ಸಿಡ್ನಿ ವಿಶ್ವವಿದ್ಯಾಲಯದ ವರದಿಯಿಂದ ಬಿಬಿಸಿಗೆ ತಪರಾಕಿ
ಕ್ಯಾನಬೆರಾ (ಆಸ್ಟ್ರೇಲಿಯಾ) – ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಿರುವ ದೇಶವಾಗಿದೆ. ಇಲ್ಲಿ ಜಗತ್ತಿನ ಸುಮಾರು ಮುಕ್ಕಾಲು ಜನರು ಮುಕ್ತ ಮತ್ತು ನಿಷ್ಪಕ್ಷ ಚುನಾವಣೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಲು ಸಕ್ಷಮರಾಗಿದ್ದಾರೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ, ಎಂದು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಒಂದು ವರದಿಯಲ್ಲಿ ಪ್ರಾಧ್ಯಾಪಕ ಸಾಲ್ವಾಟೋರ ಬಬೋನ್ಸ ಇವರು ಹೇಳಿದ್ದಾರೆ. ಬಿಬಿಸಿಯಂತಹ ಅಂತರರಾಷ್ಟ್ರೀಯ ಪ್ರಸಾರ ಮಾಧ್ಯಮದಿಂದ ನಡೆಯುತ್ತಿರುವ ಭಾರತದ ಅಪಕೀರ್ತಿಯ ಬಗ್ಗೆ ಬಬೋನ್ಸ ಇವರ ಹೇಳಿಕೆ ಭಾರತಕ್ಕೆ ಸಕಾರಾತ್ಮಕವಾಗಿದೆಯೆಂದು ಹೇಳಲಾಗುತ್ತಿದೆ.
Freedom of religion is alive and well in India: Reports #news #dailyhunt https://t.co/tHJIMSd8GO
— Dailyhunt (@DailyhuntApp) March 7, 2023
ಈ ವರದಿಯಲ್ಲಿ,
ಅ. ‘ಹಿಂದೂ’ ಮತ್ತು ‘ಇಂಡಿಯಾ’ ಈ ಶಬ್ದದ ಮೂಲ ಸಂಸ್ಕೃತ ಭಾಷೆಯಿಂದ ಬಂದಿದೆ.
ಆ. ಡಿಸೆಂಬರ 6, 2022 ರಂದು ಬ್ರಿಟನನ ಬರ್ಮಿಂಗಹ್ಯಾಂನಲ್ಲಿ ಓರ್ವ 45 ವರ್ಷದ ಮಹಿಳೆಗೆ ಶಾಂತವಾಗಿ ಪ್ರಾರ್ಥನೆ ಮಾಡಿದ್ದರಿಂದ ಬಂಧಿಸಲಾಗಿತ್ತು; ಆದರೆ ಭಾರತದಲ್ಲಿ ವಿವಿಧ ಧರ್ಮಗಳ ಜನರು ಸಾರ್ವಜನಿಕ ಸ್ಥಳಗಳಲ್ಲಿ ದೇವರ ಪೂಜೆಯನ್ನು ಮಾಡುತ್ತಾರೆ, ಅದೂ ಕೂಡ ಅನೇಕ ಬಾರಿ ಹೀಗೆ ಮಾಡುತ್ತಿರುವುದು ಕಂಡು ಬರುತ್ತದೆ. ಒಂದು ವೇಳೆ ಯಾವುದಾದರೂ ದೇಶದ ಮೇಲೆ ಧರ್ಮದ ವಿಷಯದಲ್ಲಿ ಸಾಮಾಜಿಕ ಶತ್ರುತ್ವವನ್ನು ಹೆಚ್ಚಿಸುತ್ತಿರುವ ಆರೋಪವಾಗುತ್ತಿದ್ದರೆ ಅದು ನಾಸ್ತಿಕ ಪ್ರವೃತ್ತಿಯ ಬ್ರಿಟನ ಆಗಿದೆ.
ಇ. ‘ಗೌರವಾನ್ವಿತ’ ಪ್ಯೂ ಸಂಶೋಧನೆ ಕೇಂದ್ರವು ಭಾರತಕ್ಕೆ ಧಾರ್ಮಿಕ ವೈಮನಸ್ಸಿಗಾಗಿ ‘ಜಗತ್ತಿ ಅತ್ಯಂತ ಕೆಟ್ಟ ದೇಶ’ ಎಂದು ಸ್ಥಾನ ನೀಡಿದೆ. ಪ್ಯೂ ಸಂಶೋಧನಾ ಕೇಂದ್ರ ಕೆಲವು ವಿಶಿಷ್ಟ ಉದ್ದೇಶದಿಂದ ಭಾರತೀಯ ಸಂಸ್ಥೆಗಳ ಮೇಲೆ ಆಕ್ರಮಣ ಮಾಡುತ್ತಿದೆ.
ಈ. ದೊಡ್ಡ ಸಂಖ್ಯೆಯ ಭಾರತೀಯರು, ಅವರಿಗೆ ಅವರ ಧರ್ಮವನ್ನು ಪಾಲಿಸಲು ಅವಕಾಶವಿದೆಯೆಂದು ಹೇಳುತ್ತಾರೆ; ಆದರೆ ಪ್ಯೂ ಸಂಶೋಧನಾ ಕೇಂದ್ರವು, ಹಿಂದೂ ಬಹುಸಂಖ್ಯಾತವಿರುವ ದೇಶದ ಕೆಲವು ಮುಸಲ್ಮಾನರಲ್ಲಿ ಭೇದಭಾವದ ತಕರಾರುಗಳಿವೆ. ಭಾರತವನ್ನು ಗುರಿ ಮಾಡುವವರಲ್ಲಿ ‘ಯೂಎಸ್ ಸ್ಟೇಟ ಡಿಪಾರ್ಟಮೆಂಟ ಆಫ್ ಇಂಟರನ್ಯಾಶನಲ ರಿಲಿಜಿಯಸ್ ಫ್ರೀಡಂ’, ‘ಯೂಎಸ್ ಸರಕಾರ ಪ್ರಾಯೋಜಕತ್ವದ ಯುನೈಟೆಡ್ ಸ್ಟೇಟ್ಸ ಕಮಿಶನ್ ಆನ್ ಇಂಟರನ್ಯಾಶನಲ್ ರಿಲಿಜಿನ್ ಫ್ರೀಡಂ’ ಮತ್ತು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಉಚ್ಚಾಯುಕ್ತ ಕಾರ್ಯಾಲಯವೂ ಸೇರಿದೆ ಎಂದು ಹೇಳಿದ್ದಾರೆ.