ಕಂದಹಾರ ವಿಮಾನ ಅಪಹರಣದಲ್ಲಿನ ಭಯೋತ್ಪಾದಕ ಕರಾಚಿಯಲ್ಲಿ ಹತ್ಯೆ

ಅಪಹರಣದ ಸಮಯದಲ್ಲಿ ಭಯೋತ್ಪಾದಕನು ಒಬ್ಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದ

ನವದೆಹಲಿ – ಜಿಹಾದಿ ಭಯೋತ್ಪಾದಕರು ೧೯೯೯ ರಲ್ಲಿ ‘ಇಂಡಿಯನ್ ಏರ್ಲೈನ್ಸ್’ ವಿಮಾನ ಅಪಹರಣ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಈ ಭಯೋತ್ಪಾದಕರಲ್ಲಿನ ಜಹೂರ್ ಮೀಸ್ತ್ರಿ ಅಲಿಯಾಸ್ ಜಾಹಿದ್ ಅಖುಂದ ಈ ಭಯೋತ್ಪಾದಕನನ್ನು ಕರಾಚಿಯಲ್ಲಿ ಹತ್ಯೆ ಮಾಡಲಾಗಿದೆ.

ಅಖುಂದ ಇವನು ಕರಾಚಿಯ ಅಖ್ತರ್ ಕಾಲನಿಯಲ್ಲಿ ‘ಕ್ರಿಸೆಂಟ್ ಫರ್ನಿಚರ್’ ಈ ಅಂಗಡಿಯ ಮಾಲೀಕನಾಗಿದ್ದನು. ಈ ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ, ಇದು ಇನ್ನು ತಿಳಿದುಬಂದಿಲ್ಲ. ವಿಮಾನ ಅಪಹರಣದ ಸಮಯದಲ್ಲಿ ಅಖುಂದ ಇವನು ರುಪಿನ್ ಕಾತ್ಯಾಲ ಎಂಬ ಭಾರತೀಯ ಪ್ರವಾಸಿಯ ಹತ್ಯೆ ಮಾಡಿದ್ದನು.