ರಾತ್ರಿ ಜಾಗರಣೆ ಮಾಡದೇ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಬೇಕು !

‘ಕೆಲವು ಸಾಧಕರು ನಾಮಜಪ ಅಥವಾ ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ಬರೆಯಲು ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಹಾಗೆ ಮಾಡುವ ಬದಲು ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಎದ್ದು ಅಷ್ಟು ಸಮಯದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಬೇಕು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಜಾಜಿ, ಮಾವು, ಔದುಂಬರ ಮತ್ತು ಪೇರಲೆ’ ಇವುಗಳಲ್ಲಿ ಯಾವುದೇ ಮರದ ೧-೨ ಎಲೆಗಳನ್ನು ದಿನಕ್ಕೆ ೩-೪ ಬಾರಿ ಕಚ್ಚಿ ಕಚ್ಚಿ ೨ ನಿಮಿಷಗಳ ವರೆಗೆ ಬಾಯಿಯಲ್ಲಿಟ್ಟುಕೊಂಡು ಅನಂತರ ಉಗುಳಬೇಕು. ಇದರಿಂದ ಬಾಯಿಹುಣ್ಣು ಒಂದೇ ದಿನದಲ್ಲಿ ಗುಣಮುಖವಾಗುತ್ತದೆ.

ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಸ್ನಾನವನ್ನು ಮಾಡುವಾಗ ತಲೆಗೆ ಬಿಸಿ ನೀರು ಹಾಕಿಕೊಳ್ಳುವುದರಿಂದ ಕೂದಲುಗಳ ಮೂಲ(ಬೇರು)ಗಳ ಶಕ್ತಿಯು ಕಡಿಮೆಯಾಗುತ್ತದೆ. ಅದರಿಂದ ಕೂದಲು ಉದುರುತ್ತವೆ. ಕೂದಲು ಉದುರಬಾರದೆಂದು ತಲೆಗೆ ಬಿಸಿ ನೀರನ್ನು ಹಾಕದೇ ಉಗುರು ಬೆಚ್ಚ ನೀರನ್ನು ಹಾಕಿಕೊಳ್ಳಬೇಕು.

ಹಿಮ್ಮಡಿಯ ‘ಮೂಳೆಯ ಸಾಂದ್ರತೆಯನ್ನು ಅಳೆಯುವ ಪರೀಕ್ಷಣೆ (ಬೋನ್ ಮಿನರಲ್ ಡೆನಸಿಟಿ ಟೆಸ್ಟ್)’ ಫಲಿತಾಂಶದ ದೃಷ್ಟಿಯಿಂದ ನಿಷ್ಪ್ರಯೋಜಕ

ಹಿಮ್ಮಡಿಯ ಮೂಳೆಯ ಸಾಂದ್ರತೆಯನ್ನು ಅಳೆದಾಗ ಯಾವ ‘ಟಿ-ಸ್ಕೋರ್’ ತೆಗೆಯಲಾಗುತ್ತದೆಯೋ, ಅವುಗಳಲ್ಲಿನ ನಿಷ್ಕರ್ಷ ತಪ್ಪಾಗಿರುವ ಪ್ರಮಾಣ ಹೆಚ್ಚಿರುತ್ತದೆ. ಅವುಗಳಲ್ಲಿ ಯಾವುದು ಸರಿ ಇದೆ ಮತ್ತು ಸರಿ ಇಲ್ಲ ಎಂದು ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ರಾತ್ರಿಯ ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ಉಪಹಾರವನ್ನು ಮಾಡುವುದು, ಇದು ಆಹಾರವಿಷದ ನಿರ್ಮಿತಿಗೆ ತುಂಬಾ ದೊಡ್ಡ ಕಾರಣವಾಗಿದೆ.

ಬಂಗಾಲದ ಒಂದು ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಾರಿನಲ್ಲಿ ಹಾವು ಪತ್ತೆ !

ಬಂಗಾಲದ ಬೀರಭೂಮ ಜಿಲ್ಲೆಯ ಮಯೂರೇಶ್ವರ ಪ್ರದೇಶದ ಒಂದು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಿದ ಬಳಿಕ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸಲಾಯಿತು.

ಮದ್ಯ ಸೇವನೆಯಿಂದ ೭ ರೀತಿಯ ಕರ್ಕ ರೋಗದ ಅಪಾಯ ! – ವಿಶ್ವ ಆರೋಗ್ಯ ಸಂಸ್ಥೆ

ಮದ್ಯ ಸೇವನೆಯಿಂದ ೭ ರೀತಿಯ ಕರ್ಕ ರೋಗದ ಅಪಾಯವಾಗುತ್ತದೆ, ಎಂದು ವಿಶ್ವ ಆರೋಗ್ಯ ಸಂಸ್ತೆಯ `ಲಾನ್ಸೆಟ್ ಸೆಟ್ ಪಬ್ಲಿಕ್ ಹೆಲ್ತ್’ ಈ ಮಾಸಿಕದಲ್ಲಿ ಎಚ್ಚರಿಕೆ ನೀಡಿದೆ. `ಮದ್ಯದ ಮೊದಲ ಹನಿಯಿಂದ ಕರ್ಕ ರೋಗದ ಅಪಾಯ ಆರಂಭವಾಗುತ್ತದೆ’, ಎಂದು ಕೂಡ ಸಂಘಟನೆ ಸ್ಪಷ್ಟಪಡಿಸಿದೆ.

ಶಾರೀರಿಕ ಆರೋಗ್ಯಕ್ಕಾಗಿ ವ್ಯಾಯಾಮ ಆವಶ್ಯಕ !

‘ಎರೊಬಿಕ್’ ವ್ಯಾಯಾಮಗಳಿಂದ ಮುಂತಾದ ಹೃದಯ ಮತ್ತು ಶ್ವಾಸಾಂಗ ವ್ಯೂಹದ ಲಾಭಕಾರಿ ವ್ಯಾಯಾಮಗಳಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಮತ್ತು ಮಾಂಸಕೋಶಗಳು ಬಲಿಷ್ಠವಾಗುತ್ತವೆ. ಆದುದರಿಂದ ಯೋಗ್ಯ ವಿಚಾರ ಮಾಡಿ ಸಮತೋಲ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡಿದರೆ ತೂಕ ಕಡಿಮೆಯಾಗುತ್ತದೆ.