ಶಾರೀರಿಕ ಆರೋಗ್ಯಕ್ಕಾಗಿ ವ್ಯಾಯಾಮ ಆವಶ್ಯಕ !

ಶರೀರದ ಆರೋಗ್ಯಕ್ಕಾಗಿ ನಿಯಮಿತ ಮತ್ತು ಪ್ರತಿದಿನ ವ್ಯಾಯಾಮ ಮಾಡಬೇಕು. ಅದರೊಂದಿಗೆ ಸಮತೋಲನ ಆಹಾರ ತೆಗೆದುಕೊಳ್ಳುವುದು ಮತ್ತು ಅದನ್ನು ನಿಶ್ಚಿತ ಸಮಯಕ್ಕೆ ತೆಗೆದುಕೊಳ್ಳುವುದೂ ಆವಶ್ಯಕವಾಗಿದೆ. ಇದರಿಂದ ನಮಗೆ ಆವಶ್ಯಕವಿರುವಷ್ಟೇ ‘ಕ್ಯಾಲರೀಸ್’ ದೊರಕಿ ಹೃದ್ರೋಗ (ಹಾರ್ಟ್ ಪ್ರಾಬ್ಲಮ್) ಮತ್ತು ಸ್ಥೂಲಕಾಯ (Obesity) ಈ ಸಮಸ್ಯೆಗಳು ಉದ್ಭವಿಸುವುದಿಲ್ಲ. ತೂಕವನ್ನು ಕಡಿಮೆ ಮಾಡಲು ಕಡಿಮೆ ‘ಕ್ಯಾಲರೀಸ್’ ಮತ್ತು ಕಡಿಮೆ ಕೊಬ್ಬು ಇರುವ ಆಹಾರವನ್ನು ಸೇವಿಸುವುದು ಆವಶ್ಯಕವಾಗಿರುತ್ತದೆ. ಡೈಟಿಂಗ್ ಮಾಡುವುದೆಂದರೆ (ಪಥ್ಯದಲ್ಲಿರುವುದು) ಉಪವಾಸ ಮಾಡುವುದಲ್ಲ. ವ್ಯಾಯಾಮದೊಂದಿಗೆ ನಾವು ಯೋಗಾಸನಗಳನ್ನು ಮಾಡಿದರೆ ನಮ್ಮ ಶರೀರದಲ್ಲಿ ಶಕ್ತಿಯೊಂದಿಗೆ ರೋಗಗಳನ್ನು ಸಹಿಸಿಕೊಳ್ಳುವ ಕ್ಷಮತೆಯೂ (ಸ್ಟ್ಯಾಮಿನಾ) ಹೆಚ್ಚಾಗುತ್ತದೆ. ಶರೀರವು ಸುಂದರ ಮತ್ತು ಆಕರ್ಷಕವಾಗಬೇಕಿದ್ದರೆ ನಿಯಮಿತ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ.

೧. ಶರೀರದ ಆರೋಗ್ಯಕ್ಕಾಗಿ ಯಾವ ಕಾಳಜಿಗಳನ್ನು ವಹಿಸಬೇಕು ?

ಅ. ‘ಟೋಸ್ಟ್, ಸ್ಯಾಂಡವಿಚ್’ಗಳಿಗೆ ‘ಬಟರ್’ನ್ನು (ಬೆಣ್ಣೆಯನ್ನು) ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ‘ಬೆಣ್ಣೆ’ಯಿಂದ ಕೊಬ್ಬು (ಫ್ಯಾಟ್) ಹೆಚ್ಚಾಗುತ್ತದೆ.

ಆ. ಕೊಸಂಬರಿ ಅಥವಾ ‘ಸ್ಯಾಲಡ್’ ಮೇಲೆ ಹಾಲಿನ ಕೆನೆಯನ್ನು (ಕ್ರೀಮ್) ಹಾಕದೇ ನಿಂಬೆರಸವನ್ನು ಬಳಸಬೇಕು.

ಇ. ಉಪಹಾರಗೃಹಗಳಲ್ಲಿನ ಪದಾರ್ಥಗಳಲ್ಲಿ ಕೊಬ್ಬು (ಫ್ಯಾಟ್) ಹೆಚ್ಚಿರುತ್ತದೆ. ಆದುದರಿಂದ ಸಾಧ್ಯವಿದ್ದಷ್ಟು ಹೊರಗಿನ ಪದಾರ್ಥಗಳನ್ನು ತಿನ್ನಬಾರದು .

