ಬಾಂಗ್ಲಾದೇಶದಲ್ಲಿ ಮತಾಂಧರಿಂದ ಗರ್ಭಿಣಿ ಮಹಿಳೆಯ ಮತ್ತು ಆಕೆಯ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ

ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !

ಬಾಂಗ್ಲಾದೇಶದಲ್ಲಿ ಮತಾಂಧರಿಂದ ಸತತವಾಗಿ ಹಿಂದೂಗಳು ಮತ್ತು ಅವರ ಶ್ರದ್ಧಾಸ್ಥಾನಗಳ ಮೇಲೆ ಆಕ್ರಮಣಗಳಾಗುತ್ತಿರುವಾಗ ಭಾರತವು ಅದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚೆಯಿಡುವುದು ಆವಶ್ಯಕವಾಗಿದೆ. ಈಗಲಾದರೂ ಸರಕಾರವು ಅಲ್ಲಿನ ಶೋಷಣೆಗೊಳಗಾದ ಅಲ್ಪಸಂಖ್ಯಾತ ಹಿಂದೂಗಳಿಗಾಗಿ ಏನಾದರೂ ಮಾಡುವುದೇ ?

ಝೊಬಾಯರ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನಾರಾಯಣಗಂಜ ನಗರದಲ್ಲಿನ ದಲಪೊಟ್ಟೀ ಕ್ಷೇತ್ರದಲ್ಲಿ ಝೊಬಾಯರ ಎಂಬ ಹೆಸರಿನ ಮತಾಂಧನು ಓರ್ವ ಹಿಂದೂ ಕುಟುಂಬದ ಮನೆಯೊಳಗೆ ನುಗ್ಗಿ ಕತ್ತಿಯಿಂದ ಗರ್ಭಿಣಿ ಮಹಿಳೆಯ ಮತ್ತು ಆಕೆಯ ತಾಯಿಯ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಝೊಬಾಯರನು ಹಾಡುಹಗಲೇ ಕಟ್ಟಡದಲ್ಲಿರುವ ಸಂತ್ರಸ್ತರ ಮನೆಯ ಬಾಗಿಲು ಬಡಿದನು. ಮನೆಯ ಬಾಗಿಲು ತೆರೆಯುತ್ತಲೇ ಅವನು ಮನೆಯೊಳಗೆ ನುಗ್ಗಿ ರಿತು ಚಕ್ರವರ್ತಿ (ವಯಸ್ಸು ೨೨ ವರ್ಷ) ಎಂಬ ಗರ್ಭಿಣಿ ಮಹಿಳೆಯ ಮತ್ತು ಆಕೆಯ ತಾಯಿಯಾದ ರುಮಾ ಚಕ್ರವರ್ತಿ (ವಯಸ್ಸು ೪೬ ವರ್ಷ)ರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಆತನು ಮನೆಯಲ್ಲಿರುವ ಇನ್ನೋರ್ವ ಮಹಿಳೆಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ; ಆದರೆ ಆಕೆಯು ಓಡಿ ಹೋದಳು. ಆಕೆಯು ಕಟ್ಟಡದ ಕೆಳಗೆ ಹೋಗಿ ಕಿರುಚಾಡಿದಳು. ಆಕೆಯ ಕೂಗು ಕೇಳಿ ಸ್ಥಳೀಯರು ಸೇರಿದರು. ಅವರು ಕಟ್ಟಡದ ಮುಖ್ಯ ದ್ವಾರವನ್ನು ಮುಚ್ಚಿ ಪೊಲೀಸರನ್ನು ಕರೆಯಿಸಿದರು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.

೧. ರಿತು ಚಕ್ರವರ್ತಿಯವರ ತಂದೆ ರಾಮಪ್ರಸಾದರವರು ಶೋಕ ವ್ಯಕ್ತಪಡಿಸುವಾಗ ‘ಓರ್ವ ಅಪರಿಚಿತ ವ್ಯಕ್ತಿಯು ನಮ್ಮ ಕನಸುಗಳನ್ನು ನುಚ್ಚುನೀರು ಮಾಡಿ ನಮ್ಮ ಕುಟುಂಬವನ್ನು ಧ್ವಂಸಗೊಳಿಸಿದ್ದಾನೆ. ನನ್ನ ಮಗಳು ೭ ತಿಂಗಳ ಗರ್ಭಿಣಿಯಾಗಿದ್ದಳು. ಆ ರಾಕ್ಷಸನು ನಮ್ಮ ಮೊಮ್ಮಗುವನ್ನೂ ಬಲಿ ಪಡೆದಿದ್ದಾನೆ’ ಎಂದು ಹೇಳಿದರು.

೨. ಆರೋಪಿ ಝೊಬಾಯರನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅವನು ಕಳ್ಳತನದ ಉದ್ದೇಶದಿಂದ ಮನೆಗೆ ನುಗ್ಗಿದ್ದನು ಎಂದು ನಾರಾಯಣಗಂಜದ ಮೇಲ್ಕಾಣಿಸಿದ ಪೊಲೀಸ ಠಾಣೆಯ ಪ್ರಮುಖರಾದ ಶಹಾ ಝಾಮನರವರು ಹೇಳಿದರು. ರಾಮಪ್ರಸಾದರವರು ಆರೋಪಿ ಝೊಬಾಯರನ ವಿರುದ್ಧ ದೂರನ್ನು ನೋಂದಾಯಿಸಿದ್ದಾರೆ. ಆರೋಪಿಗೆ ೩ ದಿನಗಳ ಪೊಲೀಸ __ (ನ್ಯಾಯಾಂಗ ಬಂಧನ) ಕ್ಕೆ ಕಳುಹಿಸಲಾಗಿದೆ ಎಂದು ನಾರಾಯಣಗಂಜದ ಪೊಲೀಸ ಅಧೀಕ್ಷಕರಾದ ಝೈದುಲ ಆಲಮರವರು ನೀಡಿದ್ದಾರೆ.