ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ ! – ಪೊಪ

ವ್ಯಾಟಿಕನ ಸಿಟಿ – ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ. ಅಲ್ಲಿ ರಕ್ತ ಹಾಗೂ ಕಣ್ಣೀರಿನ ನದಿಯೇ ಹರಿಯುತ್ತಿದೆ. ಇದು ಯುದ್ಧವೇ ಆಗಿದ್ದು ಅದರಲ್ಲಿ ಸಾವು ಹಾಗೂ ವಿಧ್ವಂಸವಾಗುತ್ತಿದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೊಪ ಫ್ರಾನ್ಸಿಸರವರು ಪ್ರತಿಪಾದಿಸಿದರು. ವ್ಯಾಟಿಕನ ಸಿಟಿಯಲ್ಲಿನ ಸೇಂಟ ಪೀಟರ್ಸ ಚೌಕದಲ್ಲಿ ಸಾಪ್ತಾಹಿಕ ಮೇಳದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಅವರು ಹೇಳಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ಕೂಡ ಶಾಂತಿಯ ಹಾಗೂ ನಾಗರಿಕರಿಗೆ ಸುರಕ್ಷಿತ ಜೀವನ ನಡೆಸಲು ಮಾರ್ಗ ಲಭ್ಯ ಮಾಡಿಕೊಡುವಂತೆ ಕರೆ ನೀಡಿದರು. ರಷ್ಯಾವು ಉಕ್ರೇನನ ಮೇಲೆ ನಡೆಸಿದ ಕಾರ್ಯಾಚರಣೆಯನ್ನು ‘ವಿಶೇಷ ಸೈನಿಕ ಅಭಿಯಾನ’ ಎಂದು ಹೇಳಿದೆ; ಆದರೆ ಪೊಪ ಇವರು ಮಾತ್ರ ಅದು ಯುದ್ಧವೇ ಆಗಿದೆ ಎಂದು ಹೇಳಿದ್ದಾರೆ.

ರಷ್ಯಾ ತನ್ನ ನಿಲುವಿನ ಬಗ್ಗೆ ದೃಢ

ರಷ್ಯಾದ ಬೇಡಿಕೆಗಳನ್ನು ಒಪ್ಪಿಕೊಂಡರೆ ಮಾತ್ರ ಉಕ್ರೇನ ಮೇಲೆ ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಲಾಗುವುದು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ ಪುತಿನರವರು ಪುನಃ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ಅವರು ಯುದ್ಧಕ್ಕೆ ಹೋಲಿಸಿದ್ದಾರೆ.

೧೫ ಲಕ್ಷ ಜನರು ದೇಶವನ್ನು ತೊರೆದರು

ರಷ್ಯಾವು ಉಕ್ರೇನನ ಮೇಲೆ ದಾಳಿ ಮಾಡಿದಾಗಲಿಂದ ಇಲ್ಲಿಯತನಕ ಸುಮಾರು ೧೫ ಲಕ್ಷಕ್ಕಿಂತ ಹೆಚ್ಚು ಉಕ್ರೇನ ನಾಗರಿಕರು ದೇಶವನ್ನು ಬಿಟ್ಟಿದ್ದಾರೆ. ಅವರೆಲ್ಲರೂ ಉಕ್ರೇನನ ಅಕ್ಕಪಕ್ಕದ ದೇಶಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆದ್ದರಿಂದ ಎರಡನೇಯ ಮಹಾಯುದ್ಧದ ನಂತರ ಮೊಟ್ಟಮೊದಲ ಬಾರಿ ಯೊರೊಪಿನಲ್ಲಿ ನಿರಾಶ್ರಿತರ ಸಂಕಟವು ತೀವ್ರವಾಗುತ್ತಿರುವುದಾಗಿ ವಿಶ್ವಸಂಸ್ಥೆಯು ಮಾರ್ಚ ೬ರಂದು ತನ್ನ ನಿರೀಕ್ಷಣೆಯಲ್ಲಿ ನೊಂದಾಯಿಸಿದೆ.

೧೧ ಸಾವಿರ ಸೈನಿಕರು ಕೊಲ್ಲಲ್ಪಟ್ಟಿರುವುದಾಗಿ ಉಕ್ರೇನನ ದಾವೆ

ರಷ್ಯಾವು ಫೆಬ್ರವರಿ ೨೪ರಂದು ಉಕ್ರೇನನ ಮೇಲೆ ದಾಳಿ ನಡೆಸಿತು. ಅಂದಿನಿಂದ ಇಲ್ಲಿಯವರೆಗೆ ೧೧ ಸಾವಿರ ಕ್ಕಿಂತ ಹೆಚ್ಚು ರಷ್ಯಾದ ಸೈನಿಕರನ್ನು ಕೊಲ್ಲಲ್ಲಾಗಿದೆ ಎಂದು ಉಕ್ರೇನನ ಸಂರಕ್ಷಣಾ ದಳವು ಹೇಳಿದೆ. ರಷ್ಯಾದ ಸೈನ್ಯವು ಈಗ ಕಪ್ಪು ಸಮುದ್ರದಲ್ಲಿನ ಒಡೆಸಾ ಬಂದರು ನಗರದ ಮೇಲೆ ಬಾಂಬ್ ಸ್ಪೋಟಿಸುವ ಸಿದ್ಧತೆಯಲ್ಲಿದೆ ಎಂದು ಉಕ್ರೇನ ತನ್ನ ಭಯವನ್ನು ವ್ಯಕ್ತ ಪಡಿಸಿದೆ.

ರಷ್ಯಾದಲ್ಲಿ ಆಂದೋಲನಕಾರರ ಬಂಧನ

ಉಕ್ರೇನನ ಅಧ್ಯಕ್ಷ ವ್ಲೊದಿಮಿರ ಝೆಲೆಂಸ್ಕೀಯವರು ಮಾರ್ಚ ೬ರಂದು ರಷ್ಯಾದ ನಾಗರಿಕರನ್ನು ಉಕ್ರೇನ್ ಮೇಲಿನ ದಾಳಿಯನ್ನು ನಿಶೇಧಿಸಲು ಆಂದೋಲನಕ್ಕಾಗಿ ಕರೆ ನೀಡಿದರು. ಕಳೆದ ಕೆಲವು ದಿನಗಳಿಂದ ಉಕ್ರೇನನ ಮೇಲೆ ರಷ್ಯಾದ ದಾಳಿಯನ್ನು ನಿಷೇಧಿಸಲು ಪ್ರತಿಭಟಿಸುತ್ತಿದ್ದ ಒಂದು ಸಾವಿರಕ್ಕಿಂತ ಹೆಚ್ಚು ರಷ್ಯನ್ ನಾಗರಿಕರನ್ನು ಪೊಲಿಸರು ಬಂಧಿಸಿದ್ದಾರೆ.