ಅಫ್ಘಾನಿಸ್ತಾನಕ್ಕೆ ಕೊಳೆತ ಗೋಧಿಯನ್ನು ಕಳುಹಿಸಿದ್ದಕ್ಕಾಗಿ ಪಾಕಿಸ್ತಾನ ವಿರುದ್ಧ ತಾಲಿಬಾನ್ ಅಸಮಧಾನ !

ಭಾರತ ಮತ್ತು ಪಾಕಿಸ್ತಾನ ಕೂಡಾ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಿತ್ತು. ಪಾಕಿಸ್ತಾನವು ಕಳುಹಿಸಿದ ಗೋಧಿ ಅತ್ಯಂತ ಕಳಪೆ ಮಟ್ಟದ್ದು ಇದ್ದರಿಂದ ತಾಲಿಬಾನ್‌ವು ಪಾಕಿಸ್ತಾನದ ಈ ಕೃತ್ಯಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದು, ಭಾರತವನ್ನು ಹೊಗಳಿದೆ.

ಕೀವನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಗೆ ಗಾಯ ! – ಕೇಂದ್ರೀಯ ಸಚಿವ ವಿ.ಕೆ. ಸಿಂಹ

ರಷ್ಯಾ ಮತ್ತು ಉಕ್ರೇನ್ ಇವರಲ್ಲಿನ ನಡೆಯುತ್ತಿರುವ ಯುದ್ಧದಲ್ಲಿ ಕೀವನಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗಲಿ ಗಾಯಗೊಂಡಿದ್ದಾನೆ, ಎಂದು ಕೇಂದ್ರ ಸಚಿವ ವಿ.ಕೆ. ಸಿಂಹ ಅವರು ಮಾಹಿತಿ ನೀಡಿದರು. ಈ ಮೊದಲು ಯುದ್ಧದಲ್ಲಿ ಗುಂಡಿನ ದಾಳಿಯಿಂದ ನವೀನ ಶೇಖರಪ್ಪ ಇವರು ಸಾವನ್ನಪ್ಪಿದ್ದು ಬೇರೆ ಒಬ್ಬ ವಿದ್ಯಾರ್ಥಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ.

ಭಾರತೀಯರನ್ನು ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮದ ವಾರ್ತೆಯ ಬಗ್ಗೆ ವಿದೇಶಾಂಗ ಸಚಿವಾಲಯವು ಖಂಡಿಸಿದೆ

ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ.

ಕುಲಭೂಷಣ್ ಜಾಧವ್ ಪರವಾಗಿ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ! – ಪಾಕಿಸ್ತಾನ ಸರಕಾರಕ್ಕೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯದಿಂದ ಆದೇಶ

ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪಿನಂತೆ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಪ್ರಿಲ್ ೧೩, ೨೦೨೨ ರೊಳಗೆ ನ್ಯಾಯವಾದಿಯನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಇಸ್ಲಾಮಾಬಾದ ಉಚ್ಚ ನ್ಯಾಯಾಲಯ ಪಾಕಿಸ್ತಾನ ಸರಕಾರಕ್ಕೆ ಆದೇಶ ನೀಡಿದೆ.

ನಾನು ಪುತಿನ್ ಇವರಿಗೆ ಯುದ್ಧ ನಿಲ್ಲಿಸುವ ಆದೇಶ ನೀಡಬೇಕೇ ? – ನ್ಯಾಯಾಧೀಶ ಎನ್.ವಿ. ರಮಣ ಇವರ ಪ್ರಶ್ನೆ

ಯುಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶ ಎನ್.ವಿ. ರಮಣ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಉದಾಹರಣೆ ನೀಡಿದರು.

ಉಕ್ರೇನ್‌ನಿಂದ ೧೭ ಸಾವಿರ ಭಾರತೀಯರ ನಿರ್ಗಮನ !

