ರಷ್ಯಾದಿಂದ ಉಕ್ರೇನ್‌ನ ೪ ನಗರಗಳಲ್ಲಿ ಯುದ್ಧವಿರಾಮದ ಘೋಷಣೆ !

ಕಿವ (ಉಕ್ರೇನ್) – ರಷ್ಯಾ ಯುದ್ಧದ ೧೨ ನೇ ದಿನದಂದು ಉಕ್ರೇನಿನ ೪ ನಗರಗಳಲ್ಲಿ ಯುದ್ಧವಿರಾಮ ಘೋಷಿಸಿದೆ. ಈ ಯುದ್ಧವಿರಾಮ ಮಧ್ಯಾಹ್ನ ೧೨.೩೦ ರಿಂದ ಸಂಜೆ ೫.೩೦ ವರೆಗೂ ಇರುವುದು. ಈ ಸಮಯದಲ್ಲಿ ಯುದ್ಧದಲ್ಲಿ ಸಿಲುಕಿರುವ ಜನರನ್ನು ಹೊರತರಲಾಗುವುದು. ರಷ್ಯಾ ಯುದ್ಧದ ಸಮಯದಲ್ಲಿ ಯುದ್ಧವಿರಾಮ ಘೋಷಿಸಿರುವುದು ಇದು ಎರಡನೇ ಬಾರಿಯಾಗಿದೆ. ಈ ಮೊದಲು ಉಕ್ರೇನಿನ ಎರಡು ನಗರಗಳಲ್ಲಿ ಯುದ್ಧವಿರಾಮದ ಘೋಷಣೆಯ ನಂತರ ರಷ್ಯಾ ಯುದ್ಧವಿರಾಮದ ಉಲ್ಲಂಘನೆ ನಡೆಸಿ ದಾಳಿ ನಡೆಸಿತ್ತು.