ಭಾರತವು ಉಕ್ರೇನನಿಂದ ತನ್ನನ್ನು ಸುರಕ್ಷಿತವಾಗಿ ಹೊರಗೆ ಕರೆತಂದದ್ದಕ್ಕಾಗಿ ಪಾಕಿಸ್ತಾನಿ ಯುವತಿಯು ಪ್ರಧಾನಮಂತ್ರಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದಳು !

ಪಾಕಿಸ್ತಾನವು ಧರ್ಮದ ಹೆಸರಿನಲ್ಲಿ ಪ್ರತಿದಿನ ಅಲ್ಲಿನ ಅಮಾಯಕ ಅಲ್ಪಸಂಖ್ಯಾತ ಹಿಂದುಗಳನ್ನು ಕೊಲೆ ಮಾಡುತ್ತದೆ, ಆದರೆ ಭಾರತವು ಮಾನವತೆಯ ದೃಷ್ಟಿಯಿಂದ ಪಾಕಿಸ್ತಾನದ ನಾಗರಿಕರನ್ನು ಮರಣದ ದವಡೆಯಿಂದ ಹೊರಗೆ ತೆಗೆಯುತ್ತದೆ ! ಆದರೂ ತಥಾಕಥಿತ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯು ಭಾರತವನ್ನೇ ‘ಅಸಹಿಷ್ಣು’ ಎಂದು ನಿರ್ಧರಿಸುತ್ತದೆ !

ನವ ದೆಹಲಿ – ಭಾರತ ಸರಕಾರವು ಉಕ್ರೇನನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವುದರ ಜೊತೆಗೆ ಇತರ ದೇಶಗಳ ನಾಗರಿಕರನ್ನೂ ಕೂಡ ಹೊರಗೆ ಕರೆತಂದಿದೆ. ಅದರಲ್ಲಿ ಅಸ್ಮಾ ಶಫೀಫ ಎಂಬ ಪಾಕಿಸ್ತಾನದ ಯುವತಿಯ ಸಮಾವೇಶವಿದೆ. ಅದಕ್ಕಾಗಿ ಅವಳು ಭಾರತೀಯ ರಾಯಭಾರ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದಳು. ಆ ಬಗ್ಗೆ ಅವಳ ಒಂದು ವಿಡಿಯೋ ಅನ್ನು ಪ್ರಸಾರಗೊಳಿಸಲಾಯಿತು. ಶೀಘ್ರದಲ್ಲಿಯೇ ಅವಳು ತನ್ನ ಕುಟುಂಬದವರನ್ನು ಭೇಟಿಯಾಗಲಿದ್ದಾಳೆ.

೯ ಬಾಂಗ್ಲಾದೇಶಿ ನಾಗರಿಕರನ್ನು ಮುಕ್ತಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶೇಖ ಹಸೀನರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು !

ಭಾರತವು ಉಕ್ರೇನನಿಮದ ಭಾರತೀಯ ನಾಗರಿಕರ ಸಮೇತ ಬೇರೆ ದೇಶಗಳ ನಾಗರಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿತು. ಅದರಲ್ಲಿ ೯ ಬಾಂಗ್ಲಾದೇಶಿ ನಾಗರಿಕರ ಸಮಾವೇಶವಿದೆ. ಈ ಸಹಾಯಕ್ಕಾಗಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಉಕ್ರೇನನಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿದ್ದರು. ಅವರು ರಷ್ಯಾದ ರಾಷ್ಟ್ರಾಧ್ಯಕ್ಷರಾದ ವ್ಲಾದಿಮಿರ ಪುತಿನ ಹಾಗೂ ಉಕ್ರೇನನ ಅಧ್ಯಕ್ಷರಾದ ವ್ಲೊದಿಮಿರ ಝೆಲೆಂಸ್ಕೀಯವರಿಗೆ ಕರೆ ಮಾಡಿ ಚರ್ಚೆ ನಡೆಸಿ ನಾಗರಿಕರನ್ನು ಹೊರಗೆ ಕರೆತರುವ ಬೇಡಿಕೆ ಮಾಡಿದ್ದರು.