ಅಮೇರಿಕಾದ ಸಂಸತ್ತಿನಲ್ಲಿ ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ’ ಆಗಿರುವ ವಿಧೇಯಕ್ಕೆ ಅನುಮೋದನೆ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ತನ್ನ ಸಂಸತ್ತಿನಲ್ಲಿ ಒಂದು ಪ್ರಸ್ತಾವವನ್ನು ಅನುಮೋದಿಸಿ ‘ಅರುಣಾಚಲ ಪ್ರದೇಶ ಇದು ಭಾರತದ ಅವಿಭಾಜ್ಯ ಅಂಗವಾಗಿದೆ’, ಎಂದು ಹೇಳಿದೆ. ಭಾರತದಲ್ಲಿನ ಅರುಣಾಚಲ ಪ್ರದೇಶ ಮತ್ತು ಚೀನಾದಲ್ಲಿನ ಮ್ಯಾಕಮೋಹನ ರೇಖೆಗೆ ಅಂತರರಾಷ್ಟ್ರೀಯ ಗಡಿ ಎಂದು ಅಮೆರಿಕದಿಂದ ಈ ವಿಧೇಯಕದ ಮೂಲಕ ಒಪ್ಪಿಗೆ ನೀಡಿದೆ.

೧. ಸಂಸತ್ತಿನಲ್ಲಿ ಈ ವಿಧೇಯಕ ತಂದ ಸಂಸದ ಬಿಲ್ ಹ್ಯಾಗರ್ಟಿ ಮತ್ತು ಜೆಫ್ ಮರ್ಕೆಲ್ ಇವರು, ಈ ವಿಧೇಯಕ ಅರುಣಾಚಲ ಪ್ರದೇಶವನ್ನು ಭಾರತದ ಭಾಗವೆಂದು ಸ್ಪಷ್ಟವಾಗಿ ಹೇಳಿ ಮಾನ್ಯತೆ ನೀಡಿದೆ. ಚೀನಾ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್.ಎ.ಸಿ.) ಸ್ಥಿತಿಯಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದೆ ಮತ್ತು ನಾವು ಅದನ್ನು ನಿಷೇಧಿಸುತ್ತೇವೆ. ನಾವು ಭಾರತ ಮತ್ತು ‘ಕ್ವಾಡ್ ‘ (ಜಪಾನ್ ಅಮೆರಿಕ ಮತ್ತು ಆಸ್ಟ್ರೇಲಿಯಾ) ದೇಶಗಳ ಜೊತೆ ನಮ್ಮ ಪಾಲುದಾರಿಕೆ ಹೆಚ್ಚಿಸುವ ಪರವಾಗಿದ್ದೇವೆ. ಇದರಿಂದ ಇಂಡೋ-ಪೆಸಿಫಿಕ್ ಕ್ಷೇತ್ರದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಬಹುದು. ಚೀನಾದಿಂದ ಇಂಡೋ-ಪೆಸಿಫಿಕ್ ಕ್ಷೇತ್ರದಲ್ಲಿ ನಿರಂತರ ಅಪಾಯ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ತನ್ನ ಸಹಭಾಗಿತ್ವ ಇರುವ ಪಾಲುದಾರನ ಬೆಂಬಲಕ್ಕೆ ಎಂದರೆ ವಿಶೇಷವಾಗಿ ಭಾರತದ ಬೆಂಬಲಕ್ಕೆ ನಿಲ್ಲುವುದು ಅವಶ್ಯಕವಾಗಿದೆ.

೨. ಈ ವಿಧೆಯಕದಲ್ಲಿ ಅಮೇರಿಕಾವು ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಚೀನಾದ ಪ್ರಚೋದನೆಯನ್ನು ಖಂಡಿಸಿದೆ. ಚೀನಾ ಸೇನಾಬಲ ಉಪಯೋಗಿಸುವುದು, ವಿವಾದಿತ ಕ್ಷೇತ್ರದಲ್ಲಿ ಗ್ರಾಮಗಳನ್ನು ನಿರ್ಮಿಸುವುದು, ಸ್ಥಳೀಯ ನಗರಗಳಿಗೆ ಮಂದಾರಿನ (ಚೀನಿ) ಭಾಷೆಯಲ್ಲಿ ಹೆಸರು ಇಡುವುದು ಮತ್ತು ನಕ್ಷೆ ಪ್ರಕಾಶಿತಗೊಳಿಸುವುದು, ಇಂತಹ ವಿಷಯಗಳು ಕೂಡ ಅಮೇರಿಕಾದಿಂದ ನಿಷೇಧಿಸಲಾಗಿದೆ. ಭೂತಾನ್ ನ ಅನೇಕ ಪ್ರದೇಶಗಳಿಗೆ ‘ಚೀನಾದ ಪ್ರದೇಶ’ ಎಂದು ಹೇಳುವುದು ತಪ್ಪಾಗಿದೆ ಎಂದು ಹೇಳಿದೆ.