ಪಾಕಿಸ್ತಾನವು ಅಪಘಾನಿಸ್ತಾನದ ಮೇಲೆ ಆಕ್ರಮಣ ಮಾಡುವ ತಪ್ಪು ಮಾಡಬಾರದು !

ಇಮ್ರಾನ್ ಖಾನ್ ಇವರಿಂದ ಪಾಕಿಸ್ತಾನ ಸರಕಾರಕ್ಕೆ ಸಲಹೆ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು. ಆದ್ದರಿಂದ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವ ತಪ್ಪು ಪಾಕಿಸ್ತಾನ ಮಾಡಬಾರದು, ಎಂದು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರು ಪಾಕಿಸ್ತಾನ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಗೃಹ ಸಚಿವ ಸನಾಉಲ್ಲಾಹ ಇವರು, ಕಳೆದ ವಾರದಲ್ಲಿ ತೇಹರಿಕ-ಎ-ತಾಲಿಬಾನ್ ಪಾಕಿಸ್ತಾನ ಈ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿ ಆಕ್ರಮಣ ಮಾಡುತ್ತಿದೆ. ಅವರಿಗೆ ಅಪಘಾನಿಸ್ತಾನದಲ್ಲಿ ಆಶ್ರಯ ಸಿಗುತ್ತಿದೆ. ಈ ಆಕ್ರಮಣಗಳನ್ನು ತಕ್ಷಣ ನಿಲ್ಲಿಸದಿದ್ದರೆ, ನಮ್ಮ ಸೈನ್ಯ ಅಪಘಾನಿಸ್ತಾನಕ್ಕೆ ನುಗ್ಗಿ ಆಕ್ರಮಣ ನಡೆಸುವುದು, ಎಂದು ಹೇಳಿದ್ದರು.

ಇಮ್ರಾನ್ ಖಾನ್ ಮಾತು ಮುಂದುವರಿಸಿ, ಅಪಘಾನಿಸ್ತಾನ ಇದು ನಮ್ಮ ನೆರೆಯ ದೇಶವಾಗಿದೆ. ಅದರ ಜೊತೆಗೆ ನಮ್ಮ ಸಂಬಂಧಗಳು ಚೆನ್ನಾಗಿರಬೇಕು. ಸರಕಾರವು ಜನರೆದುರು ಸುಳ್ಳು ಹೇಳುವುದನ್ನು ನಿಲ್ಲಿಸಿ ಸತ್ಯ ಹೇಳಬೇಕು. ಸ್ವಲ್ಪ ಯೋಚನೆ ಮಾಡಿರಿ, ಅಪಘಾನಿಸ್ತಾನವು ಏನಾದರು ಸಹಾಯ ಮಾಡುವುದು ನಿಲ್ಲಿಸಿದರೆ ಆಗ ಏನು ಆಗುವುದು ? ಸರಕಾರ ಅಪಘಾನಿಸ್ತಾನಕ್ಕೆ ಏಕೆ ಬೆದರಿಕೆ ಹಾಕುತ್ತಿದೆ ? ಅವರ ಜೊತೆ ಏಕೆ ಚರ್ಚಿಸುವುದಿಲ್ಲ ? `ಖೈಬರ್ ಪಖ್ಟುನಕ್ವಾದಲ್ಲಿ ನಮ್ಮದೇ ಸರಕಾರ ಇರುವುದು’, ಎಂದು ಸ್ಥಳೀಯ ಜನರು ಹೇಳುತ್ತಾರೆ. ಪೊಲೀಸ್ ಭಯೋತ್ಪಾದಕರ ವಿರುದ್ಧ ಹೋರಾಡಲು ಸಾಧ್ಯವೇ ? ಅವರ ಬಳಿ ಶಸ್ತ್ರಾಸ್ತ್ರ ಕೂಡ ಇಲ್ಲ. ಕಳೆದ ವರ್ಷ ಆಗಸ್ಟ್ ೧೫ ಕ್ಕೆ ಅಮೇರಿಕ ಅಪಘಾನಿಸ್ತಾನವನ್ನು ತೊರೆಯಿತು. ಅದರ ನಂತರ ಅಪಘಾನಿಸ್ತಾನದಲ್ಲಿ ನಮ್ಮ (ಪಾಕಿಸ್ತಾನದ) ಬೇರು ಗಟ್ಟಿಗೊಳಿಸಲು ಸುವರ್ಣ ಅವಕಾಶ ಇತ್ತು; ಆದರೆ ಅದನ್ನು ನಾವು ಕಳೆದುಕೊಂಡೆವು. ಇಂದು ನಮ್ಮ ದೇಶದಲ್ಲಿ ಸರಾಸರಿ ೪೦ ಸಾವಿರ ತಾಲಿಬಾನಿ ಭಯೋತ್ಪಾದಕರಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಮ್ರಾನ್ ಖಾನ್ ಅವರು ಪಾಕಿಸ್ತಾನ ಸರಕಾರಕ್ಕೆ ಮತ್ತು ಅದರ ಸೈನ್ಯಕ್ಕೆ `ಭಾರತದಲ್ಲಿ ಜಿಹಾದಿ ಭಯೋತ್ಪಾದನೆಯ ಚಟುವಟಿಕೆ ನಡೆಸಬಾರದೆಂದು’, ಏಕೆ ಹೇಳುವುದಿಲ್ಲ ? ಸ್ವತಃ ಪ್ರಧಾನಮಂತ್ರಿ ಆಗಿದ್ದಾಗ ಅವರು ಈ ಚಟುವಟಿಕೆ ಏಕೆ ನಿಲ್ಲಿಸಲಿಲ್ಲ ? ಈಗ ಅಪಘಾನಿಸ್ತಾನದಲ್ಲಿನ ತಾಲಿಬಾನಿ ಭಯತ್ಪಾದಕರು ಪಾಕಿಸ್ತಾನಕ್ಕೆ `ಪ್ರತ್ಯುತ್ತರ’ ನೀಡುತ್ತಿದ್ದರಿಂದ ಇಮ್ರಾನ್ ಖಾನ್ ಇವರಿಗೆ ಭಯ ಅನಿಸುತ್ತಿದೆ ಮತ್ತು ಆದ್ದರಿಂದ ಅವರು ಈ ರೀತಿಯ ಸಲಹೆ ನೀಡುತ್ತಿದ್ದಾರೆ, ಇದು ಗಮನಕ್ಕೆ ಬರುತ್ತಿದೆ !