ಭಾರತವು ‘ಸ್ವತಂತ್ರ ಟಿಬೇಟ’ಗೆ ಮಾನ್ಯತೆ ನೀಡಬೇಕು – ಟಿಬೇಟಿನ ನಾಗರೀಕರು

ಚೀನಾದ ವಿರುದ್ಧ ಟಿಬೇಟ ತನ್ನ ಧ್ವನಿಯನ್ನು ಎರಿಸಿದೆ

ಲ್ಹಾಸಾ (ಟಿಬೇಟ) – ಚೀನಾದ ನುಸುಳುಕೋರತನದ ವಿರುದ್ಧ ಈಗ ಟಿಬೇಟ ತನ್ನ ಧ್ವನಿ ಏರಿಸಿದೆ. ಗುರುವಾರದಂದು ಕೊಲ್ಕತ್ತಾದಲ್ಲಿರುವ ಚೀನಾದ ರಾಯಭಾರಿ ಕಛೇರಿಯ ಹೊರಗೆ ಟಿಬೇಟ ನಾಗರೀಕರು ಮತ್ತು ಭಾರತೀಯ ನಾಗರೀಕರು ಆಂದೋಲನ ನಡೆಸಿದರು. ಈ ಸಮಯದಲ್ಲಿ ಭಾರತವು ‘ಸ್ವತಂತ್ರ ಟಿಬೇಟ’ಗೆ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಲಾಯಿತು.

‘ಸೆಂಟ್ರಲ್‌ ಟಿಬೇಟ ಆರ್ಗನೈಝೇಶನ’ನ ಒಂದು ಭಾಗವೆಂದು ಇಂಡೋ-ಟಿಬೇಟ ಸಮನ್ವಯ ಸಂಘಟನೆ (ITCO) ದ ನೇತೃತ್ವದಲ್ಲಿ, ಟಿಬೇಟ ಮತ್ತು ಭಾರತೀಯ ಧ್ವಜವನ್ನು ಹಾರಿಸುತ್ತ ಆಂದೋಲನ ಮಾಡಲಾಯಿತು. ಈ ಸಮಯದಲ್ಲಿ ಆಂದೋಲನಕಾರರ ಕೈಯಲ್ಲಿ ದಲಾಯಿ ಲಾಮಾರವರ ಛಾಯಾಚಿತ್ರವಿತ್ತು.

ಭಾರತ-ಚೀನಾದ ನಡುವೆ ‘ಬಫರ ಸ್ಟೇಟ’ನ ಆವಶ್ಯಕತೆ

ಟಿಬೇಟ ಒಂದು ಸ್ವತಂತ್ರ ದೇಶವಾಗಿತ್ತು ಮತ್ತು ‘ಜಗತ್ತಿನ ಆಶ್ರಯ’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ ಈ ದೇಶವು ಚೀನಾವು ವಶಕ್ಕೆ ತೆಗೆದುಕೊಳ್ಳುವ ವರೆಗೆ ಭಾರತ ಮತ್ತು ಚೀನಾದ ನಡುವೆ ಬಫರ ಸ್ಟೇಟ್‌ನ ಭೂಮಿಕೆಯನ್ನು ನಿಭಾಯಿಸುತ್ತಿತ್ತು, ಎಂದು ಇಂಡೋ-ಟಿಬೇಟ ಸಮನ್ವಯ ಸಂಘಟನೆಯ ಸಮನ್ವಯಕರಾದ ಜಿಗ್ಮೆ ತ್ಸುಲತ್ರಿಮರವರು ಹೇಳಿದರು. ಅವರು ಟಿಬೇಟಿಗರಿಗೆ ಅಧಿಕೃತವಾಗಿ ನಿರಾಶ್ರಿತರ ದರ್ಜೆ ನೀಡಬೇಕು, ಹಾಗೆಯೇ ದಲಾಯಿ ಲಾಮಾರವರಿಗೆ ಭಾರತ ರತ್ನ ನೀಡಿ ಸನ್ಮಾನ ಮಾಡಬೇಕು ಎಂದು ಮನವಿ ಮಾಡಿದರು.

ಲ್ಹಾಸಾದಲ್ಲಿ ನಡೆದ ಚೀನಾ ಆಕ್ರಮಣದ ವಿರುದ್ಧ ೧೯೪೯ರಲ್ಲಿ ಟಿಬೇಟಿನ ನಾಗರೀಕರು ಶಾಂತಿಯುತವಾಗಿ ಚೀನಾವನ್ನು ವಿರೋಧಿಸಿದ್ದರು. ಈ ವಿರೋಧದ ವಾರ್ಷಿಕೋತ್ಸವದ ನಿಮಿತ್ತವಾಗಿ ಅನೇಕ ಕಡೆಗಳಲ್ಲಿ ಆಂದೋಲನಗಳನ್ನು ಮಾಡಲಾಯಿತು. ಚೀನಾದ ಈ ಆಕ್ರಮಣದಿಂದಾಗಿ ದಲಾಯಿ ಲಾಮಾ ಮತ್ತು ಅವರ ಅಸಂಖ್ಯ ಅನುಯಾಯಿಗಳಿಗೆ ಓಡಿಹೋಗಿ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು.

ಟಿಬೇಟಿಗಾಗಿ ಓರ್ವ ಮಂತ್ರಿ ಬೇಕಾಗಿದ್ದಾರೆ

ಲಡಾಖ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ಸೈನ್ಯದ ನುಸುಳುವಿಕೆಯು ಹೆಚ್ಚುತ್ತಿರುವುದರ ಸಂದರ್ಭ ನೀಡುವಾಗ ಏಷ್ಯಾದಲ್ಲಿನ ಮಹಾಶಕ್ತಿಗಳ ನಡುವೆ (ಭಾರತ ಮತ್ತು ಚೀನಾ) ಬಫರ ಸ್ಟೇಟ್‌ನ ಆವಶ್ಯಕತೆಯಿದೆ ಎಂದು ಇಂಡೋ-ಟಿಬೇಟ ಸಮನ್ವಯ ಸಂಘಟನೆಯ ಪೂರ್ವ ವಿಭಾಗದ ಸಂಯೋಜಕರಾದ ರೂಬಿ ಮುಖರ್ಜಿಯವರು ಹೇಳಿದ್ದಾರೆ. ಈ ಸಮಯದಲ್ಲಿ ಮುಖರ್ಜಿಯವರು ಭಾರತವು ಟಿಬೇಟಿನ ಪ್ರಕರಣಗಳ ಮೇಲ್ವಿಚಾರಣೆಗಾಗಿ ಓರ್ವ ಮಂತ್ರಿಗಳನ್ನು ನೇಮಿಸಬೇಕು, ಎಂಬ ಸಲಹೆಯನ್ನೂ ನೀಡಿದರು.
ಕುಲ್ಲೂನಲ್ಲಿಯೂ ಆಂದೋಲನ

ಕುಲ್ಲೂ ಜಿಲ್ಲೆಯಲ್ಲಿಯೂ ಟಿಬೇಟ ನಾಗರೀಕರು ಸ್ವಾತಂತ್ರ‍್ಯಕ್ಕಾಗಿ ಧ್ವನಿ ಎತ್ತಿದರು. ಟಿಬೇಟ ಸಮುದಾಯದ ಸಾವಿರಾರು ನಾಗರೀಕರು ರಸ್ತೆಗಿಳಿದು ಚೀನಾದ ವಿರುದ್ಧ ಭಾರಿ ಘೋಷಣೆಗಳನ್ನು ಕೂಗಿದರು.