ಮೂರು ರಾಷ್ಟ್ರದ ಪ್ರಮುಖರೊಂದಿಗೆ ಚರ್ಚೆಯನ್ನು ಮಾಡಿದ ನಂತರ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನರು ಯುದ್ಧವನ್ನು ನಿಲ್ಲಿಸಲು ನಿರಾಕರಣೆ

ಕೀವ/ಮಾಸ್ಕೋ – ಉಕ್ರೇನಿನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕೀಯವರು ಇಸ್ರಾಯಿಲ್‌ನ ಪ್ರಧಾನಮಂತ್ರಿ ನಫ್ಟಾಲೀ ಬೆನೆಟ, ತುರ್ಕಸ್ತಾನದ ರಾಷ್ಟ್ರಾಧ್ಯಕ್ಷ ಎರ್ದೋಆನ ಹಾಗೂ ಪ್ರಾನ್ಸನ ರಾಷ್ಟ್ರಾಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನರು ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನರೊಂದಿಗೆ ಚರ್ಚೆಯನ್ನು ಮಾಡಿ ಯುದ್ಧ ನಿಲ್ಲಿಸುವಂತೆ ವಿನಂತಿಸಿದ್ದರು. ಪುತಿನ್‌ರವರು ಆ ಮೂರ ರಾಷ್ಟ್ರಾಧ್ಯಕ್ಷರೊಂದಿಗೆ ಚರ್ಚೆಯನ್ನು ಮಾಡಿದ ನಂತರವೂ ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದರು. ಅದಕ್ಕೆ ಎರಡು ಕಾರಣಗಳಿವೆ ಎಂದು ಹೇಳಲಾಗುತ್ತಿದೆ.

೧. ಮೊದಲನೆಯದು ಪುತಿನ್‌ರಿಗೆ ಅಮೇರಿಕಾ ಹಾಗೂ ಯುರೋಪಿನ ಮೇಲೆ ವಿಶ್ವಾಸವಿಲ್ಲ. ‘ಅಮೇರಿಕಕ್ಕೆ ಯುರೋಪಿನ ಕಾರಣದಿಂದ ರಷ್ಯಾವನ್ನು ಸುತ್ತುವರಿಯಬೇಕಿದೆ’, ಎಂದು ಪುತಿನ್‌ರಿಗೆ ಅನಿಸುತ್ತಿದೆ. ಉಕ್ರೇನ್‌ಗೆ ಅಮೇರಿಕದ ಪ್ರಭಾವವಿರುವ ‘ನಾರ್ಥ ಅಟ್ಲಾಂಟಿಕ ಟೀಟೀ ಆರ್ಗನೈಜೆಶನ್ನಲ್ಲಿ (‘ನಾಟೋ’ ನಲ್ಲಿ) ಸಹಭಾಗಿಯಾಗಬೇಕಾಗಿದೆ. ಇದರಿಂದ ರಷ್ಯಾದ ಸುರಕ್ಷತೆಗೆ ಅಪಾಯ ಉಂಟಾಗಬಹುದು.

೨. ಉಕ್ರೇನ್ ಯುರೋಪಿಯನ್ ಯುನೀಯನ್ ಸದಸ್ಯತ್ವದ ಬೇಡಿಕೆಯನ್ನು ಮಾಡಿದೆ. ‘ನಾಟೋ’ ಹಾಗೂ ಯುರೋಪಿಯನ್ ಯುನಿಯನ್‌ನ ಒಪ್ಪಂದದ ಅನುಸಾರ, ಒಂದುವೇಳೆ ಯಾವುದೇ ಸದಸ್ಯ ದೇಶದ ಮೇಲೆ ಗುಂಡು ಹಾರಾಟವಾದರೆ ಎಲ್ಲಾ ದೇಶವು ಒಟ್ಟಾಗಿ ಹೋರಾಡುತ್ತದೆ. ಆದ್ದರಿಂದ ಉಕ್ರೇನ ‘ನಾಟೋದ ಸದಸ್ಯವಾದ ಕೂಡಲೇ ರಷ್ಯಾಕ್ಕೆ ಎಲ್ಲಾ ಕಡೆಯಿಂದ ನಾಟೋ ದೇಶವು ಸುತ್ತುವರಿಯಬಹುದು. ಇದರಿಂದ ಅಮೇರಿಕಕ್ಕೆ ರಷ್ಯಾದ ಮೇಲೆ ನೇರ ದಾಳಿ ಮಾಡಲು ಸ್ವಾತಂತ್ರ್ಯವು ಸಿಗುವುದು.

