ರಷ್ಯಾದೊಂದಿಗೆ ಹೋರಾಡಲು ಉಕ್ರೇನ್‌ನ ಸೈನ್ಯಕ್ಕೆ ಸೇರಿದ ಭಾರತೀಯ ಯುವಕ !

ಕೀವ (ಉಕ್ರೇನ) – ರಷ್ಯಾವು ಉಕ್ರೇನ್‌ನ ಮೇಲೆ ನಡೆಸಿದ ದಾಳಿಗೆ ೧೩ ದಿನಗಳಾಗಿದೆ. ಈ ಯುದ್ಧದಲ್ಲಿ ಉಕ್ರೇನಗೆ ಸಹಾಯ ಮಾಡಲು ವಿದೇಶದಿಂದ ಯುವಕರು ಬರುತ್ತಿದ್ದಾರೆ. ಅದರಲ್ಲಿ ಓರ್ವ ಭಾರತೀಯ ಯುವಕನೂ ಸಹಭಾಗವಿದೆ, ಎಂದು ‘ದ ಕೀವ ಇಂಡಿಪೆಂಡೆಂಟ’ ಎಂಬ ವಾರ್ತಾವಾಹಿನಿಯು ಮಾಹಿತಿ ನೀಡಿದೆ.

ಆ ಯುವಕನ ಹೆಸರು ಸೈನಿಕೇಶ ರವಿಚಂದ್ರನ ಎಂದಿದ್ದು ಆತ ತಮಿಳುನಾಡಿನ ಕೊಯಿಂಬತ್ತೂರಿಗೆ ಸೇರಿದವನಾಗಿದ್ದಾನೆ. ಅವನು ಶಿಕ್ಷಣದ ನಿಮಿತ್ತ ಉಕ್ರೇನಗೆ ಹೋಗಿದ್ದನು. ಅವನು ೨೧ ವರ್ಷದವನಾಗಿದ್ದಾನೆ. ಈ ಹಿಂದೆ ಸೈನಿಕೆಶ ಭಾರತೀಯ ಸೈನ್ಯದಲ್ಲಿ ಭಾಗವಹಿಸಲು ಪ್ರಯತ್ನಿಸಿದ್ದನು; ಆದರೆ ಅವನು ಅದರಲ್ಲಿ ಯಶಸ್ವಿಯಾಗಲಿಲ್ಲ.
ಯುದ್ಧದಿಂದ ಸೈನಿಕೇಶನ ಭಾರತದಲ್ಲಿರುವ ಅವನ ಕುಟುಂಬದೊಂದಿಗಿನ ಸಂಪರ್ಕ ಮುರಿದಿತ್ತು. ಈ ಬಗ್ಗೆ ಅವನ ಕುಟುಂಬದವರು ಭಾರತೀಯ ರಾಯಭಾರಿ ಕಛೇರಿಯ ಸಹಾಯ ಕೇಳಿದ್ದರು. ಅನಂತರ ಸಂಪರ್ಕಕ್ಕೆ ಬಂದ ಸೈನಿಕೆಶನು ತನ್ನ ತಂದೆ-ತಾಯಿಗೆ ಉಕ್ರೇನನ ಸೈನ್ಯದಲ್ಲಿ ಸಹಭಾಗಿಯಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಿದನು. ಭಾರತೀಯ ಅಧಿಕಾರಿಗಳು ಸೈನಿಕೆಶನ ತಂದೆ-ತಾಯಿಯವರನ್ನು ಸಂಪರ್ಕಿಸಿದಾಗ ಈ ವಿಷಯ ತಿಳಿದು ಬಂತು.

‘ಆಂತರರಾಷ್ಟ್ರೀಯ ಸೈನ್ಯದಳ’ ಸ್ಥಾಪಿಸಿದ ಉಕ್ರೇನ್‌ನ ಸೈನ್ಯ !

ರಷ್ಯಾದ ವಿರುದ್ಧ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಉಕ್ರೇನ ‘ಅಂತರರಾಷ್ಟ್ರೀಯ ಸೈನ್ಯದಳ’ ಎಂಬ ಹೆಸರಿನಲ್ಲಿ ಹೊಸ ತಂಡವನ್ನು ಸ್ಥಾಪಿಸಿದೆ. ಅದರಲ್ಲಿ ಮೆಕ್ಸಿಕೊ, ಅಮೆರಿಕಾ, ಬ್ರಿಟನ, ಸ್ವಿಡನ, ಲಿಥುಆನಿಯಾ ಹಾಗೂ ಇತರ ದೇಶಗಳ ಯುವಕರು ಪ್ರಸ್ತುತ ಯುದ್ಧದಲ್ಲಿ ಉಕ್ರೇನ ವತಿಯಿಂದ ಸಹಭಾಗಿಯಾಗಿದ್ದಾರೆ. ಉಕ್ರೇನನ ರಕ್ಷಣಾ ಮಂತ್ರಾಲಯವು ನೀಡಿದ ಮಾಹಿತಿಯನುಸಾರ, ಸಾವಿರಾರು ವಿದೇಶೀ ನಾಗರಿಕರು ಉಕ್ರೇನ ಸೈನ್ಯದ ಬಳಿ ಅರ್ಜಿ ನೀಡಿ ಯುದ್ಧದಲ್ಲಿ ಭಾಗವಹಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.