ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ವಿಶೇಷವಾಗಿ ರಾತ್ರಿಯ ಆಹಾರವು ಜೀರ್ಣವಾಗದಿರುವಾಗ ಬೆಳಗ್ಗೆ ತಿನ್ನುವುದರಿಂದ ಅನೇಕ ರೋಗಗಳಾಗುತ್ತವೆ’, ಎಂದು ಚರಕ ಮಹರ್ಷಿಗಳು ಹೇಳುವುದು

‘ಚರಕಸಂಹಿತಾ, ಚಿಕಿತ್ಸಾಸ್ಥಾನ, ಅಧ್ಯಾಯ ೧೫, ಶ್ಲೋಕ ೪೬ ರಿಂದ ೪೯ ಇವುಗಳಲ್ಲಿ, ‘ಮೊದಲನೇ ಆಹಾರವು ಸಂಪೂರ್ಣವಾಗಿ ಜೀರ್ಣವಾಗದಿರುವಾಗ ಅದರ ಮೇಲೆ ಬೇರೆ ಆಹಾರವನ್ನು ಸೇವಿಸುವುದರಿಂದ ಮಹಾ ಭಯಂಕರ ‘ಆಹಾರವಿಷ’ ತಯಾರಾಗುತ್ತದೆ. ‘ಆಹಾರವಿಷ’ ಎಂದರೆ ‘ಆಹಾರವೇ ವಿಷಕ್ಕೆ ಸಮಾನವಾಗುವುದು’, ವಾತ. ಪಿತ್ತ ಮತ್ತು ಕಫ ಇವುಗಳಿಗೆ ಆಯುರ್ವೇದದಲ್ಲಿ ‘ದೋಷ’ ಎಂದು ಕರೆಯುತ್ತಾರೆ. ಈ ಆಹಾರವಿಷವು ವಾತ, ಪಿತ್ತ ಮತ್ತು ಕಫ ಈ ದೋಷಗಳೊಂದಿಗೆ ಸೇರುತ್ತದೆ ಮತ್ತು ಶರೀರದಲ್ಲಿ ಆಯಾ ದೋಷಗಳ ರೋಗಗಳು ನಿರ್ಮಾಣವಾಗುತ್ತವೆ. ಈ ಆಹಾರ ವಿಷವು ಮೂತ್ರಮಾರ್ಗದಿಂದ ಹೋದರೆ ಮೂತ್ರಗಲ್ಲಿನಂತಹ ಮೂತ್ರಮಾರ್ಗದಲ್ಲಿನ ರೋಗಗಳನ್ನು ಉತ್ಪನ್ನ ಮಾಡುತ್ತದೆ ಅಥವಾ ಕರುಳುಗಳಲ್ಲಿ ಹೋದರೆ ಮಲಬದ್ಧತೆಯಂತಹ ರೋಗಗಳಾಗುತ್ತವೆ.’ ಒಟ್ಟು ಆಹಾರವಿಷದಿಂದ ಉಂಟಾಗುವ ರೋಗಗಳ ಪಟ್ಟಿಯು ತುಂಬಾ ದೊಡ್ಡದಿದೆ. ಆದುದರಿಂದ ಸುಮಾರು ಎಲ್ಲ ರೋಗಗಳೇ ಆಹಾರವಿಷದಿಂದ ನಿರ್ಮಾಣವಾಗುತ್ತವೆ, ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವೈದ್ಯ ಮೇಘರಾಜ ಮಾಧವ ಪರಾಡಕರ

