ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ನಿಲುವು ಅನುಚಿತವಾಗಿದೆ ! – ಭಾರತ

ಭಾರತದ ಸ್ಥಾಯಿ ಪ್ರತಿನಿಧಿ ಇಂದ್ರಮಣಿ ಪಾಂಡೆ

ಜಿನೇವಾ (ಸ್ವಿಜರ್ಲ್ಯಾಂಡ್) – ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಕಾರ್ಯಾಲಯವು ಕಾಶ್ಮೀರ ಸಮಸ್ಯೆಯ ಬಗ್ಗೆ ಮಂಡಿಸಿರುವ ಪ್ರಸ್ತಾವ ಅಯೋಗ್ಯವಾಗಿದೆ ಎಂದು ಭಾರತ ಹೇಳಿದೆ. ‘ಇದು ಭಾರತದ ಆಂತರಿಕ ಪ್ರಕರಣವಾಗಿದೆ’, ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಇಂದ್ರಮಣಿ ಪಾಂಡೆ ಇವರು ಹೇಳಿದರು. ‘ಕಳೆದ ಕೆಲವು ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಇವರ ಜೊತೆಗೆ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಚಿಂತಾಜನಕ ಸ್ಥಿತಿಯ ಬಗ್ಗೆ ಚರ್ಚಿಸುವ ಅವಕಾಶ ಸಿಕ್ಕಿದೆ’, ಎಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯುಕ್ತ ಓಲ್ಕರ್ ತುರ್ಕ ಇವರು ಹೇಳಿಕೆ ನೀಡಿದ್ದರು.