೩. ಇನ್ನೊಂದು ಕಾರಣವೆಂದರೆ ರಷ್ಯಾಗೆ ಯಾವ ಸ್ಥಾನ ಇತ್ತೋ, ಅದೇ ಸ್ಥಾನ ಪುತಿನ್ ಒವರಿಗೆ ಬೇಕಿದೆ. ಇತ್ತಿಚೆಗೆ ರಷ್ಯಾದ ಆರ್ಥಿಕವ್ಯವಸ್ಥೆಯು ಕುಸಿದಿದೆ. ಎರಡನೆ ಮಹಾಯುದ್ಧದ ನಂತರ ಸೋವಿಯತ್ ಯುನಿಯನ್ ಒಂದು ದೊಡ್ಡ ಶಕ್ತಿಯೆಂದು ಉದಯಕ್ಕೆ ಬರುತ್ತಿತ್ತು. ರಷ್ಯಾಗೆ ಯುರೋಪ್ ದೇಶದ ಮೇಲೆ ಪ್ರಭಾವ ಪಡೆಯಬೇಕಾಗಿದ್ದಿತು. ಆದ್ದರಿಂದ ರಷ್ಯಾಗೆ ಯುರೋಪ್ ದೇಶಗಳೊಂದಿಗಿನ ಸಂಬಂಧವು ಹಾಳಾಯಿತು. ಅಮೇರಿಕಾಗೆ ರಷ್ಯಾದ ಈ ಪರಿಸ್ಥಿತಿಯ ಲಾಭವನ್ನು ಪಡೆಯಬೇಕಾಗಿದೆ; ಆದ್ದರಿಂದ ಉಕ್ರೇನ ನಾಟೋ ಹಾಗೂ ಯುರೋಪಿಯನ್ ಯುನಿಯನ್‌ನ ಸದಸ್ಯವಾಗಲೆಂದು ಇಚ್ಛೆಯು ಇದೆ’, ಎಂದು ಅಮೇರಿಕಾಗೆ ಇಚ್ಛೆ ಇದೆ. ಇದರಿಂದ ಅಮೇರಿಕಾ ಎಲ್ಲಕ್ಕಿಂತ ದೊಡ್ಡ ಶಕ್ತಿಯೆಂದು ಉದಯವಾಗುವುದು.

೩ ರಾಷ್ಟ್ರಪ್ರಮುಖರೊಂದಿಗಿನ ಚರ್ಚೆಯಲ್ಲಿ ಏನಾಯಿತು ?

ಪ್ರಾನ್ಸನ ರಾಷ್ಟ್ರಾಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್‌ರು ಪುತಿನರೊಂದಿಗೆ ಚರ್ಚೆಯನ್ನು ಮಾಡಿದರು. ಆಗ ಅವರು ಉಕ್ರೇನನ ಪರಮಾಣು ಪ್ರಕಲ್ಪಕ್ಕೆ ಗುರಿಯಿಡಬೇಡಿ’, ಎಂದು ಆಹ್ವಾನಿಸಿತು. ಇದಕ್ಕೆ ಪುತಿನ್‌ರವರು ಮ್ಯಾಕ್ರಾನ್‌ಗೆ, ಉಕ್ರೇನ್‌ನ ಪರಮಾಣು ಪ್ರಕಲ್ಪದ ಮೇಲೆ ಆಕ್ರಮಣ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.

ಉಕ್ರೇನ್ ಶರತ್ತನ್ನು ಒಪ್ಪಿಕೊಂಡರೆ ಯುದ್ಧವು ನಿಲ್ಲುವುದು ! – ಪುತಿನ್

ತುರ್ಕಸ್ತಾನದ ರಾಷ್ಟ್ರಾಧ್ಯಕ್ಷ ಎರ್ದೋಆನರು ವ್ಲಾದಿಮಿರ ಪುತಿನರೊಂದಿಗೆ ಚರ್ಚೆಯನ್ನು ಮಾಡಿದರು ಅದರಲ್ಲಿ ಪುತಿನ್‌ರು ಎರ್ದೋಆನರಿಗೆ, ಉಕ್ರೇನ್ ನಮ್ಮ ಶರತ್ತಿಗೆ ಒಪ್ಪಿದರೆ ಯುದ್ಧವು ಕೂಡಲೆ ನಿಲ್ಲುವುದು ಎಂದು ಸ್ಪಷ್ಟವಾಗಿ ಹೇಳಿದರು.

ಇಸ್ರಾಯಿಲ್ ಮದ್ಯಸ್ಥಿಕೆ ವಹಿಸಲು ಸಿದ್ಧ !

ಇಸ್ರಾಯಿಲ್ ಪ್ರದಾನಮಂತ್ರಿ ನಫ್ಟಾಲೀ ಬೆನೆಟರು ಪುತಿನರೊಂದಿಗೆ ಚರ್ಚೆಯನ್ನು ಮಾಡಿ ಈ ಯುದ್ಧದಲ್ಲಿ ಮದ್ಯಸ್ಥಿಕೆ ಮಾಡುವ ಪ್ರಸ್ತಾಪವನ್ನು ಇಟ್ಟರು.