ್ ದೇಶಕ್ಕೆ ಯುದ್ಧ ವಿಮಾನಗಳನ್ನು ನೀಡುವುದೋ, ಅವರನ್ನೂ ಸಹ ಯುದ್ಧದಲ್ಲಿ ಸೇರಿಸಲಾಗುವುದು’, ಎಂದು ರಷ್ಯಾದ ಅಧ್ಯಕ್ಷ ಪುತಿನ್ ಇವರು ಎಚ್ಚರಿಕೆ ನೀಡಿದ ಬಳಿಕ ಪೊಲಂಡ ತಮ್ಮ ಘೋಷಣೆಯನ್ನು ಹಿಂಪಡೆದಿದೆ. ‘ನಾವು ಉಕ್ರೇನ್ ದೇಶಕ್ಕೆ ನಮ್ಮಲ್ಲಿರುವ ‘ಮಿಗ್ ೨೯’ ಮತ್ತು ‘ಸುಖೋಯ್ ೨೫’ ಈ ಯುದ್ಧ ವಿಮಾನಗಳನ್ನು ನೀಡಲು ಸಿದ್ಧರಿದ್ದೇವೆ; ಆದರೆ ಅದರ ನಷ್ಟ ಪರಿಹಾರಕ್ಕೆ ಅಮೇರಿಕಾ ನಮಗೆ ‘ಎಫ್ ೧೬’ ವಿಮಾನಗಳನ್ನು ಕೊಡಬೇಕು’, ಎಂದು ಪೊಲಂಡ ಹೇಳಿತ್ತು. ಅದಕ್ಕೆ ಅಮೇರಿಕಾ ಒಪ್ಪಿಗೆಯನ್ನು ಸೂಚಿಸಿತ್ತು. ‘ಒಂದು ವೇಳೆ ‘ನಾಟೊ’ (ನಾರ್ತ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್)ಈ ಸಂಸ್ಥೆಯೊಂದಿಗೆ ಸಂಬಂಧಿಸಿದ ದೇಶಗಳು ಉಕ್ರೇನ್ ದೇಶಕ್ಕೆ ಸೈನ್ಯ ಸಹಾಯವನ್ನು ಮಾಡಿದರೆ, ಅವರ ಮೇಲೆಯೂ ಕ್ರಮ ಜರುಗಿಸಲಾಗುವುದು’, ಎಂದು ರಷ್ಯಾ ಈ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು.