ಭಾರತದಲ್ಲಿ ಅಮೆರಿಕಾದ ರಾಯಭಾರಿ ಎಂದು ಎರಿಕ ಗಾರ್ಸೆಟ್ಟಿ ನೇಮಕ !

ಭಾರತದಲ್ಲಿ ಅಮೆರಿಕಾದ ರಾಯಭಾರಿ ಎಂದು ಎರಿಕ ಗಾರ್ಸೆಟ್ಟಿ ಇವರನ್ನು ನೇಮಕ ಮಾಡಲಾಗಿದೆ. ಕಳೆದ ೨ ವರ್ಷಗಳಿಂದ ಈ ಸ್ಥಾನ ಖಾಲಿ ಇತ್ತು. ಇಷ್ಟು ದಿನ ಈ ಖಾಲಿ ಇರುವುದು ಇದೇ ಮೊದಲ ಬಾರಿಯಾಗಿತ್ತು.

ಅಮೇರಿಕಾದ ಸಂಸತ್ತಿನಲ್ಲಿ ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ’ ಆಗಿರುವ ವಿಧೇಯಕ್ಕೆ ಅನುಮೋದನೆ

ಅಮೇರಿಕಾ ತನ್ನ ಸಂಸತ್ತಿನಲ್ಲಿ ಒಂದು ಪ್ರಸ್ತಾವವನ್ನು ಅನುಮೋದಿಸಿ ‘ಅರುಣಾಚಲ ಪ್ರದೇಶ ಇದು ಭಾರತದ ಅವಿಭಾಜ್ಯ ಅಂಗವಾಗಿದೆ’, ಎಂದು ಹೇಳಿದೆ. ಭಾರತದಲ್ಲಿನ ಅರುಣಾಚಲ ಪ್ರದೇಶ ಮತ್ತು ಚೀನಾದಲ್ಲಿನ ಮ್ಯಾಕಮೋಹನ ರೇಖೆಗೆ ಅಂತರರಾಷ್ಟ್ರೀಯ ಗಡಿ ಎಂದು ಅಮೆರಿಕದಿಂದ ಈ ವಿಧೇಯಕದ ಮೂಲಕ ಒಪ್ಪಿಗೆ ನೀಡಿದೆ.

ರಾಹುಲ ಗಾಂಧಿಯವರು ಹೆಚ್ಚು ಜವಾಬ್ದಾರಿಯಿಂದ ಮಾತನಾಡಬೇಕು ! – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ನನಗೆ ಅನಿಸುತ್ತದೆ ರಾಹುಲ ಗಾಂಧಿ ಇವರು ಲಂಡನನಲ್ಲಿ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ಸಿನ ಪೂರ್ವಜರು ಕೂಡ ಸಂಘದ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ರಾಹುಲ ಗಾಂಧಿ ಇವರು ಹೆಚ್ಚು ಜವಾಬ್ದಾರಯುತ ಮಾತನಾಡಬೇಕು, ವಾಸ್ತವ ಏನು ಇದೆ ? ಇದು ಕೂಡ ಅವರು ನೋಡಬೇಕು, ಇಷ್ಟೇ ನಾನು ಅವರಿಗೆ ಹೇಳ ಬಯಸುತ್ತೇನೆ

`ನಾಟು ನಾಟು’ ಗೀತೆಗೆ ಆಸ್ಕರ ಪುರಸ್ಕಾರ

95ನೇ ಆಸ್ಕರ ಪುರಸ್ಕಾರ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ `ಆರ್.ಆರ್.ಆರ್’ನ ` ನಾಟು ನಾಟು’ ಈ ಗೀತೆಗೆ ಮೂಲ ಗೀತೆಯ ಶ್ರೇಣಿಯಲ್ಲಿ `ಸರ್ವೋತ್ಕೃಷ್ಟ ಗೀತೆ’ ಎಂದು ಪುರಸ್ಕಾರ ದೊರಕಿದೆ. ಈ ಹಿಂದೆ ಈ ಗೀತೆಗೆ `ಗೋಲ್ಡನ ಗ್ಲೋಬ’ ಪುರಸ್ಕಾರ ದೊರಕಿತ್ತು.

ಭಯೋತ್ಪಾದಕರನ್ನು ಒಳ್ಳೆಯ ಅಥವಾ ಕೆಟ್ಟ ಈ ರೀತಿ ವ್ಯತ್ಯಾಸ ಮಾಡುವುದೇ ತಪ್ಪು !

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕಾಸ್ತ್ರ

ಪಾಕಿಸ್ತಾನ ಮತ್ತು ಚೀನಾ ಇವರು ಕಾರ್ಯಾಚರಣೆ ನಡೆಸಿದರೆ ಭಾರತ ಪ್ರತ್ಯುತ್ತರ ನೀಡುವ ಸಾಧ್ಯತೆ ! – ಅಮೇರಿಕ ಗುಪ್ತಚರ ಇಲಾಖೆಯ ವರದಿ

ಅಮೇರಿಕಾದ ಸಂಸತ್ತಿನಲ್ಲಿ ರಾಷ್ಟ್ರೀಯ ಗುಪ್ತಚರ ಇಲಾಖೆಯ ಸಂಚಾಲಕ ಎವರಿಲ್ ಹೆನ್ಸ್ ಇವರು ಮಾಹಿತಿ ನೀಡುತ್ತಾ, ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸುರಕ್ಷೆ ಮತ್ತು ನೇತೃತ್ವಕ್ಕೆ ಎಲ್ಲಕ್ಕಿಂತ ಹೆಚ್ಚಿನ ಅಪಾಯ ಚೀನಾದಿಂದ ಇದೆ ಎಂದು ಹೇಳಿದರು.

ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ನಿಲುವು ಅನುಚಿತವಾಗಿದೆ ! – ಭಾರತ

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಕಾರ್ಯಾಲಯವು ಕಾಶ್ಮೀರ ಸಮಸ್ಯೆಯ ಬಗ್ಗೆ ಮಂಡಿಸಿರುವ ಪ್ರಸ್ತಾವ ಅಯೋಗ್ಯವಾಗಿದೆ ಎಂದು ಭಾರತ ಹೇಳಿದೆ. ‘ಇದು ಭಾರತದ ಆಂತರಿಕ ಪ್ರಕರಣವಾಗಿದೆ’, ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಇಂದ್ರಮಣಿ ಪಾಂಡೆ ಇವರು ಹೇಳಿದರು.

ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರನ್ನು ಭಾರತದಿಂದ ಛೀಮಾರಿ !

ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ !

ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಿರುವ ದೇಶವಾಗಿದೆ. ಇಲ್ಲಿ ಜಗತ್ತಿನ ಸುಮಾರು ಮುಕ್ಕಾಲು ಜನರು ಮುಕ್ತ ಮತ್ತು ನಿಷ್ಪಕ್ಷ ಚುನಾವಣೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಲು ಸಕ್ಷಮರಾಗಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ, ಎಂದು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಒಂದು ವರದಿಯಲ್ಲಿ ಪ್ರಾಧ್ಯಾಪಕ ಸಾಲ್ವಾಟೋರ ಬಬೋನ್ಸ ಇವರು ಹೇಳಿದ್ದಾರೆ.