ಇಸ್ಲಾಮಾಬಾದ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಅವರ ‘ಪಾಕಿಸ್ತಾನ್ ತೆಹರೀಕ್-ಎ-ಇನ್ಸಾಫ್’ ಪಕ್ಷದ ಎಲ್ಲಾ ಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಲಿದ್ದಾರೆಂಬ ವಾರ್ತೆಯನ್ನು ಪಾಕಿಸ್ತಾನದ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವಾರ್ತಾಪತ್ರಿಕೆಯು ವರದಿ ಮಾಡಿದೆ. ರಾವಲಪಿಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಖಾನ ಈ ಘೋಷಣೆ ಮಾಡಿದರು. ಈ ವೇಳೆ ಖಾನ ಅವರು ‘ಪಾಕಿಸ್ತಾನಕ್ಕೆ ಹಾನಿ ಮಾಡುವ ಬದಲು ಈ ಭ್ರಷ್ಟ ವ್ಯವಸ್ಥೆಯನ್ನು ತೊರೆಯುವುದೇ ಸೂಕ್ತ’ ಎಂದು ಹೇಳಿದ್ದಾರೆ. ದೇಶದಲ್ಲಿ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಆಡಳಿತಾರೂಢರನ್ನು ಒತ್ತಾಯಿಸಲು ಖಾನ ಅವರಿಂದ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
PTI Chairman Imran Khan at a public gathering in Pakistan’s Rawalpindi announces that his party has decided to resign from all the Assemblies: Pakistan media
(file photo) pic.twitter.com/Wgot9JWsV3
— ANI (@ANI) November 26, 2022