ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರನ್ನು ಭಾರತದಿಂದ ಛೀಮಾರಿ !

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಝರದಾರಿ , ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್

ನ್ಯೂಯಾರ್ಕ (ಅಮೇರಿಕಾ) – ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಝರದಾರಿಯವರು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಮಹಿಳಾ ದಿನಾಚರಣೆಯ ನಿಮಿತ್ತ ಮಹಿಳೆ, ಶಾಂತಿ ಮತ್ತು ಸಂರಕ್ಷಣೆಯ ಕುರಿತು ಚರ್ಚೆ ನಡೆಯುತ್ತಿರುವಾಗ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಭಾರತವು ಬಿಲಾವಲ ಝರದಾರಿಯವರನ್ನು ತರಾಟೆಗೆ ತೆಗೆದುಕೊಂಡಿತು. ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್ ಇವರು, ಇಂತಹ ಸುಳ್ಳು ಪ್ರಚಾರಗಳಿಗೆ ಉತ್ತರಿಸಲು ನಮಗೆ ಅಯೋಗ್ಯವೆನಿಸುತ್ತದೆ. ಅವರ ಟೀಕೆಗಳು ಉತ್ತರಿಸಲೂ ಯೋಗ್ಯವಾಗಿಲ್ಲ. ಇಂತಹ ಟೀಕೆಗಳು ಆಧಾರರಹಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಉತ್ತರಿಸಿದ್ದಾರೆ.

ಸಂಪಾದಕೀಯ ನಿಲುವು

  • ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !
  • ಭಾರತವು ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನ ವಶದಿಂದ ಮುಕ್ತಗೊಳಿಸಿ ಈ ಪ್ರಶ್ನೆಯನ್ನು ಶಾಶ್ವತವಾಗಿ ಮುಕ್ತಾಯಗೊಳಿಸಬೇಕು !