ವಿಜ್ಞಾನದ ತಥಾಕಥಿತ ಪ್ರಗತಿ ಪರಿಣಾಮ !
ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವರದಿಯ ಪ್ರಕಾರ, ಹವಾಮಾನದ ಬದಲಾವಣೆಯಿಂದಾಗುವ ವಿಪತ್ತಿನಿಂದಾಗಿ ಮುಂದಿನ ೮೦ ವರ್ಷಗಳಲ್ಲಿ ಅಂದರೆ ೨೧೦೦ರಲ್ಲಿ ಭಾರತದ ಕರಾವಳಿಯಲ್ಲಿ ಮುಂಬಯಿ ಸೇರಿದಂತೆ ೧೨ ನಗರಗಳು ೩ ಅಡಿಗಳಷ್ಟು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ, ಇವುಗಳಲ್ಲಿ ಕಾಂಡಲಾ, ಓಖಾ, ಭಾವನಗರ, ಮುಂಬಯಿ, ಮಂಗಳೂರು, ಕೊಚ್ಚಿ, ಪಾರಾದೀಪ್, ಖಿದಿರ್‌ಪುರ್, ವಿಶಾಖಪಟ್ಟಣಂ, ಚೆನ್ನೈ ಮತ್ತು ಟುಟಿಕೊರಿನ್‌ಗಳು ಸೇರಿವೆ. ಇದರ ಜೊತೆಯಲ್ಲಿ, ಸಮುದ್ರ ಮತ್ತು ನದಿಗಳ ಹತ್ತಿರ ಇರುವ ಭೂಮಿಯ ವಿಸ್ತೀರ್ಣ ಕಡಿಮೆಯಾಗಲಿದೆ.
Rising sea levels may submerge many Indian cities including Mumbai by 2100: NASA projections on climate panel reporthttps://t.co/k2ttAvnpnQ
— OpIndia.com (@OpIndia_com) August 11, 2021
೧. ‘ನಾಸಾ’ದ ವರದಿಯ ಪ್ರಕಾರ, ಜಾಗತಿಕ ತಾಪಮಾನದಲ್ಲಿ ೨೧೦೦ ರ ವೇಳೆಗೆ ಗಣನೀಯ ಹೆಚ್ಚಳವಾಗಲಿದೆ. ಭವಿಷ್ಯದಲ್ಲಿ ಜನರು ತೀವ್ರ ಬರಗಾಲವನ್ನು ಎದುರಿಸಬೇಕಾಗುತ್ತದೆ. ಇಂಗಾಲದ ಹೊರಸೂಸುವಿಕೆ ಮತ್ತು ಮಾಲಿನ್ಯವನ್ನು ನಿಲ್ಲಿಸದಿದ್ದರೆ, ತಾಪಮಾನವು ಸರಾಸರಿ ೪.೪ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಮುಂದಿನ ಎರಡು ದಶಕಗಳಲ್ಲಿ, ತಾಪಮಾನವು ೧.೫ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಇದರಿಂದ ಹಿಮನದಿಗಳು ಕರಗಿ ಆ ನೀರು ಬಯಲು ಮತ್ತು ಸಾಗರಗಳಲ್ಲಿ ವಿನಾಶವನ್ನು ಉಂಟುಮಾಡಲಿದೆ.
೨. ‘ನಾಸಾ’ ಆನ್‌ಲೈನ್ ‘ಸೀ ಲೆವಲ್ ಪ್ರೊಜೆಕ್ಷನ್ ಟೂಲ್’ಅನ್ನು (ಸಮುದ್ರದ ಮಟ್ಟ ಅಳೆಯುವ ತಂತ್ರಾಂಶ) ಅಭಿವೃದ್ಧಿಪಡಿಸಿದೆ. ಇದರಿಂದ ಕರಾವಳಿಯ ಮೇಲೆ ಬರುವ ದುರಂತಗಳಿಂದ ಜೀವಗಳನ್ನು ಉಳಿಸಲು ಮತ್ತು ಅವರ ಆಸ್ತಿಯನ್ನು ಇತರ ಸ್ಥಳಗಳಿಗೆ ಸ್ಥಳಾಂತರಿಸಲು ಸಾಧ್ಯವಾಗಿಸುತ್ತದೆ. ಈ ಆನ್‌ಲೈನ್ ತಂತ್ರಾಂಶ ಬಳಸಿ ಭವಿಷ್ಯದ ಅನಾಹುತಗಳನ್ನು ಅಂದರೆ ಸಮುದ್ರ ಮಟ್ಟ ಏರಿಕೆಯನ್ನು ತಿಳಿಯಲು ಸಾಧ್ಯವಾಗುತ್ತದೆ.