ಅನೇಕ ಬಾರಿ ಆಹಾರವಿಷವು ಮಂದ ವಿಷದಂತೆ (‘ಸ್ಲೋ ಪೈಜನ್’) ಕಾರ್ಯ ಮಾಡುತ್ತದೆ. ಆದ್ದರಿಂದ ‘ಅದು ರೋಗಗಳ ಕಾರಣ ಇರಬಹುದು’, ಎಂಬ ಸಂದೇಹ ಬರುವುದಿಲ್ಲ. ಇಂದಿನ ಕಾಲದಲ್ಲಿ ನಮಗೆ ಮಧುಮೇಹ, ಉಚ್ಚ ರಕ್ತದೊತ್ತಡಗಳಂತಹ ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗುವ ರೋಗಗಳಿರುತ್ತವೆಯೋ, ಅವುಗಳು ಒಂದೇ ರಾತ್ರಿಯಲ್ಲಿ ನಿರ್ಮಾಣವಾಗಿರುವುದಿಲ್ಲ. ಬಹಳ ವರ್ಷಗಳಿಂದ ಆಹಾರ ಮತ್ತು ವಿಹಾರ (ಶಾರೀರಿಕ ಕೃತಿಗಳು) ಇವುಗಳ ಸಂದರ್ಭದಲ್ಲಿನ ತಪ್ಪುಗಳು ಆಗುತ್ತಿರುತ್ತವೆಯೋ, ಆಗ ಈ ವಿಕಾರಗಳು ನಿರ್ಮಾಣವಾಗುತ್ತವೆ. ಆಹಾರವಿಷವು ರೋಗಗಳಿಗೆ ಕಾರಣವಾಗುತ್ತದೆ. ರಾತ್ರಿಯ ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ಉಪಹಾರವನ್ನು ಮಾಡುವುದು, ಇದು ಆಹಾರವಿಷದ ನಿರ್ಮಿತಿಗೆ ತುಂಬಾ ದೊಡ್ಡ ಕಾರಣವಾಗಿದೆ. ಚರಕ, ಸುಶ್ರುತ, ವಾಗಭಟ್ಟರು ಇತ್ಯಾದಿ ಎಲ್ಲ ಆಯುರ್ವೇದ ಮಹರ್ಷಿಗಳು ‘ಅಜೀರ್ಣಭೋಜನ (ಒಂದು ಆಹಾರ ವಿಶೇಷವಾಗಿ ರಾತ್ರಿಯ ಆಹಾರ) ಜೀರ್ಣವಾಗದಿರುವಾಗ ಬೇರೆ ಆಹಾರವನ್ನು ಸೇವಿಸಬೇಡಿರಿ’, ಎಂದು ಮೇಲಿಂದ ಮೇಲೆ ಹೇಳಿದ್ದಾರೆ. ಆದ್ದರಿಂದ ಮಧುಮೇಹ, ಉಚ್ಚ ರಕ್ತದೊತ್ತಡ ಇತ್ಯಾದಿಗಳು ಆದನಂತರ ಜೀವನವೆಲ್ಲ ಅಲೋಪಥಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಅಂತಹ ರೋಗಗಳಾಗಲೇಬಾರದು ಎಂದು ಬೆಳಗಿನ ಉಪಹಾರವನ್ನು ಬಿಟ್ಟು ಆ ಸಮಯದಲ್ಲಿ ವ್ಯಾಯಾಮವನ್ನು ಮಾಡುವುದು ಜಾಣತನವಲ್ಲವೇ ?’

ಆರೋಗ್ಯಪ್ರಾಪ್ತಿಗಾಗಿ ಪ್ರಯತ್ನಿಸುವ ಸಾಧಕರೇ, ತಾಳ್ಮೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ! 

