‘ಭಾಜಪ ಸರಕಾರವು ಹೆಚ್ಚು ರಾಷ್ಟ್ರವಾದಿಯಾಗಿರುವುದರಿಂದ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವುದು ಸಾಧ್ಯವಿಲ್ಲ !’ – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಆದರೆ ಭಾರತದಲ್ಲಿ ಭಾಜಪವು ಅಧಿಕಾರದಲ್ಲಿರುವ ವರೆಗೂ ಹೀಗೆ ಆಗುವುದು ಸಾಧ್ಯವೇ ಇಲ್ಲ. ಭಾಜಪವು ಹೆಚ್ಚು ರಾಷ್ಟ್ರವಾದಿಯಾಗಿದೆ, ಎಂಬ ಅಭಿಪ್ರಾಯವನ್ನು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರು ವ್ಯಕ್ತಪಡಿಸಿದ್ದಾರೆ. ‘ದ ಟೆಲಿಗ್ರಾಫ್’ ಎಂಬ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

೧. ಇಬ್ಬರ ಸಂಬಂಧಗಳು ಸುಧಾರಿಸಿದರೆ ಅನೇಕ ಲಾಭಗಳಿವೆ; ಆದರೆ ಕಾಶ್ಮೀರವು ಇದರಲ್ಲಿನ ಮುಖ್ಯ ಅಡಚಣೆಯಾಗಿದೆ. ಕಾಶ್ಮೀರದ ಅಂಶವನ್ನು ಬಗೆಹರಿಸಲು ಯೋಗ್ಯವಾದ ಯೋಜನೆ ಬೇಕು.

೨. ನನಗೆ ಸಂಬಂಧ ಸುಧಾರಿಸುವುದು ಸಾಧ್ಯವಿದೆ ಎಂದು ಅನಿಸುತ್ತದೆ; ಆದರೆ ಭಾಜಪ ಸರಕಾರವು ಬಹಳ ಮೂಲಭೂತವಾದಿಯಾಗಿದೆ. ಅನೇಕ ಅಂಶಗಳ ಮೇಲೆ ಅದರ ರಾಷ್ಟ್ರವಾದಿ ಭೂಮಿಕೆಯಿದೆ. ಅವರು ಯಾವಾಗಲೂ ರಾಷ್ಟ್ರೀಯ ಭಾವನೆಯನ್ನು ಹೆಚ್ಚಿಸುತ್ತಿರುವುದರಿಂದ ಯಾವುದೇ ಒಪ್ಪಂದ ಆಗದಿರುವುದು ನಿರಾಶಾದಾಯಕವಾಗಿದೆ. ಈ ರಾಷ್ಟ್ರವಾದದ ರಾಕ್ಷಸನು ಬಾಟಲಿಯಿಂದ ಹೊರಗೆ ಬಂದರೆ ಪುನಃ ಅವನನ್ನು ಬಾಟಲಿಗೆ ಹಾಕುವುದು ಕಷ್ಟವಾಗಿದೆ.

ಸಂಪಾದಕೀಯ ನಿಲುವು

ಕಳೆದ ೭೫ ವರ್ಷಗಳಲ್ಲಿ ಭಾರತದಲ್ಲಿ ಇತರ ಪಕ್ಷಗಳ ಸರಕಾರವಿತ್ತು, ಹೀಗಿರುವಾಗ ಪಾಕಿಸ್ತಾನವು ಆಗಲೇ ಭಾರತದೊಂದಿಗಿರುವ ತನ್ನ ಸಂಬಂಧವನ್ನು ಏಕೆ ಸುಧಾರಿಸಿಕೊಳ್ಳಲಿಲ್ಲ ? ‘ಭಾರತದೊಂದಿಗೆ ೪ ಯುದ್ಧಗಳನ್ನು ಮಾಡುವುದು, ಜಿಹಾದಿ ಭಯೋತ್ಪಾದನೆಯನ್ನು ನಿರ್ಮಾಣ ಮಾಡುವುದು, ಭಾರತದ ಬಗ್ಗೆ ದ್ವೇಷ ಹರಡುವ ಮತ್ತು ಇನ್ನೊಂದು ಕಡೆಯಲ್ಲಿ ಸಂಬಂಧವನ್ನು ಸುಧಾರಿಸುವ ಗೊಂದಲವನ್ನು ನಿರ್ಮಿಸುವುದೇ ಪಾಕಿಸ್ತಾನದ ನೀತಿಯಾಗಿದ್ದರಿಂದ ಅದರೊಂದಿಗೆ ಸಂಬಂಧವನ್ನು ಸುಧಾರಿಸಲು ಸಾಧ್ಯವಿಲ್ಲ’ ಎಂದು ಭಾರತವು ಖಾನರವರಿಗೆ ಹೇಳಬೇಕು !