ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಇಮ್ರಾನ್ ಖಾನ್ ಪಾಕಿಸ್ತಾನಕ್ಕಾಗಿ ಹೆಚ್ಚು ಅಪಾಯಕಾರಿ ! – ಪಾಕಿಸ್ತಾನದ ರಕ್ಷಣಾ ಸಚಿವ

ಇಮ್ರಾನ್ ಖಾನ್ ಪ್ರಸ್ತುತ ನಮ್ಮಲ್ಲಿ ಇದ್ದಾರೆ ಮತ್ತು ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿ; ಆದರೆ ಜನರಿಗೆ ಇದು ಕಾಣುತ್ತಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ್ ಆಸೀಫ್ ಇವರು ಪಾಕಿಸ್ತಾನದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು

ಇಮ್ರಾನ ಖಾನರ ನಿವಾಸದಲ್ಲಿ 30 ರಿಂದ 40 ಭಯೋತ್ಪಾದಕರಿಗೆ ಆಶ್ರಯ !

*ಪೊಲೀಸರು ಇಮ್ರಾನ ಖಾನರ ನಿವಾಸವನ್ನು ಸುತ್ತುವರಿದರು !
*24 ಗಂಟೆಯೊಳಗಾಗಿ ಭಯೋತ್ಪಾದಕರನ್ನು ಪೊಲೀಸರ ವಶಕ್ಕೆ ಒಪ್ಪಿಸುವಂತೆ ಎಚ್ಚರಿಕೆ

ಇಮ್ರಾನ ಖಾನರ ಪಕ್ಷವನ್ನು ನಿರ್ಬಂಧಿಸುವ ವಿಚಾರದಲ್ಲಿ ಪಾಕಿಸ್ತಾನದ ಸರಕಾರ !

ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫರ ಸರಕಾರವು ಮಾಜಿ ಪ್ರಧಾನಿ ಇಮ್ರಾನ ಖಾನರ ‘ಪಾಕಿಸ್ತಾನ ತಹರೀಕ-ಎ-ಇಂಸಾಫ ಪಾರ್ಟಿ’ಯ ಮೇಲೆ ನಿರ್ಬಂಧ ಹೇರುವ ವಿಚಾರದಲ್ಲಿದೆ.

ಇಮ್ರಾನ್ ಖಾನ್ ಮನೆಯಿಂದ ಹೊರಬರುತ್ತಲೇ ಪ್ರವೇಶದ್ವಾರ ಮುರಿದು ಮನೆಗೆ ನುಗ್ಗಿದ ಪೊಲೀಸರು !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲಿನ ಮೊಕ್ಕದಮೆಯ ವಿಚಾರಣೆಯಗಾಗಿ ಇಸ್ಲಾಮಾಬಾದದ ನ್ಯಾಯಾಲಯಕ್ಕೆ ಹೋಗುತ್ತಿರುವಾಗ ಅವರನ್ನು ಟೋಲ್ ನಾಕಾದ ಹತ್ತಿರ ತಡೆಯಲಾಯಿತು.

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಇದುವರೆಗೂ ಬಂಧಿಸಲಾಗಿಲ್ಲ !

ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ

ಪಾಕಿಸ್ತಾನವು ಅಪಘಾನಿಸ್ತಾನದ ಮೇಲೆ ಆಕ್ರಮಣ ಮಾಡುವ ತಪ್ಪು ಮಾಡಬಾರದು !

ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು.

ಇಮ್ರಾನ ಖಾನ ಅವರ ಪಕ್ಷದ ಎಲ್ಲಾ ಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಲಿದ್ದಾರೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ‘ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್’ ಪಕ್ಷದ ಎಲ್ಲಾ ಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಲಿದ್ದಾರೆಂಬ ವಾರ್ತೆಯನ್ನು ಪಾಕಿಸ್ತಾನದ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವಾರ್ತಾಪತ್ರಿಕೆಯು ವರದಿ ಮಾಡಿದೆ.

‘ಭಾಜಪ ಸರಕಾರವು ಹೆಚ್ಚು ರಾಷ್ಟ್ರವಾದಿಯಾಗಿರುವುದರಿಂದ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವುದು ಸಾಧ್ಯವಿಲ್ಲ !’ – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನ

ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಆದರೆ ಭಾರತದಲ್ಲಿ ಭಾಜಪವು ಅಧಿಕಾರದಲ್ಲಿರುವ ವರೆಗೂ ಹೀಗೆ ಆಗುವುದು ಸಾಧ್ಯವೇ ಇಲ್ಲ. ಭಾಜಪವು ಹೆಚ್ಚು ರಾಷ್ಟ್ರವಾದಿಯಾಗಿದೆ, ಎಂಬ ಅಭಿಪ್ರಾಯವನ್ನು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ಜೀವನಧಾರಿತ ಪುಸ್ತಕದ ಪ್ರಕಾಶನದ ಸಾರ್ವಜನಿಕ ಕಾರ್ಯಕ್ರಮ ರದ್ದು !

ಹಿಂದೂ ಜನಜಾಗೃತಿ ಸಮಿತಿಯ ಹಾಗೂ ಶ್ರೀ ರಾಮಸೇನೆ ವಿರೋಧಿಸಿದ ನಂತರ ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರಕಾರ

ಪಾಕಿಸ್ತಾನದ ಚುನಾವಣೆ ಆಯೋಗದಿಂದ ಇಮ್ರಾನ ಖಾನರಿಗೆ ಐದು ವರ್ಷಕ್ಕಾಗಿ ಚುನಾವಣೆಗೆ ಸ್ಪರ್ಧಿಸಲು ನಿಷೇಧ

ಖಾನ ಇವರು ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲಿದ್ದಾರೆಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಚುನಾವಣೆ ಆಯೋಗದಿಂದ ಈ ರೀತಿಯ ನಿಷೇಧ ಹೇರಲು ಸಾಧ್ಯವಿಲ್ಲ , ಎಂದು ಅವರ ಅಭಿಪ್ರಾಯವಾಗಿದೆ