ಭಾರತಕ್ಕೆ 248 ಪ್ರಾಚೀನ ವಸ್ತುಗಳನ್ನು ಮರಳಿಸಿದ ಅಮೇರಿಕಾ !

ಪ್ರಾಚೀನ ವಸ್ತುಗಳನ್ನು ಅನೇಕ ವರ್ಷಗಳ ಹಿಂದೆ ಕಳ್ಳತನ ಮಾಡಲಾಗಿತ್ತು. ಈ ವಸ್ತುಗಳಲ್ಲಿ 12 ನೇಯ ಶತಮಾನದ ಕಂಚಿನ ನಟರಾಜ ಮೂರ್ತಿಯೂ ಇದೆ.

ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯ ಆಚರಿಸುವವರ ವಿರುದ್ಧ ದೇಶದ್ರೋಹದ ಆರೋಪ ದಾಖಲು

ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.

‘ಭವಿಷ್ಯದಲ್ಲಿ ರಷ್ಯಾದ ಸಹಾಯವಿಲ್ಲದೆ ಭಾರತೀಯ ಸೇನೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ !'(ಅಂತೆ) – ಅಮೆರಿಕಾದ ಒಂದು ಸಂಸ್ಥೆಯ ವರದಿಯಲ್ಲಿ ಹೇಳಿಕೆ !

ಭಾರತೀಯ ಸೇನೆಯನ್ನು ಕೀಳಾಗಿ ನೋಡುವವರನ್ನು ಸರಕಾರವು ಕಿವಿ ಹಿಂಡಬೇಕು !

ಅರುಣಾಚಲ ಭಾರತದ ಭಾಗ ಅಲ್ಲ (ವಂತೆ) ! – ಮತ್ತೊಮ್ಮೆ ವಿಷ ಕಕ್ಕಿದ ಚೀನಾ

ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು.

ಪಾಕಿಸ್ತಾನದಲ್ಲಿ ೧೨ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ

ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ.

ಭಾರತ ಮತ್ತು ಅಪಘಾನಿಸ್ತಾನದ ನಡುವೆ ವಿಮಾನ ಸೇವೆ ಪುನಃ ಆರಂಭಿಸಬೇಕು ! ತಾಲಿಬಾನ್ ಸರಕಾರದಿಂದ ಭಾರತಕ್ಕೆ ಬೇಡಿಕೆ !

ಅಪಘಾನಿಸ್ತಾನದ ತಾಲಿಬಾನ ಸರಕಾರವು ಭಾರತದ ನಾಗರಿಕ ವಿಮಾನ ಯಾನ ನಿರ್ದೇಶಕರಿಗೆ ಪತ್ರ ಬರೆದು ಭಾರತ ಮತ್ತು ಅಪಘಾನಿಸ್ತಾನದ ನಡುವಿನ ವಿಮಾನ ಹಾರಾಟ ಸೇವೆ ಯನ್ನು ಪುನರಾರಂಭಿಸಬೇಕೆಂದು ಬೇಡಿಕೆಯನ್ನು ನೀಡಿದೆ.

ವಿವೇಕ ರಾಮ ಚೌಧರಿ ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಲಿದ್ದಾರೆ !

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.

ಭಾರತದ ವಿರೋಧದ ಬಳಿಕ ‘ಕೊವಿಶಿಲ್ಡ ಲಸಿಕೆಯನ್ನು ಮಾನ್ಯ ಮಾಡಿದ ಬ್ರಿಟನ್

ಬ್ರಿಟನ ‘ಕೊವಿಶೀಲ್ಡನ ಎರಡು ಡೋಸ ಲಸಿಕೆ ಪಡೆದುಕೊಂಡಿದ್ದರೂ ‘ಅವರು ಲಸಿಕೆ ಪಡೆದುಕೊಂಡಿದ್ದಾರೆ, ಎಂದು ಒಪ್ಪಿಕೊಳ್ಳುವುದಿಲ್ಲವೆಂಬ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನವನ್ನು ಭಾರತವು ವಿರೋಧಿಸಿದ ಬಳಿಕ ಬ್ರಿಟನ ಅದನ್ನು ಹಿಂದೆಗೆದುಕೊಂಡಿದೆ.

ದೇಶ ಮತ್ತು ವಿದೇಶಗಳಲ್ಲಿ ಹಿಂಸೆ ಇದುವೇ ಪಾಕಿಸ್ತಾನದ ಸಂಸ್ಕೃತಿ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಿವಿ ಹಿಂಡಿದ ಭಾರತ

ಪಾಕಿಸ್ತಾನವು ತನ್ನ ಮನೆಯಲ್ಲಿ ಮತ್ತು ವಿದೇಶಗಳಲ್ಲಿ ಹಿಂಸೆಯ ಸಂಸ್ಕೃತಿಯನ್ನು ಮುಂದುವರಿಸಿದೆ; ಏಕೆಂದರೆ ಅವರು ಭಾರತದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿದ್ದಾರೆ. ನಾವು ಇಂತಹ ಎಲ್ಲ ಪ್ರಯತ್ನಗಳನ್ನು ನಿಷೇಧಿಸುತ್ತೇವೆ ಮತ್ತು ಅವುಗಳನ್ನು ಖಂಡಿಸುತ್ತೇವೆ, ಎಂಬ ಮಾತುಗಳಲ್ಲಿ ಭಾರತವು ಪಾಕಿಸ್ತಾನದ ಕಿವಿ ಹಿಂಡಿದೆ.

ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ.