ಇಮ್ರಾನ ಖಾನರ ನಿವಾಸದಲ್ಲಿ 30 ರಿಂದ 40 ಭಯೋತ್ಪಾದಕರಿಗೆ ಆಶ್ರಯ !

ಪೊಲೀಸರು ಇಮ್ರಾನ ಖಾನರ ನಿವಾಸವನ್ನು ಸುತ್ತುವರಿದರು !

24 ಗಂಟೆಯೊಳಗಾಗಿ ಭಯೋತ್ಪಾದಕರನ್ನು ಪೊಲೀಸರ ವಶಕ್ಕೆ ಒಪ್ಪಿಸುವಂತೆ ಎಚ್ಚರಿಕೆ

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಮತ್ತು `ಪಾಕಿಸ್ತಾನ ತಹರೀಕ-ಎ- ಇನ್ಸಾಫ್’ (ಪಿ.ಟಿ.ಐ) ಪಕ್ಷದ ಮುಖಂಡ ಇಮ್ರಾನ್ ಖಾನನ ನಿವಾಸವನ್ನು ಪೊಲೀಸರು ಸುತ್ತುವರಿದಿದ್ದಾರೆ. ಅವರ ನಿವಾಸದಲ್ಲಿ 30 ರಿಂದ 40 ಜಿಹಾದಿ ಭಯೋತ್ಪಾದಕರು ಆಶ್ರಯವನ್ನು ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ಇಮ್ರಾನ್ ಖಾನರಿಗೆ ಭಯೋತ್ಪಾದಕರನ್ನು ಪೊಲೀಸರ ವಶಕ್ಕೆ ಒಪ್ಪಿಸುವಂತೆ 24 ಗಂಟೆಗಳ ಅವಧಿಯನ್ನು ನೀಡಿದ್ದಾರೆ.

ಪಂಜಾಬ ಪ್ರಾಂತ್ಯದ ಮಾಹಿತಿ ಮತ್ತು ಪ್ರಸಾರ ಸಚಿವ ಆಮಿರ ಮೀರ ಇವರು ಸುದ್ದಿ ಗೋಷ್ಠಿಯಲ್ಲಿ, ಇಮ್ರಾನ್ ಖಾನರ ಪಕ್ಷವು ಈ ಭಯೋತ್ಪಾದಕರನ್ನು ಪೊಲೀಸರಿಗೆ ಒಪ್ಪಿಸಬೇಕು. ಇಲ್ಲವಾದರೆ ಕಾನೂನಿನ ಕ್ರಮವನ್ನು ಕೈಗೊಳ್ಳಲಾಗುವುದು. ಖಾನರ ಪಿ.ಟಿ.ಐ. ಪಕ್ಷ ಈಗ ಭಯೋತ್ಪಾದಕರಂತೆ ನಡೆದುಕೊಳ್ಳುತ್ತಿದೆ. ಆ ಪಕ್ಷದವರು ಇಮ್ರಾನ್ ಖಾನರ ಬಂಧನದ ಮೊದಲೇ ಸೇನಾ ಮುಖ್ಯ ಕಾರ್ಯಾಲಯದ ಮೇಲೆ ಆಕ್ರಮಣ ನಡೆಸಲು ಸಂಚನ್ನು ರಚಿಸಿದ್ದರು ಎಂದು ತಿಳಿಸಿದ್ದಾರೆ.