ಭಯೋತ್ಪಾದಕರನ್ನು ಒಳ್ಳೆಯ ಅಥವಾ ಕೆಟ್ಟ ಈ ರೀತಿ ವ್ಯತ್ಯಾಸ ಮಾಡುವುದೇ ತಪ್ಪು !

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕಾಸ್ತ್ರ

ವಿಶ್ವ ಸಂಸ್ಥೆಯ ಭಾರತದ ಸ್ಥಾಯಿ ಪ್ರತಿನಿಧಿಯಾಗಿರುವ ರುಚಿರಾ ಕಂಬೋಜ

ನ್ಯೂಯಾರ್ಕ – ವಿಶ್ವ ಸಂಸ್ಥೆಯಲ್ಲಿ ಭಾರತವು ಪುನಃ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಟೀಕಾಸ್ತ್ರ ಮಾಡಿದೆ. `ಗ್ಲೋಬಲ ಕೌಂಟರ – ಟೆರರಿಸಂ ಸ್ಟ್ರ್ಯಾಟಜಿ’ (ಜಿ.ಸಿ.ಟಿ.ಎಸ್.) 8 ನೇ ಪುನರಾವಲೋಕನ ಠರಾವಿನ ಕುರಿತು ಚರ್ಚೆ ಮಾಡುವಾಗ ವಿಶ್ವ ಸಂಸ್ಥೆಯ ಭಾರತದ ಸ್ಥಾಯಿ ಪ್ರತಿನಿಧಿಯಾಗಿರುವ ರುಚಿರಾ ಕಂಬೋಜ ಇವರು ಭಯೋತ್ಪಾದಕತೆಯ ವಿಷಯದಲ್ಲಿ ಮುಕ್ತವಾಗಿ ವಿಚಾರ ಮಂಡಿಸಿದರು. ಭಯೋತ್ಪಾದಕರು ಕೇವಲ ಭಯೋತ್ಪಾದಕರೇ ಆಗಿರುತ್ತಾರೆ. ಇವರಲ್ಲಿ `ಒಳ್ಳೆಯ ಅಥವಾ ಕೆಟ್ಟ ಭಯೋತ್ಪಾದಕರು’ ಎಂದು ಇರುವುದಿಲ್ಲ. ಭಯೋತ್ಪಾದಕತೆ ಘಟನೆಯ ಹಿಂದಿನ ಉದ್ದೇಶದ ಆಧಾರದಲ್ಲಿ ಭಯೋತ್ಪಾದಕರಲ್ಲಿ ವ್ಯತ್ಯಾಸ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಪರಿಣಾಮ ವಿಶ್ವ ಮಟ್ಟದಲ್ಲಿ ಭಯೋತ್ಪಾದಕತೆಯ ವಿರುದ್ಧ ನಡೆದಿರುವ ಚಳುವಳಿಯ ಮೇಲೆ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ರುಚಿರಾ ಕಂಬೋಜ ಮಾತನ್ನು ಮುಂದುವರೆಸುತ್ತಾ, ಎಲ್ಲ ಪ್ರಕಾರದ ಭಯೋತ್ಪಾದಕ ಆಕ್ರಮಣಗಳು ಅದು ಸಿಖ್ ವಿರೋಧಿಯಾಗಿರಲಿ, ಬೌದ್ಧವಿರೋಧಿಯಾಗಿರಲಿ ಅಥವಾ ಹಿಂದೂ ವಿರೋಧಿಯಾಗಿರಲಿ ಅವುಗಳನ್ನು ನಿಷೇಧಿಸಲೇ ಬೇಕು. ಅಂತರರಾಷ್ಟ್ರೀಯ ಸಮುದಾಯವು ಹೊಸ ಸಂಜ್ಞೆ ಮತ್ತು ತಪ್ಪು ಪ್ರಾಧಾನ್ಯತೆಯ ವಿರುದ್ಧ ಸೆಟೆದು ನಿಲ್ಲುವ ಆವಶ್ಯಕತೆಯಿದೆ. ಭಯೋತ್ಪಾದಕತೆಯನ್ನು ಎಲ್ಲ ರೀತಿಯಲ್ಲಿ ನಿಷೇಧಿಸಬೇಕು. ಭಯೋತ್ಪಾದಕತೆಯ ಯಾವುದೇ ಕೃತ್ಯವನ್ನು ಬೆಂಬಲಿಸಬಾರದು. ಕಂಬೋಜ ಇವರು ಪಾಕಿಸ್ತಾನದೆಡೆಗೆ ಬೊಟ್ಟು ಮಾಡಿ ಭಯೋತ್ಪಾದಕತೆಗೆ ಆಶ್ರಯ ನೀಡುವ ದೇಶವೆಂದು ಗುರುತಿಸಬೇಕು. ಅವರಿಗೆ ಅವರ ಕೃತ್ಯಕ್ಕಾಗಿ ಜವಾಬ್ದಾರರನ್ನಾಗಿ ಮಾಡಬೇಕು. ಎಂದು ಹೇಳಿದರು.