‘ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಕ್ಕೆ ಬರುವ ಬಹಳಷ್ಟು ಜನರಿಗೆ ಊಟದ ಪದಾರ್ಥಗಳ ಕಡೆಗೆಯೇ ಹೆಚ್ಚು ಗಮನವಿರುತ್ತದೆ. ದುರ್ದೈವದಿಂದ ಆಧುನಿಕತೆಯ ಹೆಸರಿನಲ್ಲಿ ‘ಚೈನೀಸ್’, ‘ಮೈನೀಜ್’ (ಒಂದು ಆಧುನಿಕ ಪದಾರ್ಥಗಳ ಹೆಸರುಗಳು), ‘ಮಂಚ್ಯೂರಿಯನ್’ ಇತ್ಯಾದಿ ಆಹಾರಪದಾರ್ಥಗಳ ಹಾನಿಕರ ವಿಧಗಳು ಸಮಾರಂಭಗಳಲ್ಲಿ ನೋಡಲು ಸಿಗುತ್ತವೆ ಮತ್ತು ಬರುವ ಜನರು ಅವುಗಳನ್ನು ಸವಿಯುತ್ತಿರುವುದು ಕಂಡುಬರುತ್ತದೆ. ‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಈ ಲೇಖನಮಾಲೆಯನ್ನು ಓದಿ ಅನೇಕರು ಆರೋಗ್ಯಪ್ರಾಪ್ತಿಗಾಗಿ ನಿಯಮಿತವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನಗಳಲ್ಲಿ ಸಾತತ್ಯವಿಡುವುದು ತುಂಬಾ ಮಹತ್ವದ್ದಾಗಿದೆ. ಮದುವೆ ಸಮಾರಂಭಗಳ ಊಟವನ್ನು ನೋಡಿದಾಗ ಮೋಹವಾಗಿ ಅತಿಯಾಗಿ ತಿನ್ನುವ ಪ್ರಯತ್ನಗಳಲ್ಲಿ ಸಾತತ್ಯ ಇರುವುದಿಲ್ಲ. ಹಾಗೆ ಆಗಬಾರದೆಂದು ನಾಲಿಗೆಯ ಮೇಲೆ ನಿಯಂತ್ರಣ ಇಡುವುದು ಆವಶ್ಯಕವಾಗಿರುತ್ತದೆ. ಇಂತಹ ಸಮಾರಂಭಗಳು ನಮ್ಮ ತಾಳ್ಮೆಯ ಪರೀಕ್ಷೆಯಾಗಿರುತ್ತದೆ ಮತ್ತು ನಾವು ಅದರಲ್ಲಿ ಉತ್ತೀರ್ಣರಾಗಬೇಕು.

ವ್ಯಾಯಾಮವು ‘ಮುಗಿಸುವ ಕೆಲಸ’ವಾಗದೇ ಅದು ‘ಆಸಕ್ತಿಯಿಂದ ಮಾಡುವ ನಿತ್ಯಕರ್ಮ’ವಾಗಬೇಕು !

