ಉಕ್ರೇನ್‌ನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರು ಉಕ್ರೇನನಿಂದ ಪಲಾಯನ ಮಾಡಿರುವ ವದಂತಿಗೆ ನೀಡಿದ ಉತ್ತರ !
ಕೀವ (ಉಕ್ರೇನ) – ನಾನು ರಾಜಧಾನಿ ಕೀವ್‌ವಲ್ಲಿಯೇ ಇದ್ದೇನೆ ಹಾಗೂ ಯಾರಿಗೂ ಹೆದರುವುದಿಲ್ಲ. ನಾನು ಯಾವುದೇ ಶಿಬಿರದಲ್ಲಿ ಅಡಗಿಕೊಂಡಿಲ್ಲ. ಈ ಯುದ್ಧ ಗೆಲ್ಲುವವರೆಗೆ ನಾನು ರಾಜಧಾನಿ ಕೀವ್‌ನಲ್ಲಿಯೇ ಉಳಿದುಕೊಳ್ಳುವೆನು, ಎಂದು ಉಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕಿಯವರು ವಿಡಿಯೋ ಸಂದೇಶದ ಮೂಲಕ ಹೇಳಿದ್ದಾರೆ. ಅವರು ಉಕ್ರೇನಿನ ನಾಗರಿಕರಿಗೆ ಪ್ರೋತ್ಸಾಹಿಸುವ ಪ್ರಯತ್ನವನ್ನು ಮಾಡಿದ್ದಾರೆ. ಝೆಲೆಂಸ್ಕೀ ಪೋಲಂಡಿಗೆ ಪಲಾಯನ ಮಾಡಿರುವ ವದಂತಿಯಾಗಿತ್ತು. ಅದಕ್ಕೆ ಝೆಲೆಂಸ್ಕೀಯವರು ಈ ವಿಡಿಯೋವನ್ನು ಪ್ರಸಾರ ಮಾಡಿ ಉತ್ತರಿಸಿದ್ದಾರೆ. ಅದರೊಂದಿಗೆ ಅವರು ರಾಷ್ಟ್ರಪತಿ ಭವನದಲ್ಲಿ ತಿರುಗಾಡುತ್ತಿರುವ ವಿಡಿಯೋದಲ್ಲಿ ತೋರಿಸಲಾಗಿದೆ. ಝೆಲೆಂಸ್ಕೀಯವರು ಇನ್ಸ್ಟ್ರಾಗ್ರಾಮ್ನ ಮೂಲಕ ‘ನಿಖರವಾಗಿ ನಾನು ಎಲ್ಲಿದ್ದೇನೆ ?, ಇದನ್ನು ತೋರಿಸುತ್ತಾ ರಷ್ಯಾವು ಸಾಯಿಸಿ ತೋರಿಸಲಿ’, ಎಂದು ಸವಾಲನ್ನು ಹಾಕಿದ್ದಾರೆ. ಸಿಕ್ಕಿದ ಮಾಹಿತಿಯನುಸಾರ, ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಇವರು ಫೆಬ್ರವರಿ ೨೪ ರಿಂದ ರಷ್ಯಾದ ಹಂತಕರಿಂದ ೩ ಸಲ ಝೆಲೆಂಸ್ಕೀಯವರ ಹತ್ಯೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.
೧೭ ಲಕ್ಷ ಜನರು ಉಕ್ರೇನ ತೊರೆದರು
- ಯುದ್ಧದಿಂದಾಗಿ ಉಕ್ರೇನನಿಂದ ಹೊರಬಂದ ಜನರ ಸಂಖ್ಯೆ ೧೭ ಲಕ್ಷ ೩೫ ಸಾವಿರಕ್ಕಿಂತಲೂ ಹೆಚ್ಚು ಆಗಿರುವುದಾಗಿ ವಿಶ್ವಸಂಸ್ಥೆಯ ಶರಣಾರ್ಥಿ ಸಂಸ್ಥೆಯು ಹೇಳಿದೆ.
- ದೇಶದಿಂದ ಹೊರಗೆ ಬಂದ ಜನರ ಪೈಕಿ ಸುಮಾರು ೧೦ ಲಕ್ಷ ೩೦ ಸಾವಿರ ಜನರ ಪೋಲ್ಯಾಂಡನಲ್ಲಿ ೧ ಲಕ್ಷ ೮೦ ಸಾವಿರ ಜನರು ಹಂಗೇರಿಯಲ್ಲಿ ಹಾಗೂ ೧ ಲಕ್ಷ ೨೮ ಸಾವಿರ ಜನರ ಸಲೋವ್ಹಾಕಿಯಕ್ಕೆ ಹೋಗಿದ್ದಾರೆ.