ಪಾಕಿಸ್ತಾನದಲ್ಲಿನ ಮುಂಬರುವ ‘ಢಾಯಿ ಚಾಲ’ ಎಂಬ ಚಲನಚಿತ್ರದಲ್ಲಿ ಭಾರತ ಬಗ್ಗೆ ವಿಷಕಾರಲಾಗಿದೆ !

* ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮಾಡುತ್ತಿರುವುದರ, ಹಾಗೆಯೇ ಭಾರತದಲ್ಲಿ ಭಾರತವೇ ಭಯೋತ್ಪಾದಕ ಆಕ್ರಮಣಗಳನ್ನು ಮಾಡಿ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿರುವುದಾಗಿ ಆರೋಪಿಸಲಾಗುತ್ತಿದೆ ! – ಸಂಪಾದಕರು 

* ಪಾಕಿಸ್ತಾನವು ಎಷ್ಟೇ ಸುಳ್ಳುಗಾರಿಕೆ ಮಾಡಿದರೂ ಸತ್ಯವು ಜಗತ್ತಿಗೇ ತಿಳಿದಿದೆ ! ಇಂತಹ ಚಲನಚಿತ್ರಗಳ ಮೇಲೆ ಭಾರತವು ನಿರ್ಬಂಧ ಹೇರಬೇಕಿದೆ !- ಸಂಪಾದಕರು 

ನವದೆಹಲಿ – ಪಾಕಿಸ್ತಾನದಲ್ಲಿನ ‘ಢಾಯಿ ಚಾಲ’ ಎಂಬ ಮುಂಬರುವ ಚಲನಚಿತ್ರದ ಜಾಹಿರಾತು (ಟ್ರೇಲರ್‌) ಪ್ರದರ್ಶಿತವಾಗಿದೆ. ಈ ಚಲನಚಿತ್ರದಲ್ಲಿ ಭಾರತದ ಬಗ್ಗೆ ವಿಷಕಾರಲಾಗಿದೆ. ಈ ಚಲನಚಿತ್ರದಲ್ಲಿ ಅನೇಕ ಸಂವಾದಗಳಿಂದ ಭಾರತದ ಪ್ರತಿ ಇರುವ ದ್ವೇಷವನ್ನು ತೋರಿಸಲಾಗಿದೆ. ಈ ಚಲನಚಿತ್ರದಲ್ಲಿ ಪಾಕಿಸ್ತಾನನದಲ್ಲಿರುವ ಭಯೋತ್ಪಾದಕ ಆಕ್ರಮಣಗಳಿಗಾಗಿ ಭಾರತವನ್ನು ಜವಾಬ್ದಾರಗೊಳಿಸಲಾಗಿದೆ. ಈ ಚಲನಚಿತ್ರದಲ್ಲಿನ ಕೆಲವು ಸಂವಾದಗಳು ಮುಂದಿನಂತಿವೆ.

೧. ಭಾರತವನ್ನು ಒಳಗಿನಿಂದ ಎಷ್ಟು ಟೊಳ್ಳು ಮಾಡಬೇಕೆಂದರೆ ಅದರ ಮನಸ್ಸಿನಲ್ಲಿಯೂ ಕಾಶ್ಮೀರದ ವಿಚಾರ ಬರಬಾರದು.

೨. ಇದು ಬಾಲಿವುಡ ಅಲ್ಲ, ಅಲ್ಲಿ ನೀವು ಭಾರತದ ಪಾಕಿಸ್ತಾನದ ವಿರುದ್ಧ ಇರುವಂತಹ ಎಲ್ಲ ಯುದ್ಧಗಳನ್ನು ಗೆದ್ದಿರುವಿರಿ.

೩. ತಮ್ಮದೇ ನಗರದಲ್ಲಿ ತಮ್ಮದೇ ಭಯೋತ್ಪಾದಕ ಆಕ್ರಮಣಗಳನ್ನು ನಡೆಸುತ್ತದೆ ಹಾಗೂ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ.

೪. ಭಾರತವು ಈಗ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಬೆಂಕಿಯನ್ನು ಪ್ರಚೋದಿಸುತ್ತಿದೆ.