ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ಜೀವನಧಾರಿತ ಪುಸ್ತಕದ ಪ್ರಕಾಶನದ ಸಾರ್ವಜನಿಕ ಕಾರ್ಯಕ್ರಮ ರದ್ದು !

  1. ಹಿಂದುತ್ವನಿಷ್ಠರ ವಿರೋಧದ ಪರಿಣಾಮ

  2. ವಿರೋಧದ ನಂತರ ಲೇಖಕರ ಮನೆಯಲ್ಲಿ ಪ್ರಕಾಶನ ಮಾಡಲಾಯಿತು !

  3. ಹಿಂದೂ ಜನ ಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯ ಮನವಿಯ ನಂತರ ಸರಕಾರದ ನಿರ್ಣಯ

ಬಲಬದಿಯಿಂದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಮಂಜುನಾಥ್ ಇವರಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು

ಬೆಂಗಳೂರು – ಹಿಂದುತ್ವನಿಷ್ಠರು ಮಾಡಿದ ವಿರೋಧದ ನಂತರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಇವರ ಜೀವನಾಧಾರಿತ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಕರ್ನಾಟಕದಲ್ಲಿ ಭಾಜಪ ಸರಕಾರದಿಂದ ರದ್ದುಪಡಿಸಲಾಗಿದೆ. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಲೇಖಕರ ಮನೆಯಲ್ಲಿ ಕೆಲವು ಜನರ ಉಪಸ್ಥಿತಿಯಲ್ಲಿ ಮಾಡಲಾಯಿತು.

‘ಪ್ರಮಥ ಪ್ರಕಾಶನ’ ರ ವತಿಯಿಂದ ಅಕ್ಟೋಬರ್ ೨೭, ೨೦೨೨ ರಂದು ಸಂಜೆ ೫.೩೦ ಗೆ ಇಲ್ಲಿಯ ಮಲ್ಲತಳ್ಳಿ ಕಲಾಗ್ರಾಮದಲ್ಲಿ ಇಮ್ರಾನ ಖಾನ ಇವರ ಜೀವನಾಧಾರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಧಾಕರ ಎಂ. ಬಿ. ಎಂಬ ಲೇಖಕರು ಈ ಪುಸ್ತಕವನ್ನು ಬರೆದಿದ್ದಾರೆ ಅದರ ಪ್ರಕಾಶನ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ. ನಾಗಮೋಹನ ದಾಸ ಇವರಿಂದ ಮಾಡಲಾಗುವುದಿತ್ತು. ಇದರ ಮಾಹಿತಿ ದೊರೆಯುತ್ತಲೇ ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಸುನಿಲ ಕುಮಾರ ಹಾಗೂ ಪೊಲೀಸ್ ಅಧಿಕಾರಿ ಮಂಜುನಾಥ ಇವರಿಗೆ ಮನವಿ ನೀಡಿ ಈ ಕಾರ್ಯಕ್ರಮ ರದ್ದುಗೊಳಿಸಲು ಒತ್ತಾಯಿಸಲಾಯಿತು. ಈ ಸಮಯದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ಎಂ.ಎಲ. ಶಿವಕುಮಾರ, ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಮುಂತಾದವರು ಉಪಸ್ಥಿತರಿದ್ದರು.

ಶತ್ರುರಾಷ್ಟ್ರದ ಪ್ರಧಾನಿಯ ವೈಭವೀಕರಣ, ಇದು ದೇಶದ್ರೋಹಿ ಕೃತ್ಯವಾಗಿದೆ ! – ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ

ಈ ಪ್ರಕರಣದ ಬಗ್ಗೆ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, “ಪಾಕಿಸ್ತಾನ ಭಾರತದಲ್ಲಿನ ಭಯೋತ್ಪಾದಕರಿಗೆ ಸಹಾಯ ಮಾಡುತ್ತದೆ. ಇಮ್ರಾನ ಖಾನ ಸ್ವತಃ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಮ್ರಾನ ಖಾನ ಪ್ರಧಾನಿ ಆಗಿದ್ದಾಗ ಕಶ್ಮೀರದಲ್ಲಿನ ಪುಲ್ವಾಮದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ೪೦ ಭಾರತೀಯ ಶೂರ ಸೈನಿಕರು ವೀರ ಮರಣವನ್ನಪ್ಪಿದ್ದರು. ಶತ್ರು ರಾಷ್ಟ್ರದ ಪ್ರಧಾನಿಯ ವೈಭವೀಕರಣ ಇದು ರಾಷ್ಟ್ರದ್ರೋಹಿ ಕೃತ್ಯವಾಗಿದೆ. ಆದ್ದರಿಂದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಈ ಪುಸ್ತಕದ ಮೇಲೆ ನಿಷೇಧ ಹೇರಬೇಕು ಮತ್ತು ಈ ಕಾರ್ಯಕ್ರಮದ ಆಯೋಜಕರ ಮೇಲೆ ದೇಶದ್ರೋಹದ ದೂರು ದಾಖಿಲಿಸಬೇಕು ಎಂದು ಒತ್ತಾಯಿಸಿ ನಾವು ರಾಜ್ಯ ಸರಕಾರದ ಹತ್ತಿರ ಹೋಗಿದ್ದೆವು. ಇದಕ್ಕೆ ಸ್ಪಂದನೆ ನೀಡಿ ರಾಜ್ಯ ಸರಕಾರದಿಂದ ಈ ಕಾರ್ಯಕ್ರಮ ರದ್ದುಗೊಳಿಸಲಾಯಿತು.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಕಾರ್ಯಕ್ರಮ ಆಯೋಜಿಸುವವರನ್ನು ಸರಕಾರ ದೇಶದ್ರೋಹದ ದೂರ ದಾಖಲಿಸಿ ಅವರನ್ನು ಕಾರಾಗೃಹಕೆ ಆಟ್ಟ ಬೇಕು !