ಮದ್ಯ ಸೇವನೆಯಿಂದ ೭ ರೀತಿಯ ಕರ್ಕ ರೋಗದ ಅಪಾಯ ! – ವಿಶ್ವ ಆರೋಗ್ಯ ಸಂಸ್ಥೆ

ಜೇನಿವಾ – ಮದ್ಯ ಸೇವನೆಯಿಂದ ೭ ರೀತಿಯ ಕರ್ಕ ರೋಗದ ಅಪಾಯವಾಗುತ್ತದೆ, ಎಂದು ವಿಶ್ವ ಆರೋಗ್ಯ ಸಂಸ್ತೆಯ `ಲಾನ್ಸೆಟ್ ಸೆಟ್ ಪಬ್ಲಿಕ್ ಹೆಲ್ತ್’ ಈ ಮಾಸಿಕದಲ್ಲಿ ಎಚ್ಚರಿಕೆ ನೀಡಿದೆ. `ಮದ್ಯದ ಮೊದಲ ಹನಿಯಿಂದ ಕರ್ಕ ರೋಗದ ಅಪಾಯ ಆರಂಭವಾಗುತ್ತದೆ’, ಎಂದು ಕೂಡ ಸಂಘಟನೆ ಸ್ಪಷ್ಟಪಡಿಸಿದೆ.

ಇದರಲ್ಲಿ, ಮದ್ಯ ಸೇವನೆಯಿಂದಾಗುವ ಕರ್ಕರೋಗದಿಂದ ಮುಖ, ಗಂಟಲು, ಯಕೃತ್ತು, ಅನ್ನಾನಾಳ, ಸ್ತನ, ದೊಡ್ಡ ಕರುಳು ಮುಂತಾದ ಕರ್ಕ ರೋಗದ ಸಮಾವೇಶವಿದೆ. ಮದ್ಯ ಶರೀರಕ್ಕೆ ಬಹಳ ಹಾನಿ ಮಾಡುತ್ತದೆ. ಯುರೋಪಿಯನ್ ದೇಶಗಳಲ್ಲಿ ಅಲ್ಕೋಹೋಲನ ಸೇವನೆಯಿಂದ ಕರ್ಕರೋಗದ ಪ್ರಮಾಣ ಹೆಚ್ಚಾಗಿದೆ. `ಅಲ್ಕೋಹೋಲ್’ ನಲ್ಲಿನ `ಇಥೇನಾಲ್’ ಈ ಘಟಕ ಜೈವಿಕ ಪ್ರಣಾಳಿಯ ಮೂಲಕ ಕರ್ಕ ರೋಗಕ್ಕೆ ಕಾರಣವಾಗುತ್ತದೆ. ಮದ್ಯ ಎಷ್ಟೇ ತುಟ್ಟಿ ಆಗಿದ್ದರೂ ಅಥವಾ ಎಷ್ಟೇ ಕಡಿಮೆ ಪ್ರಮಾಣದಲ್ಲಿ ಕುಡಿದರು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ನಮ್ಮ ದೇಶದಲ್ಲಿ ಮಾತ್ರ ಕಳೆದ ಅನೇಕ ದಶಕಗಳಿಂದ ಮದ್ಯವನ್ನು `ಸರಕಾರದಿಂದ ಮಾನ್ಯತೆ’ ಎಂದು ಮಾರಾಟ ಮಾಡಲಾಗುತ್ತದೆ ! ಸರಕಾರ ಈಗಲಾದರೂ ಮದ್ಯ ಮಾರಾಟ ನಿಷೇಧಿಸಿ ಜನರ ಹಿತ ಸಾಧಿಸುವರೇ ?