‘ಭಾರತದ ಗಡಿಯಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಬಂದಿದೆ !’(ಅಂತೆ) – ಪಾಕಿಸ್ತಾನ ಸೇನೆಯ ಹುಯಿಲು

ಒಟ್ಟಿನಲ್ಲಿ ಭಾರತದ ಮಾನಹಾನಿ ಮಾಡುವ ಪಾಕಿಸ್ತಾನದ ಕಿತಾಪತಿ ವೃತ್ತಿಯನ್ನು ತಿಳಿಯಿರಿ !

ಇಸ್ಲಾಮಬಾದ್ : ಭಾರತದ ಗಡಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿಗಳು ಬಂದವು ಮತ್ತು ನಂತರ ಪಾಕಿಸ್ತಾನದ ಗಡಿಯಲ್ಲಿಯೇ ಬಿತ್ತು, ಎಂದು ಹುಯಿಲು ಪಾಕಿಸ್ತಾನಿ ಸೇನೆ ಹೇಳಿದೆ. ಪಾಕಿಸ್ತಾನ ಸೇನೆಯ ವಕ್ತಾರ ಮೆಜರ್ ಜನರಲ್ ಬಾಬರ್ ಇಫ್ತಿಖಾರ ಮಾತನಾಡುತ್ತಾ, ‘ಮಾರ್ಚ್ ೯ ರಂದು ಸಂಜೆ ೬ ಗಂಟೆ ೪೩ ನಿಮಿಷಕ್ಕೆ ಕ್ಷಿಪಣಿಗಳು ಭಾರತದ ಗಡಿಯಿಂದ ಬಂದಿವೆ. ಅದು ಪಾಕಿಸ್ತಾನದಲ್ಲಿ ಬಿದ್ದನಂತರ ಯಾವುದೇ ಜೀವ ಹಾನಿ ಆಗದೇ ಇದ್ದರೂ, ಆಸ್ತಿ ಹಾನಿಯಾಗಿದೆ.” ಎಂದು ಹೇಳಿದರು.