ವಾಯುಮಾಲಿನ್ಯದಿಂದ ಭಾರತೀಯರ ಆಯುಷ್ಯ ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆ ! – ಶಿಕಾಗೋ ವಿದ್ಯಾಪೀಠದಲ್ಲಿ ಉರ್ಜಾ ಧೋರಣ ಸಂಸ್ಥೆಯ ವರದಿ

ಇದು ವಿಜ್ಞಾನಿಗಳು ಮಾಡಿರುವ ತಥಾಕಥಿತ ಪ್ರಗತಿಯ ಪರಿಣಾಮವಾಗಿದೆ. ಈ ಕಡೆ ತಥಾಕಥಿತ ವಿಜ್ಞಾನವಾದಿಗಳು ಕಣ್ಣು ತೆರೆದು ನೋಡುವರೆ ?

ಸಾಂದರ್ಭಿಕ ಚಿತ್ರ

ನವದೆಹಲಿ – ಮುಂಬರುವ ಸಮಯದಲ್ಲಿ ವಾಯುಮಾಲಿನ್ಯದಿಂದ ಸುಮಾರು ಶೇ. ೪೦ ರಷ್ಟು ಭಾರತೀಯರ ಆಯುಷ್ಯವು ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆಯಿದೆ, ಎಂಬ ವರದಿಯನ್ನು ಶಿಕಾಗೋ ವಿದ್ಯಾಪೀಠದ ಊರ್ಜಾ ಧೋರಣ ಸಂಸ್ಥೆಯು (‘ಇ.ಪಿ.ಐ.ಸಿ.’ಯು) ಜಾರಿಮಾಡಿದೆ.

ಈ ವರದಿಯಲ್ಲಿ ಮುಂದಿನಂತೆ ಹೇಳಲಾಗಿದೆ.

೧. ನವದೆಹಲಿ ಸಹಿತ ಮಧ್ಯ, ಪೂರ್ವ ಮತ್ತು ಉತ್ತರ ಭಾರತದಲ್ಲಿ ೪೮ ಕೋಟಿ ಜನರು ಬೃಹತ್ ಪ್ರಮಾಣದ ಮಾಲಿನ್ಯಭರಿತ ಪ್ರದೇಶದಲ್ಲಿ ವಾಸಿಸುತ್ತಾರೆ.

೨. ಸ್ವಿಟ್ಜರ್ಲ್ಯಾಂಡ್‌ನಲ್ಲಿ ‘ಐಕ್ಯೂ ಏರ್’ ಸಂಸ್ಥೆಯ ಪ್ರಕಾರ, ೨೦೨೦ ರಲ್ಲಿ ಸತತ ಮೂರನೇ ವರ್ಷ ನವದೆಹಲಿಯು ಜಗತ್ತಿನ ಅತ್ಯಧಿಕ ಮಾಲಿನ್ಯವಿರುವ ರಾಜಧಾನಿ ಆಗಿತ್ತು. (ಇದು ದೆಹಲಿಯಲ್ಲಿ ಇಲ್ಲಿಯವರೆಗೂ ಅಧಿಕಾರದಲ್ಲಿದ್ದ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ಲಜ್ಜಾಸ್ಪದವಾಗಿದೆ ! ಸಂಪಾದಕರು) ಕಳೆದ ವರ್ಷ ಕೊರೊನಾದ ಸೋಂಕು ತಡೆಯಲು ಸಂಚಾರ ನಿಷೇಧ ಹೇರಲಾಯಿತು. ಈ ಸಮಯದಲ್ಲಿ ನವದೆಹಲಿಯ ೨ ಕೋಟಿ ಜನರು ವಾಯುಮಾಲಿನ್ಯ ರಹಿತ ಸ್ಚಚ್ಛ ಗಾಳಿಯನ್ನು ಉಸಿರಾಡಿದರು.

೩. ಹೀಗಿದ್ದರೂ ಹತ್ತಿರದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿನ ರೈತರು ಹೊಲದಲ್ಲಿರುವ ಕಳೆಗಿಡಗಳನ್ನು (ಬಿತ್ತನೆ ಸಮಯದಲ್ಲಿ ಬೆಳೆಯ ಜೊತೆ ಬೆಳೆಯುವ ಅನಾವಶ್ಯಕ ಗಿಡಗಂಟಿಗಳು) ಸುಟ್ಟಿದ್ದರಿಂದ, ಮತ್ತೆ ಚಳಿಗಾಲದಲ್ಲಿ ದೆಹಲಿಯಲ್ಲಿನ ಮಾಲಿನ್ಯದಲ್ಲಿ ಇನ್ನಷ್ಟು ಹೆಚ್ಚಳವಾಯಿತು.