ಪಾಕಿಸ್ತಾನ ಮತ್ತು ಚೀನಾ ಇವರು ಕಾರ್ಯಾಚರಣೆ ನಡೆಸಿದರೆ ಭಾರತ ಪ್ರತ್ಯುತ್ತರ ನೀಡುವ ಸಾಧ್ಯತೆ ! – ಅಮೇರಿಕ ಗುಪ್ತಚರ ಇಲಾಖೆಯ ವರದಿ

ಶೀ ಜಿನ್ಪಿಂಗ್, ನರೇಂದ್ರ ಮೋದಿ ಮತ್ತು ಶಹಬಾಜ್ ಷರೀಫ್

ವಾಷಿಂಗ್ಟನ (ಅಮೇರಿಕಾ) – ಏಷ್ಯಾದಲ್ಲಿ ಭಾರತ, ಪಾಕಿಸ್ತಾನ ಮತ್ತು ಚೀನಾ ಈ ದೇಶಗಳಲ್ಲಿನ ಸಂಬಂಧ ಒತ್ತಡದಿಂದ ಕೂಡಿರುವುದರಿಂದ ಅವರಲ್ಲಿ ಸಂಘರ್ಷ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ಮತ್ತು ಚೀನಾದಿಂದ ಭಾರತದ ವಿರುದ್ಧ ಕಾರ್ಯಾಚರಣೆ ನಡೆದರೆ ಭಾರತದಿಂದಲೂ ಆಕ್ರಮಣಕಾರಿ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಭಾರತದಿಂದ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಸೈನ್ಯದ ಕಾರ್ಯಾಚರಣೆ ಮೂಲಕ ಪ್ರತ್ಯುತ್ತರ ನೀಡುವ ಸಾಧ್ಯತೆ ಇದೆ. ಎಂದು ಅಮೇರಿಕಾದ ಗುಪ್ತಚರ ಇಲಾಖೆಯ ವರದಿಯಲ್ಲಿ ಹೇಳಿದ್ದಾರೆ.

ಅಮೇರಿಕಾಗೆ ಚೀನಾದಿಂದ ಹೆಚ್ಚು ಅಪಾಯ !

ಅಮೇರಿಕಾದ ಸಂಸತ್ತಿನಲ್ಲಿ ರಾಷ್ಟ್ರೀಯ ಗುಪ್ತಚರ ಇಲಾಖೆಯ ಸಂಚಾಲಕ ಎವರಿಲ್ ಹೆನ್ಸ್ ಇವರು ಮಾಹಿತಿ ನೀಡುತ್ತಾ, ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸುರಕ್ಷೆ ಮತ್ತು ನೇತೃತ್ವಕ್ಕೆ ಎಲ್ಲಕ್ಕಿಂತ ಹೆಚ್ಚಿನ ಅಪಾಯ ಚೀನಾದಿಂದ ಇದೆ ಎಂದು ಹೇಳಿದರು. ಚೀನಾದ ಕಮ್ಯುನಿಸ್ಟ್ ಪಾರ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾಗೆ ಎಲ್ಲಕ್ಕಿಂತ ದೊಡ್ಡದಾದ ಅಪಾಯಕಾರಿಯಾಗಿ ಎದುರು ನಿಂತಿದೆ. ಕಳೆದ ವರ್ಷಗಳಲ್ಲಿ ರಷ್ಯಾಗೆ ನೀಡುತ್ತಿರುವ ಸಹಕಾರದಿಂದ ಚೀನಾ ನಮಗಾಗಿ ಹೆಚ್ಚಿನ ಅಪಾಯಕಾರಿ ಆಗಿದೆ. ಈಗ ಚೀನಾ ನಮ್ಮ ಪ್ರಾಧಾನ್ಯವಾಗಿದೆ. ಚೀನಾಗೆ ಪೂರ್ವ ಏಷ್ಯಾದಲ್ಲಿ ಪ್ರಮುಖ ಶಕ್ತಿ ಆಗುವುದಿದೆ. ಅದಕ್ಕೆ ಸಂಪೂರ್ಣ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.