ಇಸ್ಲಾಮಾಬಾದ– ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇವರನ್ನು ಮುಂಬರುವ ೫ ವರ್ಷಗಳಿಗಾಗಿ ಚುನಾವಣೆ ಸ್ಪರ್ಧಿಸಲು ನಿಷೇಧಿಸಲಾಗಿದೆ. ಅಲ್ಲಿಯ ಚುನಾವಣೆ ಆಯೋಗದಿಂದ ಒಂದು ಪ್ರಕರಣದ ಸಂದರ್ಭದಲ್ಲಿ ಈ ಆದೇಶ ನೀಡಲಾಗಿದೆ. ಖಾನ ಪ್ರಧಾನಿ ಆಗಿರುವಾಗ ಅವರು ವಿದೇಶಿ ಅಧಿಕಾರಿಗಳಿಂದ ಪಡೆದ ಉಡುಗೊರೆಗಳ ಬಗ್ಗೆ ಚುನಾವಣೆ ಆಯೋಗಕ್ಕೆ ವಸ್ತುನಿಷ್ಠವಾಗಿ ಮಾಹಿತಿ ಪೂರೈಸಿಲ್ಲ, ಎಂದು ಅವರ ಮೇಲೆ ಆರೋಪ ಮಾಡಲಾಗಿತ್ತು.
ಖಾನ ಇವರು ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲಿದ್ದಾರೆಂದು ಅವರ ನಿಕಟವರ್ತಿಗಳು ಹೇಳಿದ್ದಾರೆ. ಚುನಾವಣೆ ಆಯೋಗದಿಂದ ಈ ರೀತಿಯ ನಿಷೇಧ ಹೇರಲು ಸಾಧ್ಯವಿಲ್ಲ , ಎಂದು ಅವರ ಅಭಿಪ್ರಾಯವಾಗಿದೆ