ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಇಮ್ರಾನ್ ಖಾನ್ ಪಾಕಿಸ್ತಾನಕ್ಕಾಗಿ ಹೆಚ್ಚು ಅಪಾಯಕಾರಿ ! – ಪಾಕಿಸ್ತಾನದ ರಕ್ಷಣಾ ಸಚಿವ

ಇಮ್ರಾನ್ ಖಾನ್

ಇಸ್ಲಾಮಾಬಾದ (ಪಾಕಿಸ್ತಾನ) – ನೀವು ನಿಮ್ಮ ವಿದೇಶಿ ಶತ್ರುವನ್ನು ಗುರುತಿಸುತ್ತೀರಾ. ಪಾಕಿಸ್ತಾನದಲ್ಲಿನ ಜನರು ಇನ್ನೂ ಕೂಡ ಇಲ್ಲಿಯೇ ಹುಟ್ಟಿರುವ ಶತ್ರುವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಭಾರತ ಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ. ಇಮ್ರಾನ್ ಖಾನ್ ಪ್ರಸ್ತುತ ನಮ್ಮಲ್ಲಿ ಇದ್ದಾರೆ ಮತ್ತು ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿ; ಆದರೆ ಜನರಿಗೆ ಇದು ಕಾಣುತ್ತಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ್ ಆಸೀಫ್ ಇವರು ಪಾಕಿಸ್ತಾನದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ‘ಯಾರು ಹೆಚ್ಚು ಅಪಾಯಕಾರಿ ? ಯಾರು ನಮ್ಮಲ್ಲಿಯೇ ಇದ್ದು ನಮ್ಮ ಎದುರಿನ ಗಡಿಯಾಚೆ ನಿಂತಿದ್ದಾನೆ ಆತ ?’, ಎಂದು ಆಸೀಫ್ ಇವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಆಸಿಫ್ ಅವರು, ”ಇಮ್ರಾನ್ ಖಾನ್ ಎಲ್ಲಕ್ಕಿಂತ ದೊಡ್ಡ ಬಂಡಾಯಕೋರ ಆಗಿದ್ದಾರೆ. ಅವರು ನಮ್ಮ ದೇಶದ ಭದ್ರತೆಗಾಗಿ ಅಪಾಯಕಾರಿಯಾಗಿದ್ದಾರೆ ಮತ್ತು ಮೇ ೯ ಇದೆ ಅದರ ದೊಡ್ಡ ಸಾಕ್ಷಿಯಾಗಿದೆ.” ಎಂದು ಹೇಳಿದರು. ಇಮ್ರಾನ್ ಖಾನ್ ಇವರಿಗೆ ಮೇ ೯ ರಂದು ಬಂಧಿಸಿದ ನಂತರ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆದಿತ್ತು.