‘ನೀವು ಪ್ರತಿದಿನ ವ್ಯಾಯಾಮವನ್ನು ಮಾಡುತ್ತೀರಾ ?’, ಎಂದು ಕೇಳಿದಾಗ ಅನೇಕರು, ‘ನಾವು ೩೦ ನಿಮಿಷಗಳಷ್ಟು ನಡೆಯುತ್ತೇವೆ. ೧೫ ನಿಮಿಷಗಳ ವರೆಗೆ ಪ್ರಾಣಾಯಾಮ ಇತ್ಯಾದಿಗಳನ್ನು ಮಾಡುತ್ತೇವೆ’, ಎಂದು ಹೇಳುತ್ತಾರೆ. ಆದರೆ ‘ವ್ಯಾಯಾಮದ ಫಲನಿಷ್ಪತ್ತಿಯ ಬಗ್ಗೆ ಅಧ್ಯಯನ ಮಾಡುತ್ತೀರಾ ? ಎಂದು ಕೇಳಿದಾಗ ಅವರಲ್ಲಿ ಅದಕ್ಕೆ ಯಾವುದೇ ಉತ್ತರವಿರುವುದಿಲ್ಲ. ಅವರು ಕೇವಲ ಕರ್ಮಕಾಂಡವೆಂದು ವ್ಯಾಯಾಮವನ್ನು ಮಾಡಿ ಮುಗಿಸುತ್ತಾರೆ. ‘ವ್ಯಾಯಾಮವನ್ನು ಮಾಡುವಾಗ ತನ್ನ ಶರೀರದ ಕಾರ್ಯಕ್ಷಮತೆಯು ಮೊದಲಿಗಿಂತ ಹೆಚ್ಚಾಗಿದೆಯೇ, ಎಂಬುದರ ಕಡೆಗೆ ನಿರ್ದಿಷ್ಟ ಅವಧಿಯಲ್ಲಿ ಗಮನಿಸಬೇಕು. ಇದಕ್ಕಾಗಿ ವ್ಯಾಯಾಮದ ಪ್ರಮಾಣವನ್ನು ಸ್ವಲ್ಪ ಸ್ವಲ್ಪ ಹೆಚ್ಚಿಸಿ ನೋಡಬೇಕು, ಉದಾ. ಪ್ರತಿದಿನ ೪ ಸೂರ್ಯ ನಮಸ್ಕಾರಗಳನ್ನು ಮಾಡಿದ ನಂತರ ನಮಗೆ ದಣಿವಾಗದಿದ್ದರೆ, ‘ಒಂದು ವಾರದಲ್ಲಿ ೪ ಕ್ಕಿಂತ ೬ ಸೂರ್ಯನಮಸ್ಕಾರಗಳನ್ನು ಮಾಡಲು ಸಾಧ್ಯವಾಗುತ್ತದೆಯೇ ? ಎಂಬುದನ್ನು ಪರಿಶೀಲಿಸಬೇಕು. ‘೫೦೦ ಗ್ರಾಮ್ ಭಾರವಿರುವ ‘ಡೆಂಬಲ್ಸ್’ನ್ನು ಹಿಡಿದು ವ್ಯಾಯಾಮವನ್ನು ಮಾಡುತ್ತಿದ್ದರೆ, ವಾರದಲ್ಲಿ ೭೦೦ ಗ್ರ್ಯಾಮ್ ಭಾರವಿರುವ ‘ಡೆಂಬಲ್ಸ್’ನ್ನು ಹಿಡಿದು ವ್ಯಾಯಾಮವನ್ನು ಮಾಡಬಹುದೇ ? ಎಂಬ ಅಧ್ಯಯನವನ್ನು ಮಾಡಬೇಕು. ವ್ಯಾಯಾಮವು ‘ಮುಗಿಸುವ ಕೆಲಸ’ವಾಗದೇ ಅದು ‘ಆಸಕ್ತಿಯಿಂದ ಮಾಡುವ ನಿತ್ಯಕರ್ಮ’ವಾಗಬೇಕು.

ಯೋಗ್ಯ ಸಮಯದಲ್ಲಿ ಎಚ್ಚರಿಕೆಯಿಂದಿದ್ದು ಪ್ರತಿದಿನ ದಿನಚರಿಯಲ್ಲಾಗುವ ತಪ್ಪುಗಳನ್ನು ತಡೆಯಿರಿ !

‘ಆಯುರ್ವೇದಕ್ಕನುಸಾರ ೨ ರೀತಿಯ ರೋಗಗಳಿವೆ – ‘ನಿಜ’ ಮತ್ತು ‘ಆಗಂತುಕ’. ಶರೀರದಲ್ಲಿನ ವಾತ, ಪಿತ್ತ ಮತ್ತು ಕಫ ಇವುಗಳಿಗೆ ‘ತ್ರಿದೋಷ’ಗಳು ಎನ್ನುತ್ತಾರೆ. ಅವುಗಳಲ್ಲಿ ಅಸಮತೋಲನ ಆಗುವುದದರಿಂದ ಆಗುವ ರೋಗಗಳಿಗೆ ‘ನಿಜ’ ರೋಗಗಳು ಎನ್ನುತ್ತಾರೆ. ‘ಆಗಂತುಕ’ ಎಂದರೆ ಅಪಘಾತವಾಗುವುದು, ವಿಷಬಾಧೆ, ಬೀಳುವುದು ಇತ್ಯಾದಿ ಬಾಹ್ಯ ಕಾರಣಗಳಿಂದಾಗುವ ರೋಗಗಳು, ಉದಾ. ಅಸ್ಥಿಭಂಗ (ಫ್ಯಾಕ್ಚರ್). ಆಗಂತುಕವನ್ನು ಬಿಟ್ಟು ಇತರ ಎಲ್ಲ ರೋಗಗಳು ‘ನಿಜ’ ಈ ಪ್ರಕಾರದಲ್ಲಿ ಬರುತ್ತವೆ. ತಮ್ಮ ದಿನಚರಿಯಲ್ಲಿನ ತಪ್ಪುಗಳು ನಿಜ ರೋಗಗಳಿಗೆ ಏಕೈಕ ಕಾರಣವಾಗಿದೆ. ಹೆಚ್ಚಿನ ಜನರಿಂದ ಸತತವಾಗಿ ಆಗುವ ತಪ್ಪುಗಳು ಮುಂದಿನಂತಿರುತ್ತವೆ.

೧. ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು, ಹಾಗೆಯೇ ಮಧ್ಯಾಹ್ನ ಮಲಗುವುದು

೨. ಬಿಸಿಲಿನಲ್ಲಿ ಹೋಗದಿರುವುದು

೩. ವ್ಯಾಯಾಮವನ್ನು ಮಾಡದಿರುವುದು

೪. ದಿನದಲ್ಲಿ ೪ ಬಾರಿ ತಿನ್ನುವುದು, ಜೀರ್ಣಿಸಿಕೊಳ್ಳುವ ಕ್ಷಮತೆ ಇಲ್ಲದಿರುವಾಗ ಪೌಷ್ಟಿಕ ಪದಾರ್ಥಗಳನ್ನು ತಿನ್ನುವುದು, ಮೈದಾದ ಪದಾರ್ಥಗಳನ್ನು ತಿನ್ನುವುದು, ಹಾಗೆಯೇ ಎಣ್ಣೆಯುಕ್ತ, ಖಾರ ಮತ್ತು ಪದಾರ್ಥಗಳು ಚೆನ್ನಾಗಿ ಉಳಿಯಬೇಕೆಂದು ಕೃತಕ ರಸಾಯನಿಕಗಳನ್ನು ಹಾಕಿದ ಪದಾರ್ಥಗಳನ್ನು ತಿನ್ನುವುದು

೫. ದಿನಪೂರ್ತಿ ಕುಳಿತುಕೊಂಡಿರುವುದು, ಹಾಗೆಯೇ ನೇರವಾಗಿ ಕುಳಿತುಕೊಳ್ಳದೇ ಅಂಕುಡೊಂಕಾಗಿ  ಕುಳಿತುಕೊಳ್ಳುವುದು

೬. ಮಾನಸಿಕ ಒತ್ತಡವನ್ನು ಮಾಡಿಕೊಳ್ಳುವುದು

ನೀರಿನ ತೊಟ್ಟಿಯ ಬುಡದಲ್ಲಿ ತೂತಿರುವಾಗ ಅದರಲ್ಲಿ ನೀರು ತುಂಬಲು ಎಷ್ಟು ಪ್ರಯತ್ನಿಸಿದರೂ, ತೊಟ್ಟಿಯು ತುಂಬುವುದಿಲ್ಲ. ಅದೇ ರೀತಿ ಈ ಮೇಲಿನ ಕಾರಣಗಳು ನಡೆಯುತ್ತಿರುವಾಗ ರೋಗಗಳಿಗೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ, ಯಾವುದೇ ರೋಗಗಳು ವಾಸಿಯಾಗುವುದಿಲ್ಲ. ಆರೋಗ್ಯ ಉತ್ತಮವಾಗಿರಬೇಕಾದರೆ, ಯೋಗ್ಯ ಸಮಯದಲ್ಲಿ ಎಚ್ಚರಿಕೆಯಿಂದಿದ್ದು ದಿನಚರಿಯಲ್ಲಿನ ತಪ್ಪುಗಳನ್ನು ತಡೆಯಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೧೨.೨೦೨೨)