ಈ. ‘ಎರೊಬಿಕ್’ ವ್ಯಾಯಾಮಗಳಿಂದ (ಉದಾ. ನಡೆಯುವುದು, ಓಡುವುದು, ಈಜುವುದು) ಮುಂತಾದ ಹೃದಯ ಮತ್ತು ಶ್ವಾಸಾಂಗ ವ್ಯೂಹದ ಲಾಭಕಾರಿ ವ್ಯಾಯಾಮಗಳಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಮತ್ತು ಮಾಂಸಕೋಶಗಳು ಬಲಿಷ್ಠವಾಗುತ್ತವೆ. ಆದುದರಿಂದ ಯೋಗ್ಯ ವಿಚಾರ ಮಾಡಿ ಸಮತೋಲ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡಿದರೆ ತೂಕ ಕಡಿಮೆಯಾಗುತ್ತದೆ. ಈ ಕ್ರಿಯೆಗೆ ಬಹಳಷ್ಟು ದಿನಗಳು ಬೇಕಾಗುತ್ತವೆ; ಆದರೆ ನಮ್ಮ ಶರೀರಕ್ಕೆ ಯೋಗ್ಯ ಆಕಾರ ಸಿಗುತ್ತದೆ.

೨. ಹಲ್ಲುಗಳಿಗೆ ಮನೆಯಲ್ಲಿಯೇ ಮಾಡಬೇಕಾದ ಉಪಾಯಗಳು

ಹಲ್ಲುಗಳ ಕಾಳಜಿ ವಹಿಸುವುದು ಮಹತ್ವದ್ದಾಗಿದೆ. ಹಲ್ಲುಗಳ ಆರೋಗ್ಯ ಚೆನ್ನಾಗಿರಲು ದುಬಾರಿ ದಂತವೈದ್ಯರ ಆವಶ್ಯಕತೆ ಇರುವುದಿಲ್ಲ. ನಾವು ಕೆಲವು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಹಲ್ಲುಗಳ ಆರೋಗ್ಯವನ್ನು ಕಾಪಾಡಬಹುದು. ಲಂಡನ್‌ನ ಒಂದು ಜಾಲತಾಣದಲ್ಲಿ ಪ್ರಶಸ್ತಿ ಪಡೆದ ದಂತವೈದ್ಯರೊಬ್ಬರು ಹಲ್ಲುಗಳ ಆರೋಗ್ಯಕ್ಕಾಗಿ ಮುಂದಿನ ಸುಲಭ ಉಪಾಯಗಳನ್ನು ಹೇಳಿದ್ದಾರೆ.

ಅ. ಹಲ್ಲುಗಳನ್ನು ಪ್ರತಿದಿನ ‘ಬ್ರಶ್’ನಿಂದ ಸ್ವಚ್ಛ ಮಾಡಬೇಕು.

ಆ. ಪ್ರತಿದಿನ ಸೇವಿಸುವ ಸಕ್ಕರೆಯ ಪ್ರಮಾಣ ಕಡಿಮೆ ಮಾಡಬೇಕು.

ಇ. ‘ಹಲ್ಲುಜ್ಜುವ ಬ್ರಶ್’ನ ‘ಕೂದಲುಗಳು’ (ಬ್ರೀಸಲ್ಸ) ಚೆನ್ನಾಗಿರುವವರೆಗೆ ಆ ಬ್ರಶ್‌ನ್ನು ಬಳಸಬೇಕು, ಅನಂತರ ಹೊಸ ಬ್ರಶ್‌ನ್ನು ಉಪಯೋಗಿಸಬೇಕು.

ಈ. ದಿನದಲ್ಲಿ ೨ ಸಲ ‘ಬ್ರಶ್’ನಿಂದ ಹಲ್ಲುಗಳನ್ನು ಸ್ವಚ್ಛವಾಗಿ ಉಜ್ಜಬೇಕು. ಏನಾದರೂ ತಿಂದ ತಕ್ಷಣ ಹಲ್ಲುಗಳನ್ನು ಉಜ್ಜಬಾರದು.

ಉ. ಹಲ್ಲುಗಳಿಗೆ ಹೊಳಪು ಬರಲು ಟೂಥಪೆಸ್ಟ್’ನ ಬಳಕೆಯೊಂದಿಗೆ ಆವಶ್ಯಕವಿದ್ದರೆ ‘ವೈಟನರ್’ನ್ನು ಬಳಸಬೇಕು.

ಊ. ಸಿಗರೇಟ್ ಸೇದುವುದು ಅಥವಾ ಸರಾಯಿ ಕುಡಿಯುವುದು ಮಾಡಬಾರದು.

ಎ. ಹಲ್ಲುಗಳ ಯಾವುದೇ ತೊಂದರೆಯನ್ನು ದುರ್ಲಕ್ಷ ಮಾಡಬಾರದು.

– ಶ್ರೀ. ಯತಿನ ಠಾಕೂರ, ಪನವೇಲ. (ಆಧಾರ : ‘ಶ್ರೀಪೂರ್ಣಾನಂದ ವೈಭವ’, ಮಾಘಿ ಗಣೇಶೋತ್ಸವ ೨೦೧೪)