ಉಕ್ರೇನ್‌ನಲ್ಲಿ ಸಿಲುಕಿರುವ ಒಟ್ಟು ಭಾರತೀಯರ ಪೈಕಿ ೧೭ ಸಾವಿರ ಭಾರತೀಯರು ಉಕ್ರೇನ್ ನಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಭಾರತೀಯ ವಾಯು ಸೇನೆಯ ೪ ವಿಮಾನಗಳು ಸುಮಾರು ೪೦೦ ಭಾರತೀಯ ನಾಗರಿಕರನ್ನು ತೆಗೆದುಕೊಂಡು ಉಕ್ರೇನ್‌ನಿಂದ ಹಾರಾಟ ಮಾಡಿವೆ.

ರಷ್ಯಾ ಭಾರತೀಯ ವಿದ್ಯಾರ್ಥಿಗಳಿಗೆ ಖಾರಕೀವದಿಂದ ಸುರಕ್ಷಿತವಾಗಿ ಹೊರಬರಲು ೬ ಗಂಟೆ ದಾಳಿ ನಿಲ್ಲಿಸಿದ್ದರು !

ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವಾಗ ಇಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆ ಯುದ್ಧವನ್ನು ನಿಲ್ಲಿಸಿತ್ತು. ಮಾರ್ಚ್ ೨ರ ರಾತ್ರಿ ರಷ್ಯಾ ಇದಕ್ಕಾಗಿ ಯುದ್ಧ ನಿಲ್ಲಿಸಿತ್ತು.

ಮೊಘಲರು ರಜಪೂತರನ್ನು ಕಗ್ಗೊಲೆ ಮಾಡಿದಂತೆ ರಷ್ಯಾವು ನಮ್ಮನ್ನು ಮಾಡುತ್ತಿದೆ ! – ಭಾರತದಲ್ಲಿರುವ ಯುಕ್ರೇನ್‍ದ ರಾಯಭಾರಿ ಡಾ. ಇಗೊರ ಪೋಲಿಖಾ

ರಷ್ಯಾವು ಯುಕ್ರೇನ್‍ನ ವಿರುದ್ಧ ನಡೆಸಿರುವ ಯುದ್ಧ ಭಾರತದಲ್ಲಿ ರಜಪೂತರ ವಿರುದ್ಧ ಮೊಘಲರು ನಡೆಸಿದ ನರಮೇಧದಂತೆಯೇ ಇದೆ ಎಂದು ಭಾರತದಲ್ಲಿನ ಯುಕ್ರೇನ್ ರಾಯಭಾರಿ ಡಾ. ಇಗೊರ್ ಪೋಲಿಖಾ ಹೇಳಿಕೆ ನೀಡಿದರು.

ಭಾರತೀಯ ವಿದ್ಯಾರ್ಥಿಗಳನ್ನು ರಷ್ಯಾದ ಮೂಲಕ ಹೊರತರಲು ಸಹಾಯ ಮಾಡುವೆವು ! – ಭಾರತದಲ್ಲಿನ ರಷ್ಯಾದ ರಾಜದೂತರ ಆಶ್ವಾಸನೆ

ಭಾರತದಲ್ಲಿನ ರಷ್ಯಾದ ರಾಜದೂತರಾದ ಡೆನಿಸ ಅಲೀಪೊಹ್ವರವರು ‘ಯುಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಿಂದೆ ಕರೆತರಲು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ರಷ್ಯಾದ ಕ್ಷೇತ್ರದಿಂದ ಈ ವಿದ್ಯಾರ್ಥಿಗಳನ್ನು ಹೊರತರುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

ಭಾರತದಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚದ ಕಾರಣದಿಂದಾಗಿ, ಬುದ್ಧಿವಂತ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ ! – ರಷ್ಯಾದ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ನ ತಂದೆ

ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾತಿವಾದ ಮತ್ತು ಲಂಚಗುಳಿತನದಿಂದಾಗಿ ವೈದ್ಯರಾಗಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ, ಈ ರೀತಿಯ ಆರೋಪವನ್ನು ಯುಕ್ರೇನ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ನವೀನ ಶೇಖರಪ್ಪಾನ ತಂದೆ ಶೇಖರಪ್ಪಾ ಜ್ಞಾನಗೌಡಾ ಇವರು ಮಾಡಿದ್ದಾರೆ.