ಭಾರತವು ಕುತುಬ್ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ರೀತಿ ಬೆಳಕು ಮಾಡಿರುವದರ ಬಗ್ಗೆ ಚೀನಾದ ಸರಕಾರಿ ವೃತ್ತ ಪತ್ರಿಕೆ ಹೇಳಿಕೆ

ಭಾರತವು ಈ ಹೇಳಿಕೆ ತಳ್ಳಿಹಾಕಿದೆ !

ತಂತ್ರಗಳಲ್ಲಿ ಜಾಣ ಇರುವ ಚೀನಾ !

ನವ ದೆಹಲಿ – ಚೀನಾದ ಸರಕಾರಿ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಕುತುಬ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ಬಣ್ಣದ ಹಾಗೆ ಬೆಳಕು ಮಾಡಿರುವ ವಾರ್ತೆ ಪ್ರಸಾರವಾಗಿದೆ. ಭಾರತವು ಈ ವಾರ್ತೆ ಸುಳ್ಳಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಚೀನಾವು ‘ಉಕ್ರೇನ್ ಮತ್ತು ರಷ್ಯಾ ಇವರ ಯುದ್ಧದಲ್ಲಿ ಭಾರತ ಪರೋಕ್ಷವಾಗಿ ರಷ್ಯಾಗೆ ಸಹಾಯ ಮಾಡುತ್ತಿದೆ’, ಎಂದು ಪ್ರಪಂಚಕ್ಕೆ ತೋರಿಸುವ ಪ್ರಯತ್ನ ಮಾಡುತ್ತಿದೆ.

ಭಾರತ ಸರಕಾರದಿಂದ ೫ ರಿಂದ ೭ ಮಾರ್ಚ್ ೨೦೨೨ ಈ ಸಮಯದಲ್ಲಿ ‘ಜನ ಔಷಧಿ ದಿನ ೨೦೨೨’ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಕುತುಬ ಮಿನಾರ ಮೇಲೆ ಬೆಳಕು ಮಾಡಲಾಗಿತ್ತು; ಆದರೆ ಅದು ರಷ್ಯಾದ ರಾಷ್ಟ್ರಧ್ವಜದ ಹಾಗೆ ಇರಲಿಲ್ಲ.