ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಈ ರೀತಿಭಯವೆನಿಸುತ್ತಿದ್ದಲ್ಲಿ ರಷ್ಯಾವು ತಾಲಿಬಾನನ್ನು ಬಹಿರಂಗವಾಗಿ ಏಕೆ ವಿರೋಧಿಸುತ್ತಿಲ್ಲ ?

ಮಾಸ್ಕೋ (ರಷ್ಯಾ) – ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ. ಅಫಘಾನಿಸ್ತಾನದಲ್ಲಿ ನಾಗರಿಕ ಕಲಹ ಹೆಚ್ಚಾಗಿರುವುದರಿಂದ ಸಂಪೂರ್ಣ ಪ್ರದೇಶದಲ್ಲಿ ಭಯೋತ್ಪಾದನೆಯು ಹರಡಿದೆ. ಈ ಭಯೋತ್ಪಾದನೆಯು ರಷ್ಯಾ ಮತ್ತು ಕಾಶ್ಮೀರದಲ್ಲಿಯೂ ಹರಡಬಹುದು ಎಂಬ ಭಯವನ್ನು ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲೆ ಕೂಡಾಶಿವ ಇವರು ವ್ಯಕ್ತಪಡಿಸಿದ್ದಾರೆ. ಇವರು ರಷ್ಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದರು.

1. ಕುಡಾಶಿವ ಇವರು ‘ನಮಗೆ ಒಂದು ಸರ್ವಸಮಾವೇಶಕ ಸರಕಾರವು ಬೇಕಿದೆ. ನಾವು ಅಫಘಾನಿಸ್ತಾನದ ಭೂಮಿಯು ಇತರ ದೇಶಗಳಲ್ಲಿ ಭಯವನ್ನು ಹರಡುವ ತಾಣವಾಗಬಾರದು ಎಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಈ ಚಿಂತೆಯು ಸಾಮಾನ್ಯವೇ ಆಗಿದೆ. ಈ ವಿಷಯವು ರಷ್ಯಾ ಮತ್ತು ಭಾರತದ ಚೌಕಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಈ ವಿಷಯವಿತ್ತು. ನಾವು ಅಪಾಯವನ್ನು ಎದುರಿಸುತ್ತಿದ್ದೇವೆ ಮತ್ತು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

2. ಭಾರತದ ಅಧಿಕೃತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಮಾಹಿತಿ ಮಂತ್ರಿಗಳಾದ ಮಹಮೂದ ಇವರು ‘ಬಾಂಗ್ಲಾದೇಶವು ಅಫಘಾನಿಸ್ತಾನದಲ್ಲಿನ ಸಂಬಂಧಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಗಮನವಿಟ್ಟಿದೆ. ದಕ್ಷಿಣ ಏಷ್ಯಾದ ಕ್ಷೇತ್ರದಲ್ಲಿನ ಸ್ಥಿರತೆಗಾಗಿ ಅಫಘಾನಿಸ್ತಾನದ ಸ್ಥಿರತೆಯು ಮಹತ್ವದ್ದಾಗಿದೆ. ತಾಲಿಬಾನ್ ಸ್ಥಾಪಿಸಿರುವ ಯಾವುದೇ ಅಧಿಕಾರಕ್ಕೆ ಮಾನ್ಯತೆ ನೀಡುವ ಬಗ್ಗೆ ಮಾತನಾಡುವುದೆಂದರೆ ಗಡಿಬಿಡಿಯಲ್ಲಿ ಮಾತನಾಡುವಂತೆ ಆಗುವುದು’ ಎಂದು ಹೇಳಿದ್ದಾರೆ.