‘ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು (ಅಂತೆ) ! – ಸಮಾಜವಾದಿ ಪಕ್ಷದ ಸಂಸದ ಶಫೀಕುರ್ರ‍ಹಮಾನ ಬರ್ಕ್

  • ಜನತೆ ಬರ್ಕ್‌ನಂತಹ ಜನರನ್ನು ‘ಸ್ವತಂತ್ರವಾಗಿರುವ ಅಫಗಾನಿಸ್ತಾನಕ್ಕೆ ಕಳುಹಿಸಬೇಕು ಎಂಬ ಬೇಡಿಕೆ ನೀಡಿದರೆ ಅದರಲ್ಲಿ ಆಶ್ಚರ್ಯವೆನಿಸುವುದು ಬೇಡ !
  • ಭಾರತದಲ್ಲಿ ಒಂದು ಇಸ್ಲಾಮಿ ಸಂಘಟನೆಯಾಗಿ ಅಥವ ಇಸ್ಲಾಮಿ ಮುಖಂಡನಾಗಲಿ ತಾಲಿಬಾನ್ ಅನ್ನು ವಿರೋಧಿಸಿಲ್ಲ ಎಂಬುದು ಜಾತ್ಯತೀತ, ಪುರೋ(ಅಧೋ)ಗಾಮಿ, ಸರ್ವಧರ್ಮಸಮಭಾವದ ಡಂಗೂರ ಸಾರಿಸುವವರ ಗಮನಕ್ಕೆ ಬರುವುದೇ? ಅಥವಾ ಅವರೂ ಕೂಡ ತಾಲಿಬಾನ್‌ನ ಸಮರ್ಥಕರೇ?

ಸಂಭಲ್ (ಉತ್ತರಪ್ರದೇಶ) – ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ, ಎಂದು ಹೇಳಿ ಸಮಾಜವಾದಿ ಪಕ್ಷದ ಸಂಸದ ಶಫೀಕುರ್ರ‍ಹಮಾನ್ ಬರ್ಕ್ ಅಫಗಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿದರು. ‘ತಾಲಿಬಾನಿನಿಂದ ಭಾರತಕ್ಕೆ ಅಪಾಯವಿಲ್ಲ, ಏಕೆಂದರೆ ಭಾರತವು ಒಂದು ಸಶಕ್ತವಾದ ದೇಶವಾಗಿದೆ, ಎಂದು ಕೂಡ ಅವರು ನುಡಿದರು. ಬರ್ಕ್ ಅಫಗಾನಿಸ್ತಾನದಲ್ಲಿ ತಾಲಿಬಾನನ ಹೋರಾಟವನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಸಿದ್ದಾರೆ.