ಪ್ಯಾಲೆಸ್ಟೈನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿ ಮುಕೂಲ ಆರ್ಯ ಇವರ ಸಾವು

ರಾಮಲ್ಲಾಹ (ಪ್ಯಾಲೆಸ್ಟೈನ್) – ಪ್ಯಾಲೆಸ್ಟೈನ್‌ನಲ್ಲಿ ಭಾರತದ ಪ್ರತಿನಿಧಿ ಮುಕೂಲ ಆರ್ಯ ಇವರು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮಾಡಿ, ಭಾರತದ ರಾಮಲ್ಲಾಹದ ಪ್ರತಿನಿಧಿ ಮುಕೂಲ ಆರ್ಯ ಇವರ ನಿಧನದ ಸುದ್ದಿ ಕೇಳಿ ದೊಡ್ಡ ಆಘಾತವಾಗಿದೆ. ಅವರು ಪ್ರಕಾಶಮಾನವಾದ ಮತ್ತು ಪ್ರತಿಭಾವಂತ ಅಧಿಕಾರಿಯಾಗಿದ್ದರು. ನನ್ನ ಸದ್ಭಾವನೆ ಅವರ ಕುಟುಂಬದವರೊಂದಿಗೆ ಮತ್ತು ಅವರ ಪ್ರೀತಿಪಾತ್ರರಾದವರಲ್ಲಿ ಇದೆ ಎಂದು ಹೇಳಿದರು.