ಇಮ್ರಾನ್ ಖಾನ್ ಮನೆಯಿಂದ ಹೊರಬರುತ್ತಲೇ ಪ್ರವೇಶದ್ವಾರ ಮುರಿದು ಮನೆಗೆ ನುಗ್ಗಿದ ಪೊಲೀಸರು !

ಇಸ್ಲಾಮಬಾದ್ ನ್ಯಾಯಾಲಯದಲ್ಲಿ ಹಾಜರಾಗಲು ಇಮ್ರಾನ್ ಖಾನ್ ಪ್ರಯಾಣ

ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರಲ್ಲಿ ಘರ್ಷಣೆ

ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲಿನ ಮೊಕ್ಕದಮೆಯ ವಿಚಾರಣೆಯಗಾಗಿ ಇಸ್ಲಾಮಾಬಾದದ ನ್ಯಾಯಾಲಯಕ್ಕೆ ಹೋಗುತ್ತಿರುವಾಗ ಅವರನ್ನು ಟೋಲ್ ನಾಕಾದ ಹತ್ತಿರ ತಡೆಯಲಾಯಿತು. ಇಮ್ರಾನ್ ಖಾನ್ ಲಾಹೋರದ ಮನೆಯಿಂದ ಹೊರ ಬರುತ್ತಲೇ ಪೊಲೀಸರು ಮನೆಯ ಪ್ರವೇಶ ದ್ವಾರ ಬುಲ್ಡೋಜರ್ ನಿಂದ ಕೆಡವಿ ಒಳಗೆ ಪ್ರವೇಶ ಮಾಡಿದರು. ಆ ಸಮಯದಲ್ಲಿ ಪೊಲೀಸರ ಮತ್ತು ಇಮ್ರಾನ್ ಅವರ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ನಡೆಯಿತು. ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದರು. ಈ ಘಟನೆಯ ಬಗ್ಗೆ ಇಮ್ರಾನ್ ಖಾನ್ ಇವರು ಒಂದು ವಿಡಿಯೋ ಟ್ವೀಟ್ ಮಾಡಿ, ಪೊಲೀಸರು ನನ್ನ ಅನುಪಸ್ಥಿತಿಯಲ್ಲಿ ನನ್ನ ಮನೆಗೆ ತಲುಪಿದ್ದಾರೆ. ನನ್ನ ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದಳು. ಈ ಕ್ರಮ ಯಾವ ಕಾನೂನಿನ ಅಡಿಯಲ್ಲಿ ಮಾಡಿದ್ದಾರೆ ? ಇದೆಲ್ಲಾ ನವಾಜ್ ಶರೀಫ್ ಇವರ ಸಂಚಾಗಿದೆ. ಎಂದು ಆರೋಪಿಸಿದ್ದಾರೆ.

೧. ಇಮ್ರಾನ್ ಖಾನ್ ಇಸ್ಲಾಮಾಬಾದಗೆ ಹೋಗುವಾಗ ಕಲ್ಲರ ಕಹರಹತ್ತಿರ ಅವರ ಪಡೆಯ ೩ ವಾಹನಗಳು ಒಂದರ ಮೇಲೊಂದು ಅಪ್ಪಳಿಸಿದವು. ವೇಗ ಹೆಚ್ಚು ಇರುವುದರಿಂದ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಅಪಘಾತದಲ್ಲಿ ಅನೇಕ ಜನರು ಗಾಯಗೊಂಡಿರುವ ಸಮಾಚಾರವಿದೆ. ಅಪಘಾತದ ನಂತರ ಖಾನ್ ಇವರು, ನನ್ನನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ. ಅವರು ನನ್ನನ್ನು ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಲ್ಲಾ ‘ಲಂಡನ ಯೋಜನೆ’ಯ ಭಾಗವಾಗಿದೆ. ನನ್ನನ್ನು ಜೈಲಿಗೆ ಹಾಕಬೇಕು, ಎಂದು ನವಾಜ್ ಶರೀಫ್ ಇವರು ಒತ್ತಾಯಿಸಿದ್ದಾರೆ. ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು, ಎಂದು ಅವರಿಗೆ ಅನಿಸುತ್ತದೆ. ನನಗೆ ಕಾನೂನಿನ ಮೇಲೆ ವಿಶ್ವಾಸವಿದೆ. ಆದ್ದರಿಂದ ನಾನು ನ್ಯಾಯಾಲಯದಲ್ಲಿ ಉಪಸ್ಥಿತನಾಗುವೆ.

೨. ಹಿಂದಿನ ದಿನ ಇಮ್ರಾನ್ ಖಾನ್ ಲಾಹೋರದ ಉಚ್ಚ ನ್ಯಾಯಾಲಯದಲ್ಲಿ ಉಪಸ್ಥಿತರಾಗಿದ್ದರು. ಅಲ್ಲಿ ಅವರಿಗೆ ೯ ಪ್ರಕರಣದಲ್ಲಿ ಸಂರಕ್ಷಣಾತ್ಮಕ ಜಾಮೀನು ದೊರೆತಿದೆ. ಇಸ್ಲಾಮಾಬಾದಿನಲ್ಲಿ ನಡೆಯುತ್ತಿರುವ ೫ ಮೊಕದ್ದಮೆಗಾಗಿ ನ್ಯಾಯಾಲಯವು ಖಾನ್ ಇವರಿಗೆ ಮಾರ್ಚ್ ೨೪ ರ ವರೆಗೆ ಜಾಮೀನು ನೀಡಿದೆ.