ಚೈನಾದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ಜನರಿಗೆ ರಕ್ತದ ಕರ್ಕರೋಗವಾಗುತ್ತಿದೆ !

ಚೈನಾವು ಯಾವುದೇ ಸಾಮಗ್ರಿಯು ಪ್ರಯೋಜನಕಾರಿಯಾಗುವುದಕ್ಕಿಂತ ತೊಂದರೆದಾಯಕವಾಗುತ್ತದೆ ಹಾಗೂ ಅದು ಕಡಿಮೆ ಗುಣಮಟ್ಟದ್ದಾಗಿರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು !

ಬೀಜಿಂಗ (ಚೈನಾ) – ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಆ ಆಯೋಗದ ವರದಿಯ ಪ್ರತಿಯನ್ನು ಹೆಬೆಈ, ಲಿಒನಿಂಗ, ಸಿಚುಆನ, ಶಾಂಕ್ಸೀ ಸೇರಿದಂತೆ ೧೮ ಪ್ರಾಂತ್ಯಗಳಿಗೆ ಕಳುಹಿಸಲಾಗಿದೆ.
ಲಸಿಕೆ ಪಡೆದುಕೊಂಡಿರುವ ಹಲವು ನಾಗರಿಕರು ಅವರಿಗೆ ‘ಲ್ಯುಕೆಮಿಯಾ’ ಆಗಿರುವುದಾಗಿ ಆಯೋಗದ ಅಧಿಕಾರಿಗಳ ಬಳಿ ದೂರು ನೀಡುತ್ತಿದ್ದರು. ಲ್ಯುಕೆಮಿಯಾದಿಂದ ಪೀಡಿತ ಕುಟುಂಬಗಳು ‘ವುಈ ಚ್ಯಾಟ’ನ ಎಂಬ ಚೀನಾದ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅನುಭವವನ್ನು ಹೇಳುತ್ತಿದ್ದಾರೆ. ಆಯೋಗದ ವರದಿಯಲ್ಲಿ ಜನರ ಧ್ವನಿಯನ್ನು ನಿಗ್ರಹಿಸಲು ಚೈನಾದ ಕಮ್ಯುನಿಸ್ಟ ಪಕ್ಷವು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. (ಚೈನಾದ ಸರ್ವಾಧಿಕಾರತ್ವ ! – ಸಂಪಾದಕರು)

ಲಸಿಕೆ ೧೫೦ ಕೋಟಿ ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡಿದ ಚೈನಾ !

ವಿಶ್ವ ಆರೋಗ್ಯ ಸಂಘಟನೆಯು ಚೈನಾದ ‘ಸಿನೊಫಾರ್ಮ’ ಹಾಗೂ ‘ಸಿನೊವ್ಹಾಕ ಕೊರೊನಾವ್ಹಾಕ’ ಎಂಬ ಲಸಿಕೆಯನ್ನು ತುರ್ತುಸಮಯದಲ್ಲಿ ಬಳಸಲು ಪ್ರಮಾಣ ನೀಡಿತ್ತು. ಈ ಎರಡೂ ಲಸಿಕೆಗಳು ಚೈನಾದ ಔಷಧ ನಿರ್ಮಾಣ ಮಾಡುವ ಸಂಸ್ಥೆಗಳು ಅಭಿವೃದ್ಧಿ ಪಡಿಸಿವೆ. ನವೆಂಬರ ೨೦೨೧ ರಲ್ಲಿ ‘ಬ್ಲೂಮಬರ್ಗ’ನ ವರದಿಯ ಪ್ರಕಾರ ಚೈನಾವು ಜಗತ್ತಿನಾದ್ಯಂತ ಈ ಲಸಿಕೆಯ ೧೫೦ ಕೋಟಿಗಿಂತ ಹೆಚ್ಚು ರಫ್ತು ಮಾಡಿತ್ತು. ಆದ್ದರಿಂದ ವಿದೇಶದಲ್ಲಿರುವ ಜನರಿಗೂ ಕೂಡ ಈ ರೋಗವಾಗುವ ಸಾಧ್ಯತೆಯನ್ನು ಹೇಳಲಾಗುತ್ತಿದೆ.

‘ಲ್ಯುಕೇಮಿಯಾ’ ಅಂದರೆ ಏನು ?

ಇದು ರಕ್ತದ ಕರ್ಕರೋಗದ ಒಂದು ಪ್ರಕಾರವಾಗಿದೆ, ಇದು ಶರೀರದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯು ಹೆಚ್ಚಾಗುವುದರಿಂದ ಆಗುತ್ತದೆ. ಬಿಳಿ ರಕ್ತ ಕಣವು ಹೆಚ್ಚಾಗುವುದರಿಂದ ಕೆಂಪು ರಕ್ತ ಕಣಗಳಲ್ಲಿ ಹೆಚ್ಚು ಕಡಿಮೆಯಾಗುತ್ತದೆ.