ಇಮ್ರಾನ ಖಾನರ ಪಕ್ಷವನ್ನು ನಿರ್ಬಂಧಿಸುವ ವಿಚಾರದಲ್ಲಿ ಪಾಕಿಸ್ತಾನದ ಸರಕಾರ !

ಖಾನರ ಮನೆಯಿಂದ ಶಸ್ತ್ರಾಸ್ತ್ರ ವಶಕ್ಕೆ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫರ ಸರಕಾರವು ಮಾಜಿ ಪ್ರಧಾನಿ ಇಮ್ರಾನ ಖಾನರ ‘ಪಾಕಿಸ್ತಾನ ತಹರೀಕ-ಎ-ಇಂಸಾಫ ಪಾರ್ಟಿ’ಯ ಮೇಲೆ ನಿರ್ಬಂಧ ಹೇರುವ ವಿಚಾರದಲ್ಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾಉಲ್ಲಾಹರವರು ಮಾತನಾಡುತ್ತ, ಇಮ್ರಾನ ಖಾನರ ಪಕ್ಷದ ಮೇಲೆ ನಿರ್ಬಂಧ ಹೇರುವ ಪ್ರಕ್ರಿಯೆಯನ್ನು ಆರಂಭಿಸುವ ಬಗ್ಗೆ ತಜ್ಞರೊಂದಿಗೆ ಚರ್ಚಿಸುವ ಬಗ್ಗೆ ಸರಕಾರ ವಿಚಾರ ಮಾಡುತ್ತಿದೆ. ಇಮ್ರಾನ ಖಾನರ ಮನೆಯಲ್ಲಿ ಭಯೋತ್ಪಾದಕರು ಅಡಗಿದ್ದರು. ಅಲ್ಲಿ ಶಸ್ತ್ರಾಸ್ತ್ರಗಳು, ಪೆಟ್ರೋಲ ಬಾಂಬ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾದೆ. ಅವರ ಪಕ್ಷದ ಮೇಲೆ ನಿರ್ಬಂಧ ಹೇರಲು ಸಾಕಷ್ಟು ಪುರಾವೆಗಳಿವೆ. ಯಾವುದೇ ಪಕ್ಷದ ಮೇಲೆ ನಿರ್ಬಂಧ ಹೇರುವುದು ಒಂದು ನ್ಯಾಯಾಲಯದ ಪ್ರಕ್ರಿಯೆಯಾಗಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು, ಎಂದು ಹೇಳಿದ್ದಾರೆ.