ಭಾರತದ ೧೪ ಅಮೂಲ್ಯ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಿರುವ ಆಸ್ಟ್ರೇಲಿಯಾ !

ಈ ಪ್ರಾಚೀನ ಕಲಾಕೃತಿಗಳು ಆಸ್ಟ್ರೇಲಿಯಾಕ್ಕೆ ಹೇಗೆ ಹೋದವು ? ಭಾರತದ ಪ್ರಾಚೀನ ಕಲಾಕೃತಿಗಳ ಕಳ್ಳಸಾಗಣೆ ನಡೆಯುತ್ತಿರುವಾಗ ಪುರಾತತ್ವ ಇಲಾಖೆ ನಿದ್ರಿಸುತ್ತಿತ್ತೇ ? ಇಂತಹ ಇಲಾಖೆಯನ್ನು ವಿಸರ್ಜಿಸಬೇಕು !

ಸಿಡ್ನಿ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾ ತನ್ನ ರಾಷ್ಟ್ರೀಯ ಕಲಾಕೃತಿ ಸಂಗ್ರಹಾಲಯದಲ್ಲಿರುವ ಭಾರತದ ೧೪ ಅತ್ಯಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಇದರಲ್ಲಿ ವಿಗ್ರಹಗಳು, ಚಿತ್ರಗಳು, ಛಾಯಾಚಿತ್ರಗಳು ಇತ್ಯಾದಿ ಒಳಗೊಂಡಿವೆ. ಇವುಗಳಲ್ಲಿ ಹಲವು ಕಲಾಕೃತಿಗಳು ೧೨ ನೇ ಶತಮಾನದಷ್ಟು ಹಳೆಯದಾಗಿವೆ. ಕಲಾಕೃತಿಗಳ ಮೌಲ್ಯ ೧೬ ಕೋಟಿ ಎಂದು ಅಂದಾಜಿಸಲಾಗಿದೆ. ಈ ಕಲಾಕೃತಿಗಳನ್ನು ೧೯೮೯ ರಿಂದ ೨೦೦೯ ರವರೆಗೆ ಸಂಗ್ರಹಾಲಯದಲ್ಲಿ ಸೇರಿಸಲಾಗಿತ್ತು. ಇವುಗಳಲ್ಲಿ ೧೩ ವಸ್ತುಗಳನ್ನು ಅಪರೂಪದ ವಸ್ತುಗಳ ಕಳ್ಳಸಾಗಾಣಿಕೆ ಮಾಡುವ ಸುಭಾಷ್ ಕಪೂರ್ ಎಂಬವನಿಂದ ವಶಪಡಿಸಿಕೊಳ್ಳಲಾಗಿತ್ತು. ಸುಭಾಷ್ ಕಪೂರ್ ಈಗ ಸೆರೆಮನೆಯಲ್ಲಿದ್ದಾನೆ. ಈ ಹಿಂದೆ ೨೦೧೪ ರಲ್ಲಿ ಸಂಗ್ರಹಾಲಯವು ೨೭ ಕೋಟಿ ಮೌಲ್ಯದ ಅಪರೂಪದ ಶಿವನ ಹಿತ್ತಾಳೆಯ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಾಂತರಿಸಿತ್ತು.