ಬಾಯಿ ಹುಣ್ಣು
‘ಜಾಜಿ, ಮಾವು, ಔದುಂಬರ ಮತ್ತು ಪೇರಲೆ’ ಇವುಗಳಲ್ಲಿ ಯಾವುದೇ ಮರದ ೧-೨ ಎಲೆಗಳನ್ನು ದಿನಕ್ಕೆ ೩-೪ ಬಾರಿ ಕಚ್ಚಿ ಕಚ್ಚಿ ೨ ನಿಮಿಷಗಳ ವರೆಗೆ ಬಾಯಿಯಲ್ಲಿಟ್ಟುಕೊಂಡು ಅನಂತರ ಉಗುಳಬೇಕು. ಇದರಿಂದ ಬಾಯಿಹುಣ್ಣು ಒಂದೇ ದಿನದಲ್ಲಿ ಗುಣಮುಖವಾಗುತ್ತದೆ. ಈ ಮರಗಳು ತಮ್ಮ ಪರಿಸರದಲ್ಲಿ ಇಲ್ಲದಿದ್ದರೆ ಸಾಧ್ಯವಿದ್ದರೆ ಅವುಗಳನ್ನು ಬೆಳೆಸಬೇಕು.’
ಸ್ನಾನಕ್ಕಾಗಿ ಔಷಧಿಯುಕ್ತ ನೀರು !
‘ಜ್ವರ, ಮೈಕೈನೋವು, ಚರ್ಮರೋಗ, ಹಾಗೆಯೇ ಯಾವುದೇ ದೊಡ್ಡ ರೋಗಗಳಿಂದ ಬಂದಿರುವ ದಣಿವಿಗೆ ಆಡುಸೋಗೆ, ಬೇವಿನಸೊಪ್ಪು, ನೆಕ್ಕಿ ಇವುಗಳಲ್ಲಿ ಯಾವುದಾದರೊಂದು ವನಸ್ಪತಿಯ ಮುಷ್ಟಿಯಷ್ಟು ಎಲೆಗಳನ್ನು ಸ್ನಾನದ ಬಿಸಿನೀರಿನಲ್ಲಿ ಹಾಕಿ ಸ್ನಾನವನ್ನು ಮಾಡಬೇಕು. ಸಾಧ್ಯವಾದರೆ ಸ್ನಾನಕ್ಕಾಗಿ ನೀರು ಕಾಯಿಸುವಾಗಲೇ ಅದರಲ್ಲಿ ಎಲೆಗಳನ್ನು ಹಾಕಬೇಕು. ಒಂದು ಸಮಯಕ್ಕೆ ಒಂದೇ ವನಸ್ಪತಿಯ ಎಲೆಗಳನ್ನು ಹಾಕಬೇಕು. ಈ ಎಲೆಗಳು ಸಿಗಲು ಈ ವನಸ್ಪತಿಗಳನ್ನು ತಮ್ಮ ಮನೆಯ ಪರಿಸರದಲ್ಲಿ ತೋಟಗಾರಿಕೆ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೧.೨೦೨೩)