ಚಂದಿಗಡ – ನನಗೆ ಅನಿಸುತ್ತದೆ ರಾಹುಲ ಗಾಂಧಿ ಇವರು ಲಂಡನನಲ್ಲಿ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ಸಿನ ಪೂರ್ವಜರು ಕೂಡ ಸಂಘದ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ. ರಾಹುಲ ಗಾಂಧಿ ಇವರು ಹೆಚ್ಚು ಜವಾಬ್ದಾರಯುತ ಮಾತನಾಡಬೇಕು, ವಾಸ್ತವ ಏನು ಇದೆ ? ಇದು ಕೂಡ ಅವರು ನೋಡಬೇಕು, ಇಷ್ಟೇ ನಾನು ಅವರಿಗೆ ಹೇಳ ಬಯಸುತ್ತೇನೆ, ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರು ಹೇಳಿದರು. ರಾಹುಲ ಗಾಂಧಿ ಇವರು ಲಂಡನ ನಲ್ಲಿಯ ಕಾರ್ಯಕ್ರಮದಲ್ಲಿ ಭಾರತಕ್ಕೆ ಕಳಂಕ ತರುವ ಹೇಳಿಕೆ ನೀಡಿದ ಬಗ್ಗೆ ಹೇಳಿದರು. ಹರಿಯಾಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿನಿಧಿಗಳ ಸಭೆಯ ಸಮಯದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು.
Dattatreya Hosabale: ರಾಹುಲ್ ಗಾಂಧಿ ಹೆಚ್ಚು ಜವಾಬ್ದಾರಿಯುತವಾಗಿ ಮಾತನಾಡಲಿ: ದತ್ತಾತ್ರೇಯ ಹೊಸಬಾಳೆ ಸಲಹೆ
#rss https://t.co/nWaMXyeSLJ— vijaykarnataka (@Vijaykarnataka) March 14, 2023
ಕಾರ್ಯವಾಹ ಹೋಸಬಾಳೆ ಮಾತು ಮುಂದುವರಿಸಿ, ದೇಶದ ವಿಚಾರಧಾರೆ ಬದಲಾಯಿಸುವ ಅವಶ್ಯಕತೆ ಇದೆ. ಭಾರತದಲ್ಲಿನ ಹಿಂದುತ್ವದ ವಿಚಾರಧಾರೆಯನ್ನು ಕೆಲವರು ವಿರೋಧಿಸಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ನಿಜವಾದ ಇತಿಹಾಸ ಹೇಳುವ ಅವಶ್ಯಕತೆ ಇದೆ. ಕೆಲವು ಜನರು ದೇಶ ಒಡೆಯುವವರಿದ್ದಾರೆ. ಅವರು ವಿಶ್ವವಿದ್ಯಾಲಯದಲ್ಲಿ ಘೋಷಣೆ ಕೂಡ ನೀಡುತ್ತಿರುತ್ತಾರೆ. ಸರಕಾರ ಇದರ ಮೇಲೆ ಕಾನೂನ ರೀತಿ ಕ್ರಮ ಕೈಗೊಳ್ಳಬೇಕು. ದೇಶ ಒಡೆಯುವವರಿಂದ ಜಾಗರೂಕವಾಗಿರುವುದು ಅವಶ್ಯಕವಾಗಿದೆ ಎಂದು ಹೇಳಿದರು.