ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಇದುವರೆಗೂ ಬಂಧಿಸಲಾಗಿಲ್ಲ !

ಇಮ್ರಾನ್ ಖಾನರ ಬೆಂಬಲಿಗರಿಂದ ಅವರ ಮನೆಯ ಹೊರಗೆ ಹಿಂಸಾಚಾರ

ಲಾಹೋರ/ಇಸ್ಲಾಮಾಬಾದ (ಪಾಕಿಸ್ತಾನ) – ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ; ಆದರೆ ಅವರ ಬೆಂಬಲಿಗರಿಂದ ನಡೆಯುತ್ತಿರುವ ಹಿಂಸಾಚಾರದಿಂದ ಪೊಲೀಸರಿಗೆ ಇಮ್ರಾನರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇಮ್ರಾನ್ ಖಾನರ ರಾಜಕೀಯ ಪಕ್ಷ ಪಾಕಿಸ್ತಾನ- ತೆಹರಿಕ್-ಎ- ಇನ್ಸಾಫ (‘ಪಿ.ಟಿ.ಐ’ನ) ಕಾರ್ಯಕರ್ತರು ಹಿಂಸಾತ್ಮಕ ಆಂದೋಲನವನ್ನು ನಡೆಸುತ್ತಿದ್ದಾರೆ. ಅವರು ಪೊಲೀಸರ ಮೇಲೆ ಕಲ್ಲೆಸೆತ ನಡೆಸಿದರು ಹಾಗೆಯೇ ಪೆಟ್ರೋಲ್ ಬಾಂಬ್ ಕೂಡ ಎಸೆದರು. ಪೊಲೀಸರು ಅಶ್ರುವಾಯು ಮತ್ತು ನೀರನ್ನು ಹರಿಸಿ ಅವರನ್ನು ನಿಯಂತ್ರಿಸುತ್ತಿದ್ದಾರೆ. ಇದಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಲಿಕಾಪ್ಟರ ಮತ್ತು ಡ್ರೋನ್ ಗಳನ್ನು ನಿಯೋಜಿಸಲಾಗಿದೆ.

ಸರಕಾರಿ ಖಜಾನೆಯಿಂದ (ತೋಶಾಖಾನಾದಿಂದ) ಬೆಲೆಬಾಳುವ ಉಡುಗೊರೆಯನ್ನು ಕಡಿಮೆ ಬೆಲೆಗೆ ಖರೀದಿಸಿ ಅವುಗಳನ್ನು ಕೋಟಿಗಟ್ಟಲೆ ರೂಪಾಯಿಗಳಿಗೆ ಮಾರಾಟ ಮಾಡಿರುವ ಆರೋಪ ಇಮ್ರಾನ ಖಾನರ ಮೇಲಿದೆ. ಇಸ್ಲಾಮಾಬಾದ ಉಚ್ಚ ನ್ಯಾಯಾಲಯವು ಅವರಿಗೆ ಮಾರ್ಚ 29 ವರೆಗೆ ಬಂಧಿಸುವಂತೆ ಆದೇಶ ನೀಡಿತ್ತು. ಇಮ್ರಾನ ಮಾರ್ಚ 18 ವರೆಗೆ ಕಸ್ಟಡಿ ಜಾಮೀನು ಪಡೆದಿದ್ದರು. ಆದರೆ ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.

ನನ್ನನ್ನು ಬಂಧಿಸುವ `ಲಂಡನ ಯೋಜನೆ’ ! – ಇಮ್ರಾನ ಖಾನರ ಆರೋಪ

ಇಮ್ರಾನ ಖಾನರು ಮಾರ್ಚ 15 ರ ಬೆಳಿಗ್ಗೆ ಒಂದು ವಿಡಿಯೋ ಸಂದೇಶ ಪ್ರಸಾರ ಮಾಡಿದರು. ಅದರಲ್ಲಿ ಅವರು, ನನ್ನ ಬಂಧನವು `ಲಂಡನ್ ಯೋಜನೆ’ ಯ ಒಂದು ಭಾಗವಾಗಿದೆ. ನನಗೆ ಜೈಲಿಗೆ ಹಾಕುವುದು ಮತ್ತು ನನ್ನ ಪಿ.ಟಿ.ಐ. ಪಕ್ಷವನ್ನು ನಷ್ಟಗೊಳಿಸುವುದು ನನ್ನ ವಿರೋಧಿಗಳ ಮುಖ್ಯ ಉದ್ದೇಶವಾಗಿದೆ. ಅವರಿಗೆ ನವಾಝ ಶರೀಫರ ಎಲ್ಲ ಖಟ್ಲೆಗಳನ್ನು ಮುಕ್ತಾಯಗೊಳಿಸಬೇಕಾಗಿದೆ. ನನ್ನನ್ನು ಕಾರಾಗೃಹಕ್ಕೆ ಅಟ್ಟುವ ಹಾಗೂ ಕಾಯಿದೆಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ಇಸ್ಲಾಮಾಬಾದನಲ್ಲಿ ನನ್ನ ಮೇಲೆ ಎರಡು ಬಾರಿ ಆಕ್ರಮಣವಾಯಿತು. ನನ್ನ ಸುರಕ್ಷತೆಯ ಕಾರಣದಿಂದ ನಾನು ಹಾಜರಾಗುತ್ತಿಲ್ಲ ಎನ್ನುವುದು ನ್ಯಾಯಾಲಯಕ್ಕೆ ತಿಳಿದಿದೆ. ನನಗೆ ಯಾವುದೇ ಪರಿಸ್ಥಿತಿಯಲ್ಲಿ ಬಂಧಿಸಲು ಸಾಧ್ಯವಾಗಬೇಕೆಂದು ಪ್ರಯತ್ನಿಸಲಾಗುತ್ತಿದೆಯೆಂದು ಹೇಳಿದ್ದಾರೆ ಎಂದು ಹೇಳಿದರು.